ಮಾ 16 ರಂದು ಪಾಲಿಕೆ ಮುಂಗಡ ಪತ್ರ ಪೂರ್ವಭಾವಿ ಸಭೆ ಜಯ ಧ್ವಜ ನ್ಯೂಸ್ ,ರಾಯಚೂರು ಮಾ. 12- ಮಹಾನಗರ ಪಾಲಿಕೆಯಿಂದ 2026-27ನೇ ಸಾಲಿನ ಮುಂಗಡ ಪತ್ರವನ್ನು ತಯಾರಿಸಲು ಮಾರ್ಚ್ 16ರ ಬೆಳಿಗ್ಗೆ 10.30 ಗಂಟೆಗೆ ಜೋನಲ್ 01ರ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು, ನೋಂದಾಯಿತ ಸ್ಥಳೀಯ ಕಲ್ಯಾಣ ಸಂಘ, ವ್ಯಾಪಾರ, ಉದ್ಯಮ ನಡೆಸುವ ಸಂಘ-ಸಂಸ್ಥೆಗಳು ಎನ್.ಜಿ.ಓ. ಸಂಘಗಳು ಸೇರಿದಂತೆ ಇತರೆ ಪ್ರಮುಖ ನಾಗರಿಕರು ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment