ತಳವಾರರಿಗೆ ಪರಿಶಿಷ್ಟ ಪಂಗಡದ ಸೌಲಭ್ಯದ ಕುರಿತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿಕೆಗೆ ರಘುವೀರ ನಾಯಕ ತೀವ್ರ ಖಂಡನೆ.
ಜಯ ಧ್ವಜ ನ್ಯೂಸ್ , ರಾಯಚೂರು ,ಫೆ.23- ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಪರಿಷತ್ ಮುಖ್ಯ ಸಚೇತಕರಾದ ಎನ್.ರವಿಕುಮಾರರವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮೂಲಕ ತಳವಾರರಿಗೆ ಪರಿಶಿಷ್ಠ ಪಂಗಡದ ಸೌಲಭ್ಯವನ್ನು ಮುಂದುವರೆಸಬೇಕು ಮತ್ತು ವಾಲ್ಮೀಕಿ ನಾಯಕ ಸಮುದಾಯದ ಹೋರಾಟಕ್ಕೆ ಸರಕಾರ ಮಣಿಯಬಾರದು ಎಂದು ಹೇಳಿಕೆ ನೀಡಿರುವುದನ್ನು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವಿಭಾಗೀಯ ಕಾರ್ಯದರ್ಶಿಗಳಾದ ಎನ್. ರಘುವೀರ ನಾಯಕ ಖಂಡಿಸಿದ್ದಾರೆ.
ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಹೇಳುತ್ತಿದ್ದಾರೆ ಆದರೆ ಯಾವ ಸಮುದಾಯದ ತಳವಾರರು ಎಂದು ಸ್ಪಷ್ಟಪಡಿಸಬೇಕು. ಎಲ್ಲಾ ಜಾತಿಗಳಲ್ಲೂ ತಳವಾರ ಸಮುದಾಯದವರು ಇದ್ದಾರೆ. ಕೇಂದ್ರ ಸರಕಾರದ ಗೆಜೆಟನ್ನು ಒಮ್ಮೆ ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕು. ನಾಯಕ ಸಮುದಾಯದ ತಳವಾರರಿಗೆ ಮಾತ್ರ ಎಸ್,ಟಿ ಪಟ್ಟಿಗೆ ಸೇರಿದ್ದಾರೆ ಇತರ ಸಮುದಾಯದ ತಳವಾರರು ಅಲ್ಲ ಎಂಬುದು ಮೊದಲು ಮನನ ಮಾಡಿಕೋಳ್ಳಬೇಕು. ತಾವು ಹೇಳುತ್ತಿರುವ ತಳವಾರರು ಯಾರು ಎಂದು ಮೊದಲು ಸ್ಪಷ್ಟಪಡಿಸಬೇಕು. ಇಂತಹ ತಪ್ಪು ಹೇಳಿಕೆಗಳನ್ನು ನೀಡುವ ಮೂಲಕ ಸಮುದಾಯಗಳ ನಡುವೆ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ. ಪ್ರತಿ ಸಮುದಾಯಗಳಲ್ಲೂ ತಳವಾರರು ಇದ್ದಾರೆ ಆದರೆ ೧೯೯೧-೯೨ರಲ್ಲಿ ವಾಲ್ಮೀಕಿ ನಾಯಕ ಸಮುದಾಯವು ಎಸ್.ಟಿ ಪಟ್ಟಿಗೆ ಸೇರುವ ಸಂದರ್ಭದಲ್ಲಿ ನಾಯಕ ಸಮುದಾಯದ ಉಪ ಪಂಗಡಗಳಾದ ತಳವಾರ ಮತ್ತು ಪರಿವಾರ ಸೇರದೆ ಹೊರಗೆ ಉಳಿದಿದ್ದವು. ಆಗಿನಿಂದಲೂ ನಿರಂತರ ಹೋರಾಟದ ಫಲವಾಗಿ ೩೦ ವರ್ಷಗಳ ನಂತರ ಈಗ ನಾಯಕ ಸಮುದಾಯದ ಉಪ ಪಂಗಡಗಳಾದ ತಳವಾರ ಮತ್ತು ಪರಿವಾರ ಎಸ್.ಟಿ ಪಟ್ಟಿಗೆ ಸೇರಿದೆ. ಕೇಂದ್ರ ಸರಕಾರವು ಎಸ್.ಟಿ ಪಟ್ಟಿಯಲ್ಲಿ ಸೇರಿಸುವ ಸಮಯದಲ್ಲಿ ನಾಯಕ ಸಮುದಾಯದ ಉಪಪಂಗಡಗಳಾಗಿರುವುದರಿಂದಲೇ ತಳವಾರ ಮತ್ತು ಪರಿವಾರ ಪದಗಳನ್ನು ಕ್ರಮ ಸಂಖ್ಯೆ ೩೮ರಲ್ಲಿ ಸೇರಿಸಿದ್ದಾರೆ ಎಂಬುದು ಅರ್ಥೈಸಿಕೊಳ್ಳುವಲ್ಲಿ ವಿಫಲರಾದ ಎನ್.ರವಿಕುಮಾರರವರು ಕೋಡಲೇ ಇಂತಹ ಹೇಳಿಕೆಗಳನ್ನು ನೀಡುವುದು ನಿಲ್ಲಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Comments
Post a Comment