ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ಸಹಿಸುವುದಿಲ್ಲ: ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಿಲ್ಲ- ಡಾ.ಶರಣ ಪ್ರಕಾಶ್ ಪಾಟೀಲ್. ಜಯ ಧ್ವಜ ನ್ಯೂಸ್, ರಾಯಚೂರು, ಜ.26- ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲವೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಅವರಿಂದು ಗಣರಾಜ್ಯೋತ್ಸವ ಧ್ವಜಾರೋಹಣ ನಂತರ ಸುದ್ದಿಗಾರರರೊಂದಿಗೆ ಮಾತನಾಡಿ ಅಕ್ರಮ ಮರಳುಗಾರಿಕೆ, ಮಟ್ಕಾ, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲವೆಂದ ಅವರು ಈಗಾಗಲೆ 67 ಅಕ್ರಮ ಮರಳು ಪ್ರಕರಣ ದಾಖಲಾಗಿದೆ ಅಲ್ಲದೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು. ದೇವದುರ್ಗ ಶಾಸಕರ ಮೇಲೆ ಬೆದರಿಕೆ ಹಾಕಿದವರ ಮೇಲೆ ಕಾನೂನು ರೀತಿಯ ಕ್ರಮ ನಿಶ್ಚಿತವಾಗಿ ಪೊಲೀಸರು ತೆಗೆದುಕೊಳ್ಳುವಂತೆ ಸೂಚಿಸುತ್ತೇನೆಂದರು. ಆರ್ ಟಿ ಪಿ ಎಸ್ ನಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಪ್ರತಿಕ್ರಯಿಸಿದ ಅವರು ರಾಜ್ಯ ಸರ್ಕಾರ ಸ್ಥಾವರ ಸ್ಥಾಪನೆಗೆ ಅವಕಾಶ ನೀಡಿಲ್ಲವೆಂದರು. ಏಮ್ಸ್ ಸ್ಥಾಪನೆಗೆ ಸಿಎಂ ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಏಮ್ಸ್ ಸ್ಥಾಪನೆಗೆ ಸರ್ಕಾರ ಬಧ್ಧವಾಗಿದೆ ಎಂದರು.
ನಗರದಲ್ಲಿ ರಸ್ತೆಗಳು ಹದಗೆಟ್ಟಿರುವುದು ಗಮನಕ್ಕಿದ್ದು ರಸ್ತೆ ದುರಸ್ತಿಗೆ ಸೂಚಿಸುವುದಾಗಿ ತಿಳಿಸಿದರು. ರಾಜ್ಯ ಪಾಲರು ಜಂಟಿ ಅಧಿವೇಶನದಲ್ಲಿ ನಡೆದ ಗದ್ದಲ ದುರದೃಷ್ಟಕರವೆಂದ ಅವರು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದಂತೆ ಸಂವಿಧಾನದ ಆಶಯಕ್ಕೆ ಬದ್ಧರಾಗಿ ರಾಜ್ಯಪಾಲರ ನಡೆಯಿರ ಬೇಕೆಂಬುದು ನಮ್ಮ ನಿಲುವು ಎಂದರು. ನರೇಗಾ ಯೋಜನೆ ರದ್ದು ಜನ ವಿರೋಧಿಯಾಗಿದ್ದು ನರೇಗಾ ಮರು ಸ್ಥಾಪನೆಗೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ದದ್ದಲ್ ಬಸನಗೌಡ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್ , ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಪವನ್ ಪಾಟೀಲ್, ಜಿಲ್ಲಾಧಿಕಾರಿ ನಿತೀಶ್ .ಕೆ, ಎಸ್ಪಿ ಅರುಣಾಂಕ್ಷುಗಿರಿ, ಜಿ.ಪಂ.ಸಿಇಓ ಈಶ್ವರ ಕುಮಾರ್ ಕಾಂದೂ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಇನ್ನಿತರರು ಇದ್ದರು.


Comments
Post a Comment