Posts

Showing posts from June, 2026
Image
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಕೆ.                                                      ಜಯ ಧ್ವಜ ನ್ಯೂಸ್ ,ರಾಯಚೂರು, ಜೂ.29- ರಾಜ್ಯಸಭೆಯ ಸದಸ್ಯರಾಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ  ಗೌರವಾನ್ವಿತ  ಮಲ್ಲಿಕಾರ್ಜುನ ಖರ್ಗೆಅವರಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು . ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ರಾಷ್ಟ್ರ ಸೇವೆಯಲ್ಲಿ ನಿರಂತರ ಯಶಸ್ಸನ್ನು ಲಭಿಸಲಿ ಎಂದು ಹಾರೈಸಲಾಯಿತು.  ಸುಮಾರು ಐದು ದಶಕಗಳಿಂದ ಖರ್ಗೆ ಅವರು ಸಾರ್ವಜನಿಕ ಸೇವೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಸಮರ್ಪಿತ ತಳಮಟ್ಟದ ಕಾರ್ಯಕರ್ತನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ವರೆಗೆ ಅವರ ಪ್ರಯಾಣವು ಪರಿಶ್ರಮ, ಸಮಗ್ರತೆ ಮತ್ತು ದೃಢ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ಅವರ ಅಪಾರ ಅನುಭವ ಮತ್ತು ತತ್ವಬದ್ಧ ದೃಷ್ಟಿಕೋನವು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಮತ್ತು ಭಾರತದ ಪ್ರಜಾಪ್ರಭುತ್ವದ ರಚನೆಯನ್ನು ಶ್ರೀಮಂತಗೊಳಿಸಲು ಅವರ ಸೇವೆ ಅತ್ಯಗತ್ಯವಾಗಿದ್ದನ್ನು ತಿಳಿಸಿದರು. ಈ ಸಂದರ್ಭದಲ್ಲಿ  ರಾಯಚೂರು ಜಿಲ್ಲಾ ಪ್ರಕೃತಿ ವಿಕೋಪ ನಿರ...
Image
  ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್  ರಾಯಚೂರು ಬೆಳ್ಳಿ ಮಹೋತ್ಸವ :      ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯ ವಿಜೇತರ ಹೆಸರು ಪ್ರಕಟ- ವಿಜಯ್ ಜಾಗಟಗಲ್ ಜಯ ಧ್ವಜ ನ್ಯೂಸ್, ರಾಯಚೂರು, ಜೂ. 29- ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್  ರಾಯಚೂರು ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪತ್ರಕರ್ತರ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯ ವಿಜೇತರ ಹೆಸರುಗಳನ್ನು ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಪ್ರಕಟಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ  ಚಿತ್ರದುರ್ಗದ ಪ್ರಜಾವಾಣಿಯ ಸಹಾಯಕ ವರದಿಗಾರರಾಗಿರುವ ಕೆ.ಪಿ.ಓಂಕಾರಮೂರ್ತಿ ಅವರ “ಡೆಡ್‌ಲೈನ್” ಕಥೆಗೆ ಮೊದಲ ಸ್ಥಾನ. ದಿ ಟೈಮ್ಸ್  ಆಫ್ ಇಂಡಿಯಾ ಪತ್ರಿಕೆ ಮೈಸೂರು ವಿಶೇಷ ವರದಿಗಾರರಾದ ಶ್ರೀನಿವಾಸ ಎಂ ಅವರ “ನಿಧನ ವಾರ್ತೆ” ಕಥೆಗೆ ದ್ವಿತೀಯ ಸ್ಥಾನ. ಉದಯವಾಣಿ ಪತ್ರಿಕೆಯ ರಾಯಚೂರು ಹಿರಿಯ ಜಿಲ್ಲಾ ವರದಿಗಾರರಾದ ಸಿದ್ದಯ್ಯಸ್ವಾಮಿ ಕುಕನೂರು ಅವರ “ಪ್ರೆಸಿಡೆಂಟ್ ಶಂಕ್ರ” ಕಥೆಗೆ ತೃತೀಯ ಸ್ಥಾನ ಲಭಿಸಿದೆ ಎಂದರು.   ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳಲ್ಲಿ ಪ್ರಜಾವಾಣಿಯ ರಾಯಚೂರು ಜಿಲ್ಲೆಯ ಮುದಗಲ್ ವರದಿಗಾರರಾದ ಡಾ.ಶರಣಪ್ಪ ಆನಾಹೊಸೂರು ಅವರ “ ನಮ್ಮ ಹುಡ್ರು” ಕಥೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ರಾಯಚೂರು ಜಿಲ್ಲಾ ವರದಿಗಾರರಾದ ಬಸವ...
Image
ವಾರ್ಡ್ ನಂ. 13 ರಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ:                  ಉಮಾ ರವೀಂದ್ರ ಜಲ್ದಾರ್ ಜನಪರ ಕಾಳಜಿ ಸ್ತುತ್ಯಾರ್ಹ-ಡಾ.ಶಿವರಾಜ ಪಾಟೀಲ್                                            ಜಯ ಧ್ವಜ ನ್ಯೂಸ್ , ರಾಯಚೂರು, ಜೂ.28- ನಗರದ  ವಾರ್ಡ್ ನಂ 13 ರ ಧನಲಕ್ಷ್ಮಿ ಬಡಾವಣೆಯಲ್ಲಿ ಇರುವ ಶ್ರೀ ಮಾತೆ ಮರುಗೆಮ್ಮ ದೇವಸ್ಥಾನದಲ್ಲಿ ರಾಯಚೂರು ಮಹಾನಗರ ಪಾಲಿಕೆಯ 14ಲಕ್ಷ ರೂ ಎಸ್ ಎಸ್ ಸಿ  ಅನುದಾನದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ  ಹಾಗೂ 25 ಲಕ್ಷ ರೂ ಅನುದಾನದಲ್ಲಿ ಶ್ರೀ ಮಾತೆ ಮರುಗೆಮ್ಮ ದೇವಸ್ಥಾನದಲ್ಲಿ ಸಮುದಾಯ ಭವನದ ಶೇಡ್ ನಿರ್ಮಾಣ ಹಾಗೂ 50 ಲಕ್ಷದ ಕೆಕೆಆರ್ ಡಿಬಿ ಅನುದಾನದಲ್ಲಿ ಮತ್ತು ಕೆ ಆರ್ ಡಿ ಎಲ್ ಅನುದಾನದಲ್ಲಿ  ಸಿಸಿ ರಸ್ತೆ ಹಾಗೂ ಪೇವರ್ ಬ್ಲಾಕ್  ನಿರ್ಮಾಣ ಕಾಮಗಾರಿಗಳಿಗೆ ಇಂದು ನಗರ ಶಾಸಕರಾದ ಡಾ. ಎಸ್. ಶಿವರಾಜ್ ಪಾಟೀಲ್ ರವರು ಕಾಮಗಾರಿಗಳಿಗೆ ಚಾಲನೆ ನೀಡಿ, ಬಡಾವಣೆಯ ಜನರ ಮುಂದೆ ಶಾಸಕರಾಗಿ 13 ವರ್ಷಗಳ  ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಮೆಲುಕು ಹಾಕಿದರು ನಂತರ ಸಧ್ಯದ ಪರಿಸ್ಥಿತಿಯಲ್ಲಿ ಇರುವ ಸರ್ಕಾರ ಅಭಿವೃದ್ಧಿಗೆ ಅಗುತ್ತಿರುವ ತೊಂದರೆಗಳ ಬಗ್ಗೆ ...
Image
  ಉಪನ್ಯಾಸಕ ವೀರಭದ್ರಯ್ಯ ಸ್ವಾಮಿ ನಿಧನ  ಜಯ ಧ್ವಜ ನ್ಯೂಸ್ ರಾಯಚೂರು ,ಜೂ.28- ಯರಮರಸ್ ಗ್ರಾಮದ ಶ್ರೀ ವೀರಭದ್ರಯ್ಯ ತಾತನವರ ಮಠದ ಶ್ರೀ ಚರಬಸವ ತಾತನವರ ಎರಡನೇ ಪುತ್ರ ವೀರಭದ್ರ ಸ್ವಾಮಿ (30) ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರು ಶಹಾಪುರದಲ್ಲಿ ವಿಜ್ಞಾನ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಲಿಂಗಸೂಗೂರಿನಲ್ಲೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ರವಿವಾರ  ಬೆಳಗ್ಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮೃತರು ತಂದೆ ತಾಯಿ ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ, ಭಕ್ತರನ್ನು ಅಗಲಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಯರಮರಸ್ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿಸಲಾಗುವುದು ಎಂದು ಕುಟುಂಬ ಮೂಲಗಳು  ಪ್ರಕಟಣೆಯಲ್ಲಿ ತಿಳಿಸಿದೆ. 
Image
  ವಿಶ್ವಾಮಿತ್ರ ಟ್ರಸ್ಟ್ ಹಾಗೂ ಡಾ.ಅಗರವಾಲ್ಸ್ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ :    ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ- ಡಿಕೆ ಮುರಳೀಧರ .                                                                                                                                                                ಜಯ ಧ್ವಜ ನ್ಯೂಸ್ , ರಾಯಚೂರು, ಜೂ.28-                                                          ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಶಾರದಾ ...
Image
  ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಪ್ರಕೃತಿ‌ ವಿಕೋಪ ಮೇಲುಸ್ತುವಾರಿ ಸಚಿವರಾಗಿ ಡಾ.ಶರಣಪ್ರಕಾಶ ಪಾಟೀಲ್ ನೇಮಕ.                                                                                              ಜಯ ಧ್ವಜ ನ್ಯೂಸ್, ರಾಯಚೂರು, ಜೂ.25- ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಪ್ರಕೃತಿ ವಿಕೋಪ ನಿರ್ವಹಣೆ ಮೆಲುಸ್ತುವಾರಿ  ಸಲುವಾಗಿ ಹಾಗು ಮುಂದಿನ ಆದೇಶ  ವರೆಗೂ  ಡಾ.ಶರಣ ಪ್ರಕಾಶ್ ಪಾಟೀಲ್ ರವರನ್ನು ಮೇಲುಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 
Image
  ಸುದ್ದಿಯ ಒತ್ತಡದ ನಡುವೆಯೂ ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಿ- ಜಿಲ್ಲಾಧಿಕಾರಿ ಪೂವಿತಾ ಎಸ್ ಜಯ ಧ್ವಜ ನ್ಯೂಸ್ ,ರಾಯಚೂರು, ಜೂನ್,23- ಸುದ್ದಿಯ ಒತ್ತಡದ ನಡುವೆಯೂ ಪತ್ರಕರ್ತರು ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್ ಹೇಳಿದರು. ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಸಾರ್ವಜನಿಕ ಸಮಸ್ಯೆಗಳನ್ನು ಬೆಳಕಿಗೆ ತಂದು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪತ್ರಕರ್ತರು ಮುಂದುವರಿಸಬೇಕು. ನಿತ್ಯದ ಕೆಲಸದ ಒತ್ತಡದ ನಡುವೆಯೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಪತ್ರಕರ್ತರು ದಿನನಿತ್ಯದ ಒತ್ತಡದ ಬದುಕಿನ ಮಧ್ಯೆಯೂ ಕ್ರಿಕೆಟ್ ಆಟದತ್ತ ಆಸಕ್ತಿ ತೋರಿರುವುದು ಶ್ಲಾಘನೀಯ ಸಂಗತಿಯಾಗಿದೆ. ಕ್ರೀಡೆಗಳು ದ...
Image
  ಬ್ರಾಹ್ಮಣ ಸಮಾಜದಿಂದ ಸನ್ಮಾನ.                                                                                                                           ಜಯ ಧ್ವಜ ನ್ಯೂಸ್ , ರಾಯಚೂರು, ಜೂ.22- ಇತ್ತೀಚೆಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ನಿರ್ದೇಶಕರಾಗಿ ನಾಮನಿರ್ದೇಶನಗೊಂಡ ವಿಪ್ರ ಸಮಾಜದ ಡಾ. ಬಿ,ಕೆ ದೇಸಾಯಿ ರವರನ್ನು ಬ್ರಾಹ್ಮಣ ಸಮಾಜದ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.                       ಈ ಸಂದರ್ಭದಲ್ಲಿ  ಎಕೆಬಿಎಂಎಸ್  ಜಿಲ್ಲಾ ಜನಪ್ರತಿನಿಧಿ  ರಮೇಶ್ ಕುಲಕರ್ಣಿ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷರಾದ ಪ್ರಾಣೇಶ್ ಮುತಾಲಿಕ್ ,ಜಿಲ್ಲಾ ಯುವ ಸಂಚಾಲಕರಾದ ಶ್ರೀನಿವಾಸ್ ದೇಸಾಯಿ ಮಲದಕಲ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.
Image
  ಜೂ.28 ರಂದು ಉಚಿತ ನೇತ್ರ ತಪಾಸಣಾ ಶಿಬಿರ.                                            ಜಯ ಧ್ವಜ ನ್ಯೂಸ್ , ರಾಯಚೂರು,ಜೂ.22- ವಿಶ್ವ ಮಿತ್ರ ಟ್ರಸ್ಟ್ ಹಾಗೂ ಡಾ.ಅಗರವಾಲ್ಸ್ ಕಣ್ಣಿನ ಆಸ್ಪತ್ರೆ  ರಾಯಚೂರು ಸಂಯುಕ್ತ ಆಶ್ರಯದಲ್ಲಿ  ಜೂ.28 ರಂದು ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ನಗರದ ಬೋಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಿಗ್ಗೆ 10.30 ರಿಂದ 1 ಗಂಟೆ ವರೆಗೆ ಶಿಬಿರ ನಡೆಯಲಿದ್ದು ಅನುಭವಿ ನೇತ್ರ ತಜ್ಞರಿಂದ ದೃಷ್ಟಿ ದೋಷ ತಪಾಸಣೆ, ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಉಚಿತ ಕನ್ನಡಕ ವಿತರಣೆ ನಡೆಯಲಿದ್ದು ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸುವವರು ನೋಂದಣಿಗಾಗಿ ಆಧಾರ್ ಕಾರ್ಡ್ ತರಬೇಕು, ಜನ ಸಂದಣಿ ತಪ್ಪಿಸಲು ಬೇಗ ಬರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 7411687808, 9448695874 , 9980468012 , 9845506138 ಗೆ ಸಂಪರ್ಕಿಸುವಂತೆ ವಿಶ್ವ ಮಿತ್ರ ಟ್ರಸ್ಟ್ ಅಧ್ಯಕ್ಷರಾದ ಡಿ.ಕೆ. ಮುರಳೀಧರ್ ಕೋರಿದ್ದಾರೆ.
Image
  ಅತ್ಯಂತ ಮೌಲಿಕ ಸಾಹಿತ್ಯವನ್ನು  ರಚಿಸಿದ ದಾಸ ಸಾಹಿತ್ಯದ ಮಹನೀಯರು ಶ್ರೀ ಮೋಹನದಾಸರು- ಮುರಳಿಧರ ಕುಲಕರ್ಣಿ ಜಯ‌ ಧ್ವಜ ನ್ಯೂಸ್ ರಾಯಚೂರು , ಜೂ.21 - ದಾಸ ಸಾಹಿತ್ಯದ ಎರಡನೇ ಘಟ್ಟದ ವಿಜಯದಾಸರ ಪರಂಪರೆಯಲ್ಲಿ ಬರುವ ಶ್ರೀ ಮೋಹನ ದಾಸರು ಹರಿದಾಸ ಶ್ರೇಷ್ಠ ರಾಗಿದ್ದಾರೆ. ದಾಸ ಸಾಹಿತ್ಯಕ್ಕೆ ಅತ್ಯಂತ ಮೌಲಿಕ ಸಾಹಿತ್ಯವನ್ನು ನೀಡಿದ ದಾಸ ಸಾಹಿತ್ಯದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ಹೇಳಿದರು.     ಅವರು ಶನಿವಾರ ಸಂಜೆ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಡೆದ ಶ್ರೀ ಮೋಹನ ದಾಸರ 211ನೇ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.   ಶ್ರೀ ಮೋಹನ ದಾಸರು ವಿಜಯದಾಸರಿಗೆ ಸಾಕು ಮಗ ಹಂಪಿಯ ಚಕ್ರ್ ತೀರ್ಥದ ಬಳಿ ಜೀವನದಲ್ಲಿ ನೊಂದು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಶ್ರೀ ವಿಜಯದಾಸರು ತಾಯಿ ಮಗುವನ್ನು ಸಂರಕ್ಷಿಸಿ ಹಲವಾರು ರೋಗದಿಂದ ಬಳಲುತ್ತಿರುವ ಮಗುವನ್ನು ತಾವೇ ದತ್ತಕ್ಕೆ ತೆಗೆದುಕೊಂಡು ಮೋಹನ ದಾಸರನ್ನುಬೆಳೆಸಿ ಹರಿದಾಸ ಸಾಹಿತ್ಯದ ಶ್ರೇಷ್ಠ ದಾಸರನ್ನಾಗಿ ಮಾಡಿದ ಕೀರ್ತಿ ವಿಜಯದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು.    ಈ ಸಂದರ್ಭದಲ್ಲಿ ವೇ.ಮೂ.ಪಂ. ಮುಕುಂದಾಚಾರ್ಯ ಸತ್ಯನಾಥ ಕಾಲೋನಿ ಅವರು ಉಪನ್ಯಾಸವನ್ನು ನೀಡುತ್ತಾ ಮೋಹನ ದಾಸರ ಕೀರ್ತನೆಗಳೆಲ್ಲವೂ ಸೈದ್ಧಾಂತಿಕ ಆಧಾರದ ಮೇಲೆ ರೂಪುಗೊಂಡಿವೆ. ಇ...
Image
  ಪಾರ್ವತಮ್ಮ ಪಾಪಾರೆಡ್ಡಿ ನಿಧನ ಹಿನ್ನಲೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಮುಂದೂಡಿಕೆ.                                                                                                  ಜಯ ಧ್ವಜ ನ್ಯೂಸ್ ರಾಯಚೂರು,ಜೂ.19- ಮಾಜಿ ಶಾಸಕ ಎ.ಪಾಪಾರೆಡ್ಡಿಯವರ ಧರ್ಮಪತ್ನಿ ಪಾರ್ವತಮ್ಮ ನಿಧನ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಆಯೋಜಿಸಲಾಗಿದ್ದ ಮೂರು ದಿನಗಳ ಮುನ್ನೂರು ಕಾಪು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಮುಂದೂಡಲಾಗಿದೆ ಎಂದು ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹೇಳಿದರು. ಅವರಿಂದು ನಗರದ ಗದ್ವಾಲ್ ರಸ್ತೆಯ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಬಳಿಕ ಮಾತನಾಡಿ ಮುನ್ನೂರು ಕಾಪು ಸಮಾಜದ ಹಿರಿಯರು, ಯುವಕರು ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದು ಈ ಬಾರಿ ಸಮಾಜದ ಹಿರಿಯ ವ್ಯಕ್ತಿಯೊಬ್ಬರ ನಿಧನ ಹಿನ್ನಲೆ ದುಖದ ವಾತಾವರಣ ಕಾರಣದಿಂದ ಮುಂಗಾರು ಸಾಂಸ್ಕೃತಿಕ ಹಬ್ಬ ಮುಂದೂಡಲು ಸರ್ವಾನುಮತದಿಂದ ನಿರ್ಣಯ ...
Image
  ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮ:                                        ಪಾರ್ವತಮ್ಮನವರು ಪಾಪಾರೆಡ್ಡಿಯವರನ್ನು ಸಮಾಜ ಸೇವೆಗೆ ಪ್ರೇರೇಪಿಸಿದವರು- ಎನ್.ಶಂಕ್ರಪ್ಪ.                                                     ಜಯ ಧ್ವಜ ನ್ಯೂಸ್, ರಾಯಚೂರು, ಜೂ.19- ಮಾಜಿ ಶಾಸಕ ಎ.ಪಾಪಾರೆಡ್ಡಿಯವರನ್ನು ಸಮಾಜ ಸೇವೆಗೆ ಪ್ರೇರಣೆ ನೀಡಿದವರು ಪಾರ್ವತಮ್ಮನವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಅಭಿಪ್ರಾಯ ಪಟ್ಟರು. ಅವರಿಂದು ನಗರದ ಗದ್ವಾಲ್ ರಸ್ತೆಯ ಮುನ್ನೂರು ಕಾಪು ಶ್ರೀ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿದ್ದ ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಪಾಪಾರೆಡ್ಡಿಯವರನ್ನು ಅನೇಕ ದಶಕಗಳಿಂದ ಆತ್ಮೀಯ ಒಡನಾಟಯುಳ್ಳವರಾದ ನಾನು ಅವರ ರಾಜಕೀಯ ಏಳ್ಗೆ ಮತ್ತು ಸಮಾಜ ಮುಖಿ ಕಾರ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತವರು ಪಾರ್ವತಮ್ಮನವರು ಎಂದರು. ಪಾಪಾರೆಡ...
Image
  ಭಾರತೀಯ ರೈಲ್ವೆ - ದಿವ್ಯಾಂಗಜನ ರಿಯಾಯಿತಿ ಕಾರ್ಡ್ ಆನ್ಲೈನ್ ನಲ್ಲಿ ಲಭ್ಯ  - ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಜೂ.18- ಭಾರತೀಯ ರೈಲ್ವೆ ಈಗ ದಿವ್ಯಾಂಗಜನ ಪ್ರಯಾಣಿಕರಿಗೆ ರೈಲ್ವೆ ರಿಯಾಯಿತಿ ಫೋಟೋ ಗುರುತಿನ ಚೀಟಿ ನೀಡಿಕೆ ಮತ್ತು ನವೀಕರಣವನ್ನು ಸೌಲಭ್ಯವನ್ನು ಇನ್ನು ಮುಂದೆ  ಸಂಪೂರ್ಣ ಆನ್ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ತಿಳಿಸಿದ್ದಾರೆ.  ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಅವರು,  ಸಂಪೂರ್ಣ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ದಾಖಲೆ ಅಪ್ಲೋಡ್, ಸ್ಥಿತಿ ಪರಿಶೀಲನೆ, ಅನುಮೋದಿತ ಕಾರ್ಡ್ ಡೌನ್ಲೋಡ್ - ಎಲ್ಲವೂ ಡಿಜಿಟಲೀಕರಣ ಮಾಡಲಾಗಿದೆ.   ರೈಲ್ವೆ ಕಚೇರಿಗೆ ಹೋಗುವ ಅಗತ್ಯವಿಲ್ಲ:  ಮೊದಲು ರೈಲ್ವೆ ಕಚೇರಿಗೆ ಹೋಗಬೇಕಿತ್ತು. ಅಲ್ಲಿಂದ ಡಿವಿಜನಲ್ ಕಚೇರಿಗೆ ರವಾನೆ ಆಗಿ ಅಲ್ಲಿ ಪರಿಶೀಲನೆ ಮಾಡಿ ಕಾರ್ಡ್ ನೀಡಲಾಗುತ್ತಿತ್ತು. ಹಲವು ದಿನಗಳ ಕಾಲ ಕಾಯಬೇಕಾಗಿತ್ತು.  ಈಗ ಡಿಜಿಟಲ್ ಆಗಿ ಆಗುತ್ತದೆ  ರೈಲು ಟಿಕೆಟ್ನಲ್ಲಿ ರಿಯಾಯಿತಿ ಪಡೆಯಲು ಅರ್ಹರಾದ ದಿವ್ಯಾಂಗಜನ ಪ್ರಯಾಣಿಕರು ಆನ್ಲೈನ್ ಅರ್ಜಿ ಸಲ್ಲಿಸಲು ವೆಬ್ಸೈಟ್: http://divyangjanid.indianrail.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಭಾರತ ಸರಕಾರದ ನೈಋತ್ಯ ರೈಲ್ವೆ ದಿವ್ಯಾಂಗಜನರಿಗೆ ಈಗ ಸಿಹಿ ಸುದ್ಧಿ ನೀಡಿದ್ದು  ಕರ್ನ...
Image
  ನಾಳೆ ಮುನ್ನೂರು ಕಾಪು ಸಮಾಜದಿಂದ    ಪಾರ್ವತಮ್ಮರವರ ಶ್ರದ್ಧಾಂಜಲಿ ಕಾರ್ಯಕ್ರಮ.                                                                    ಜಯಧ್ವಜ ನ್ಯೂಸ್ ರಾಯಚೂರು, ಜೂ.18- ನಿನ್ನೆ ನಿಧನರಾದ ಮಾಜಿ ಶಾಸಕ ಎ.ಪಾಪಾರೆಡ್ಡಿರವರ ಧರ್ಮಪತ್ನಿ ಪಾರ್ವತಮ್ಮರವರ ಶ್ರದ್ಧಾಂಜಲಿ ಕಾರ್ಯಕ್ರಮ ಜೂ.19 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಗದ್ವಾಲ್ ರಸ್ತೆಯ ಮುನ್ನೂರು ಕಾಪು ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ  ಆಯೋಜಿಸಲಾಗಿದೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಮುನ್ನೂರು ಕಾಪು ಸಮಾಜದ ಹಿರಿಯರು, ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ಪಾರ್ವತಮ್ಮರವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಮುನ್ನೂರು ಕಾಪು ಸಮಾಜದ ಅಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.
Image
  ಕಲ್ಯಾಣ ಕರ್ನಾಟಕ ಮನೋವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಡಾ. ಮನೋಹರ್ ಪತ್ತಾರ್ ಆಯ್ಕೆ.   ಜಯ ಧ್ವಜ ನ್ಯೂಸ್ ,ರಾಯಚೂರು ಜೂ. 17-   ರಾಯಚೂರು ನಗರದ ಮಾನಸಿಕ ಮತ್ತು ನರರೋಗ ತಜ್ಞರಾದ ಡಾ. ಮನೋಹರ್ ವೈ ಪತ್ತಾರ್ ಇವರು ಕಲ್ಯಾಣ ಕರ್ನಾಟಕ ಮನೋವೈದ್ಯಕೀಯ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಂದ ಮನೋರೋಗ ತಜ್ಞ ವೈದ್ಯರು ರಾಯಚೂರು ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ. ಮನೋಹರ್ ವೈ  ಪತ್ತಾರ್ ರಾಯಚೂರು,  ಉಪಾಧ್ಯಕ್ಷರಾಗಿ ಡಾ. ಬಾಬುರಾವ್ ಮಾರ್ಕಲ್ ಬೀದರ್, ಗೌರವ ಕಾರ್ಯದರ್ಶಿಯಾಗಿ ಡಾ. ವಿನಯ್ ಕುಮಾರ್, ಖಜಾಂಚಿಯಾಗಿ ಡಾ. ಶರಣಬಸವರಾಜ ರಾಯಚೂರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Image
  ಮಾಜಿ ಶಾಸಕ ಎ. ಪಾಪಾರೆಡ್ಡಿಯವರಿಗೆ ಪತ್ನಿ ವಿಯೋಗ                                                                          ಜಯ ಧ್ವಜ ನ್ಯೂಸ್ , ರಾಯಚೂರು,ಜೂ.17- ನಗರದ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ರವರ ಧರ್ಮಪತ್ನಿ ಎ.ಪಾರ್ವತಮ್ಮರವರು ಇಂದು ಬೆಳಗಿನ ಜಾವ 3:30ಕ್ಕೆ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3:30ಕ್ಕೆ ಮುನ್ನೂರು ಕಾಪು ಸಮಾಜದ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Image
  ಕಾಲೋನಿ ನಿವಾಸಿಗಳಿಂದ ಸನ್ಮಾನ.                                                                 ಜಯ ಧ್ವಜ ನ್ಯೂಸ್, ರಾಯಚೂರು,ಜೂ.16- ಜಿ.ಡಿ.ಸೋಮೇಶ್ವರ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಮತ್ತು ಬಿಜೆಪಿಯ ಮುಖಂಡರಾದ ಬಿ.ಶಿವರೆಡ್ಡಿ ಇವರಿಗೆ ಅಲ್ಲಮಪ್ರಭು ಕಾಲೋನಿ ಮತ್ತು ಶ್ರೀನಿವಾಸ್ ಕಾಲೋನಿ ನಿವಾಸಿಗಳಿಂದ ಸನ್ಮಾನ ಮಾಡಲಾಯಿತು.                           ಈ ಸಂದರ್ಭದಲ್ಲಿ ಮೋದಿ ಕೃಷ್ಣಮೂರ್ತಿ. ರಾಯಪ್ಪ ಮಾಸ್ಟರ್ .ಬಾಶುಮಿಯ್ಯಾ .ಮಲ್ಲೇಶ್ ದಳವಾಯಿ .ದೇವೇಂದ್ರಪ್ಪ. ಶ್ರೀನಿವಾಸ್ ಕಾಲೋನಿ ಮುಖಂಡರಾದ ತಿಮ್ಮಣ್ಣ ಯಾದವ್.ಸಿದ್ದಣ್ಣ. ವೀರೇಶ್ ನಾಗಲದಿನ್ನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Image
  ರಕ್ತದಾನದ ಮಹತ್ವ ತಿಳಿಸುವ ಕಾರ್ಯವಾಗಲಿ- ಎಸ್ಪಿ ಅರುಣಾಂಗ್ಷು ಗಿರಿ ಜಯ ಧ್ವಜ ನ್ಯೂಸ್ , ರಾಯಚೂರು, ಜೂನ್.16 - ಅಪಘಾತದಿಂದ ಹಾಗೂ ಕಾಯಿಲೆಯಿಂದ ಪ್ರಾಣಾಪಾಯದಲ್ಲಿ ಇರುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಹೇಳಿದರು. ಜೂನ್ 16ರ ಮಂಗಳವಾರ ದಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ರಾಯಚೂರು, ಲಯನ್ಸ್ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ, ರೆಡ್ ರಿಬ್ಬನ್ ಕ್ಲಬ್, ಎನ್.ಎಸ್.ಎಸ್. ಎನ್.ಸಿ.ಸಿ, ರಾಯಚೂರು ಜಿಲ್ಲೆಯ ಎಲ್ಲ ರಕ್ತ ಕೇಂದ್ರಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಪ್ರತಿದಿನ ಸೂಕ್ತ ಗುಂಪಿನ ರಕ್ತದ ಕೊರತೆಯಿಂದ, ಅಪಘಾತದಲ್ಲಿ ತೀವ್ರ ತರಹದ ಗಾಯದಿಂದ ರಕ್ತಸ್ರಾವವಾಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಇದ್ದು, ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜ...
Image
  ಗಿಡ ನೆಡುವ ಮೂಲಕ ಜನ್ಮದಿನ ಆಚರಣೆ ಸ್ಪೂರ್ತಿದಾಯಕ- ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ್ ಜಯ ಧ್ವಜ ನ್ಯೂಸ್ ರಾಯಚೂರು , ಜೂ.16 - ಗ್ರೀನ್ ರಾಯಚೂರು ಗೌರವಾಧ್ಯಕ್ಷರಾದ ಶ್ರೀ ಕೊಂಡ ಹನುಮೇಶ್ ಕುಮಾರ್ ಅವರು ತಮ್ಮ 52ನೇ ಜನ್ಮದಿನದ ಅಂಗವಾಗಿ 52 ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಿದರು. ರಾಯಚೂರು ವಲಯ ಅರಣ್ಯಾಧಿಕಾರಿ ಶ್ರೀ ರಾಜೇಶ್ ನಾಯಕ್ ಅವರು ಮಾತನಾಡಿ, “ಗಿಡ ನೆಟ್ಟು ಜನ್ಮದಿನ ಆಚರಿಸುವುದು ಅತ್ಯಂತ ಸ್ಪೂರ್ತಿದಾಯಕ ಕಾರ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಜನ್ಮದಿನ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು. ಇಂತಹ ಕಾರ್ಯಗಳಿಂದ ಹಸಿರೀಕರಣ ಹೆಚ್ಚಾಗಿ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು” ಎಂದು ಹೇಳಿದರು. ಶ್ರೀ ಕೊಂಡ ಹನುಮೇಶ್ ಕುಮಾರ್ ಅವರು ತಮ್ಮ ತಂದೆ, ಗ್ರೀನ್ ರಾಯಚೂರು ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ ಕೊಂಡ ಕೃಷ್ಣಮೂರ್ತಿ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿಯೂ ತಮ್ಮ 52ನೇ ಜನ್ಮದಿನವನ್ನು 52 ಗಿಡಗಳನ್ನು ನೆಡುವ ಮೂಲಕ ವಿಶೇಷವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಗ್ರೀನ್ ರಾಯಚೂರು ಸದಸ್ಯರು...
Image
​ ದೇಶಬಂಧು ಚಿತ್ತರಂಜನ್ ದಾಸ್ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕರೆ -ಅಮರಜೀತ್ ಕುಮಾರ್   ಜಯ‌ ಧ್ವಜ ನ್ಯೂಸ್ , ರಾಯಚೂರು, ಜೂ.16-  ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯ ವತಿಯಿಂದ ರಾಯಚೂರಿನ ಕಚೇರಿಯಲ್ಲಿ ನಿನ್ನೆ ಸಂಜೆ ಹಮ್ಮಿಕೊಂಡ ದೇಶಬಂಧು ಚಿತ್ರಂಜನ್ ದಾಸ್ ಅವರ 100ನೇ ಸ್ಮರಣ ದಿನದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಚಿತ್ತರಂಜನ್ ದಾಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು ಮತ್ತು ಪ್ರಖ್ಯಾತ ವಕೀಲರಾಗಿದ್ದರು. ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರಾಜಕೀಯ ಗುರುಗಳಾಗಿದ್ದರು. ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಅವರು ಅವಿಭಜಿತ ಬಂಗಾಳದಲ್ಲಿ 'ಸ್ವರಾಜ್ ಪಕ್ಷ'ವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಳಿಸದ ಮುದ್ರೆ ಒತ್ತಿದ ಅವರನ್ನು ಜನರು ಪ್ರೀತಿಯಿಂದ 'ದೇಶಬಂಧು'  ಎಂದು ಕರೆಯುತ್ತಿದ್ದರು. ​ ಅತ್ಯಂತ ಸಮರ್ಥ ಬ್ಯಾರಿಸ್ಟರ್ (ವಕೀಲ) ಆಗಿ, ಅವರು ಬ್ರಿಟಿಷರ ದೌರ್ಜನ್ಯದಿಂದ ಅನೇಕ ಕ್ರಾಂತಿಕಾರಿಗಳನ್ನು ರಕ್ಷಿಸಿದರು. ಅಲಿಪೋರ್ ಬಾಂಬ್ ಪಿತೂರಿ ಪ್ರಕರಣದಲ್ಲಿ ಅರವಿಂದ ಘೋಷ್ ಅವರ ಪರವಾಗಿ ವಾದ ಮಂಡಿಸಿ, ತಮ್ಮ ವಾಕ್ಚಾತುರ್ಯ ಮತ್ತು ಕಾನೂನು ಜ್ಞಾನದಿಂದ ಅವರನ್ನು ಮರಣದಂಡನೆ ಹಾಗೂ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದರು.  ಸ್ವಾತಂತ್ರ್ಯ ಹೋರಾಟಕ್ಕಾಗ...
Image
  ಬೋಸರಾಜುರವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬೇಕು- ಬಾಲಸ್ವಾಮಿ ಕೊಡ್ಲಿ.                                                        ಜಯ ಧ್ವಜ ನ್ಯೂಸ್, ರಾಯಚೂರು, ಜೂ.16- ಎರಡನೆ ಹಂತದ ಸಚಿವ ಸಂಪುಟ ರಚನೆಯಲ್ಲಿ ಎನ್.ಎಸ್.ಬೋಸರಾಜುರವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ‌ ಸಂಯೋಜಕರಾದ ಬಾಲಸ್ವಾಮಿ ಕೊಡ್ಲಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಉತ್ತಮ ಕಾರ್ಯ ಮಾಡಿರುವ ಬೋಸರಾಜು ರವರು ನಗರದಲ್ಲಿ ಹಾಗೂ ವಿವಿಧೆಡೆ ಅತಿ ಹೆಚ್ಚು ಅನುದಾನ ವಿನಿಯೋಗಿಸಿ ಕೆಲಸ ಮಾಡಿದ್ದಾರೆ ಎಂದರು. ಕೆರೆಗಳ ಅಭಿವೃದ್ಧಿ , ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯ ಒದಗಿಸಿದ್ದಾರೆ ಆಸ್ಪತ್ರೆಗಳಲ್ಲಿ ಹೆಚ್ಚಿನ  ಆರೋಗ್ಯ ಸೌಲಭ್ಯ ದೊರಕುವಂತೆ ಮಾಡಿದ್ದಾರೆ ಎಂದ ಅವರು ಮಾಡಿರುವ ಕಾರ್ಯಗಳ  ಮಾಹಿತಿ ನೀಡಿದರು. ಭಾರತ ಜೋಡೋ ಯಾತ್ರೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಾದು ಹೋಗುವಂತೆ ಮಾಡಿದರು. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ವಿಶ್ವಾಸ ಗಳಿಸಿ ಪಕ್ಷವನ್ನು ಜಿಲ್ಲೆಯಲ್ಲಿ ಸಧೃಡಗೊಳಿಸಿದ್ದಾರೆ ಆದ್ದರಿಂದ ಎಐಸಿಸಿ ಅಧ್ಯಕ್ಷರು , ಪಕ್ಷದ ವರಿಷ್ಠರ...
Image
    ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳ ಖಾಸಗಿಕರಣಕ್ಕೆ ಆಕ್ಷೇಪಣೆ       ಜಯ ಧ್ವಜ ನ್ಯೂಸ್ ರಾಯಚೂರು , ಜೂ.15-  ಮುಂಬೈಯ ಟಾಟಾ ಪವರ್ ಕಂಪನಿಯು ನಮ್ಮ ರಾಜ್ಯದ ವಿದ್ಯುತ್ ಕ್ಷೇತ್ರಗಳಲ್ಲಿ ಆದಾಯ ತರುವಂತ ಜಿಲ್ಲೆಗಳಾದ ಜೆಸ್ಕಾಂ ಕಂಪನಿ ವ್ಯಾಪ್ತಿಯ ರಾಯಚೂರು, ಬಳ್ಳಾರಿ, ಯಾದಗಿರಿ, ಕಲ್ಬುರ್ಗಿ. ಮತ್ತು ಮೆಸ್ಕಾಂ ಕಂಪನಿ  ವ್ಯಾಪ್ತಿಯ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ.ಹೆಸ್ಕಾಂ ಕಂಪನಿ  ವ್ಯಾಪ್ತಿಯ ಹುಬ್ಬಳ್ಳಿ, ಬೆಳಗಾವಿ, ಸಿರಸಿ.ಬೆಸ್ಕಾಂ ಕಂಪನಿ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ , ಕೋಲಾರ, ರಾಮನಗರ, ತುಮಕೂರು, ಚಿತ್ರದುರ್ಗ. ಚೆಸ್ಕಾಂ ಕಂಪನಿ ವ್ಯಾಪ್ತಿಯ ಮೈಸೂರು, ಹಾಸನ, ಚಾಮರಾಜನಗರ ಒಟ್ಟು 19 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ಪರವಾನಿಗೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಅಕ್ಷೇಪಣೆಯನ್ನು ಕೋರಿರುವುದಕ್ಕೆ ಕವಿಪ್ರನಿ ನೌಕರರ ಕನ್ನಡ ಸಂಘ ರಾಯಚೂರು ವತಿಯಿಂದ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶತಮಾನಗಳಿಂದ ವಿದ್ಯುತ್ ಜಾಲ ನಿರ್ಮಿಸಲು ಅನೇಕ ನೌಕರರು ತಮ್ಮ ಪ್ರಾಣವನ್ನು ಬಲಿ ಕೊಟ್ಟು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿರುತ್ತಾರೆ ಈ ಖಾಸಗಿಕರಣದಿಂದ ನೌಕರರ ಸೇವಾ ಭದ್ರತೆಗೆ ಧಕ್ಕೆ ಉಂಟಾಗಲಿದ್ದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಉಂಟಾಗಿ ಬಡ, ದೀನ ದಲಿತರಿಗೆ ಮೀಸಲಾತಿ ಇಲ್ಲದಂತಾಗುತ್ತದೆ ಈಗಾಗಲೇ ರಾಜ್ಯ ಸರ್ಕ...
Image
  ಅಭಯ ಹಸ್ತ- ಧರ್ಮ ರತ್ನಾಕರ ಶ್ರೀ ನರಸಿಂಗರಾವ್ ದೇಶಪಾಂಡೆ ಹಿ ರಿಯ ವ್ಯಕ್ತಿಯ, ಯಶಸ್ವೀ ಪುರುಷನ ಜೀವನ ಕಥನವನ್ನು ನೈಜವಾಗಿ ದಾಖಲಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ದಾಖಲಿಸುವವರು ಹತ್ತಿರದ ಸಂಬoಧಿಗಳೇ ಆಗಿದ್ದರೆ, ಅದು ಬಹು ಸವಾಲಿನ ಕಾರ್ಯವೇ ಹೌದು. ಕೇವಲ ಜೀವನದ ವಿವರಗಳನ್ನು ನೀಡಿದರೆ,  ನೀರಸವಾಗುತ್ತದೆ. ಈ ಅಪಾಯವನ್ನು ತಪ್ಪಿಸಲು ವೈಭವೀಕರಿಸಿದರೆ, ನೈಜ ಚಿತ್ರಣಕ್ಕೆ ಎರವಾಗುತ್ತದೆ. ಆದ್ದರಿಂದ ಉತ್ಪ್ರೇಕ್ಷಿತವಾಗದಂತೆ  ಒಟ್ಟು ಜೀವನವನ್ನು ಒರೆಹಚ್ಚಿ, ಪರಿಶೀಲಿಸಿ  ಅನಾವರಣಗೊಳಿಸಲು  ತಾಳ್ಮೆಯೂ, ವಾಸ್ತವಿಕ ಪ್ರಜ್ಞೆಯೂ ಅವಶ್ಯಕವಾಗುತ್ತದೆ.  ಈ ನಿಟ್ಟಿನಲ್ಲಿ ಶ್ರೀ ನರಸಿಂಗರಾವ್ ದೇಶಪಾಂಡೆ ಮುದ್ಗಲ್ ಇವರ ಜೀವನದ ವಿವರಗಳನ್ನು ಅವರ ಕಿರಿಯ ಸಹೋದರ ಶ್ರೀ ಶ್ರೀನಿವಾಸ ದೇಶಪಾಂಡೆಯವರ ಅಭಯ ಹಸ್ತ ಎನ್ನುವ ಕೃತಿ ವಾಸ್ತವಿಕ ಅರಿವನ್ನು ಇಟ್ಟುಕೊಂಡು ಎಲ್ಲಿಯೂ ಹದ ತಪ್ಪದಂತೆ ಎಚ್ಚರ ವಹಿಸಿ ಈ ಸುಂದರ ಕೃತಿಯಲ್ಲಿ ದಾಖಲಿಸಿದ್ದಾರೆ.  ಧರ್ಮೋ ರಕ್ಷತಿ ರಕ್ಷಿತ: ಎನ್ನುವ ಆರ್ಷವಾಕ್ಯವನ್ನು ತಮ್ಮ ಜೀವನದ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡು, ಅದರಂತೆ ಬಾಳಿನುದ್ದಕ್ಕೂ ಪರಿಪಾಲಿಸಿಕೊಂಡು ಬರುತ್ತಿರುವ ನರಸಿಂಗರಾವ್ ಅವರ ಮೌಲ್ಯನಿಷ್ಠೆಯು ಈ ಕೃತಿಯಲ್ಲಿ ಚೆನ್ನಾಗಿ ವ್ಯಕ್ತವಾಗಿದೆ. ಅವರ ಸೋದರ ಪ್ರೀತಿ, ಪರೋಪಕಾರ ಗುಣ, ಔದಾರ್ಯ, ಗುರು-ಹಿರಿಯರಲ್ಲಿ ಗೌರವ,  ಸಹನೆ ಈ ಎಲ್ಲ ಗುಣಗಳನ್ನು ಅವರ ಜೀವನ ...