ಮಂತ್ರಾಲಯದಲ್ಲಿ ಬೇಸಿಗೆಯಲ್ಲಿ ಭಕ್ತರಿಗೆ ನೀರಿನ ಅಭಾವ ತಡೆಗೆ ಬೋರವೆಲ್ ಮೊರೆ:                                                                                        ವಿವಿ ಸ್ಥಾಪನೆ, ಏರ್ ಪೋರ್ಟ್ ನಿರ್ಮಾಣ ಗುರಿ - ಶ್ರೀ ಸುಬುಧೇಂದ್ರತೀರ್ಥರು.                                                                                                                     ಜಯ ಧ್ವಜ ನ್ಯೂಸ್, ರಾಯಚೂರು, ಫೆ.19- ಬೇಸಿಗೆಯಲ್ಲಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಅಭಾವ ಕಾಡದಂತೆ ಬೋರವೆಲ್ ಮುಖಾಂತರ ನೀರನ್ನು ಒದಗಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು ಶ್ರೀಮಠದಲ್ಲಿ ಶ್ರೀಗುರುವೈಭವೋತ್ಸವ ಅಂಗವಾಗಿ ಕಾರ್ಯಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ ತುಂಗಭದ್ರಾ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ ಆದ್ದರಿಂದ ಬೇಸಿಗೆಯಲ್ಲಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ತೊಂದರೆಯಾಗದಂತೆ ಕ್ರಮ ವಹಿಸುವುದಾಗಿ ಹೇಳಿದರು. ಶ್ರೀಮಠದಿಂದ ವಿಶ್ವವಿದ್ಯಾಲಯ ಸ್ಥಾಪನೆ, ಖಾಸಗಿ ಸಹಭಾಗಿತ್ವದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶಿಸಿದ್ದು ಸರ್ವೇ ಸೇರಿದಂತೆ ಇನ್ನಿತರ ಪರವಾನಿಗೆ , ನಿಯಮ ಪಾಲನೆ ಸರ್ಕಾರದೊಂದಿಗೆ ಸಮನ್ವಯತೆ ಮೂಲಕ ಕಾರ್ಯರೂಪಕ್ಕೆ ತರುತ್ತೇವೆ ಎಂದರು. ಮಂತ್ರಾಲಯದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗಿದ್ದು  ಭಕ್ತರು ಸಹ ಸ್ವಚ್ಚತೆಗೆ ಸಹಕರಿಸಬೇಕೆಂದ ಅವರು ಮಂತ್ರಾಲಯದಲ್ಲಿ ಯಾತ್ರಾರ್ಥಿಗಳಿಗೆ ಕೊಠಡಿ ಕೊರತೆಯಾಗದಂತೆ ಶಕ್ತಿಮೀರಿ  ಮಠದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಖಾಸಗಿ ಲಾಡ್ಜ್ ಗಳ ಕೊಠಡಿಗಳ ದರ ನಿಯಂತ್ರಣ ಸರ್ಕಾರದ ಜವಾಬ್ದಾರಿ ಎಂದರು.ರಾಯರ ದರ್ಶನಕ್ಕೆ ದಿನನಿತ್ಯ ಸರಾಸರಿ ಒಂದು ಲಕ್ಷಕ್ಕೂ ಅಧಿಕ ಜನರು ಬರುತ್ತಿದ್ದು ದರ್ಶನಕ್ಕೆ ಕ್ಯೂ ಮೂಲಕ ಉಚಿತ ದರ್ಶನವಿದೆ ಮುಂಬರುವ ದಿನಗಳಲ್ಲಿ ತಿರುಪತಿ ಮಾದರಿಯಲ್ಲಿ ಹವಾನಿಯಂತ್ರಿತ ವೇಟಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಆಲೋಚನೆಯಿದೆ ಎಂದರು.

ಈ ಹಿಂದೆ ಪ್ರಧಾನಮಂತ್ರಿಗಳಿಗೆ ಮಂತ್ರಾಲಯ ಭೇಟಿಗೆ ಆಹ್ವಾನಿಸಿದ್ದೇವೆ ಪ್ರಧಾನಿಗಳ ಕಚೇರಿ, ಸಂಘ ಪರಿವಾರದ ಪ್ರಮುಖರೊಂದಿಗೆ ಸಂಪರ್ಕದಲ್ಲಿದ್ದು ಮುಂಬರುವ ದಿನಗಳಲ್ಲಿ ಅವರು ಭೇಟಿ ನೀಡುತ್ತಾರೆಂಬ ವಿಶ್ವಾಸವಿದೆ ಎಂದರು.  ಬಾಂಗ್ಲಾ ದೇಶದಲ್ಲಿ  ಹಿಂದೂಗಳ ಮೇಲೆ ದಾಳಿ ಹ್ಯೇಯ ಕೃತ್ಯ ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದರು. ಒಂದು ವಾರಗಳ ಕಾಲ ನಡೆಯುವ ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವದಲ್ಲಿ ಅನೇಕ ಗಣ್ಯರಿಗೆ ಆಹ್ವಾನಿಸಿದ್ದು ಹೆಚ್.ಡಿ.ಕುಮಾರ ಸ್ವಾಮಿ , ಚಿತ್ರ ನಟ ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ದಿನ ನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಯರ ವಿರ್ಧಂತಿಯಂದು ನಾದಹಾರ ಸಮರ್ಪಣೆ, ದಿನ ನಿತ್ಯ ರಾತ್ರಿ ಪರಿಮಳ ಪುಷ್ಕರಣಿಯಲ್ಲಿ ತೆಪ್ಪೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು. ದಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾಗರಾಜರಾವ್ ರವರು ಭವ್ಯ ಯಾಗ ಶಾಲೆ ನಿರ್ಮಿಸಿದ್ದು ಅದನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು. 

                             
ಕೆನರಾ ಬ್ಯಾಂಕ್ ನಿಂದ ದೇಣಿಗೆ: 
ಇದೆ ಸಂದರ್ಭದಲ್ಲಿ ಕ್ಯಾನರಾ ಬ್ಯಾಂಕ್ ಎಂಡಿ ಹಾಗೂ ಸಿಬ್ಬಂದಿ ಆಗಮಿಸಿ ಶ್ರೀ ಮಠಕ್ಕೆ ಐದು ಲಕ್ಷ ರೂ.ದೇಣಿಗೆ ನೀಡಿದರು.  

Comments

Popular posts from this blog