ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರಗಳ ಸಂಘದ ರಾಜ್ಯ ಅಧ್ಯಕ್ಷರಾದ  ಸಿ. ಬಸವಣ್ಣನವರಿಗೆ ಅಭಿನಂದನಾ ಸಮಾರಂಭ : ನೌಕರರ ಬೇಡಿಕೆ ಈಡೇರಿಸಲು ಕೋರಿಕೆ                                                      ಜಯಧ್ವಜ ನ್ಯೂಸ್  , ರಾಯಚೂರು , ಫೆ.28- ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರಗಳ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ಬಸವಣ್ಣನವರು ಪ್ರಾದೇಶಿಕ ಕೇಂದ್ರರಾಯಚೂರು ವತಿಯಿಂದ ಫೆ.26 ರಂದು ಹಮ್ಮಿಕೊಂಡ ಅಭಿನಂದನಾ ಸಮಾರಂಭಕ್ಕೆ ರಾಯಚೂರು ವೃತ್ತಕ್ಕೆ ಆಗಮಿಸಿದಾಗ,ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ 659 ರಾಯಚೂರು ವತಿಯಿಂದ ಸ್ವಾಗತಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶ್ರೀ ಸಿ. ಬಸವಣ್ಣ ಅಧ್ಯಕ್ಷರು ಇವರು ಕವಿಪ್ರನಿ ನೌಕರ ಸಂಘಗಳ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರಿಂದ ನೌಕರರ ಬೇಡಿಕೆಗಳಾದ, 7528 ನೌಕರರನ್ನು ಒಳಗೊಂಡಂತೆ ನಿಗಮದ ಎಲ್ಲಾ ನೌಕರರಿಗೆ ಹಳೆಯ ಪಿಂಚಣಿ (ಓಪಿಎಸ್) ಜಾರಿಗೆ ಮಾಡುವುದು, ಇಂದಿನ ವರ್ಕ್ ಲೋಡ್ ನಾರ್ಮ್ಸ ಪ್ರಕಾರ ಸಿ ಮತ್ತು ಡಿ ಗುಂಪಿನ ನೌಕರರ ಹುದ್ದೆಗಳನ್ನು ಮಂಜೂರು ಮಾಡಿಸುವುದು, ಮತ್ತು ಜೆಸ್ಕಾಂ ಕಂಪನಿಯ ಎಲ್ಲಾ ನೌಕರ ಮತ್ತು ಕುಟುಂಬದವರಿಗೆ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ಮಂಜೂರು ಮಾಡಿಸುವುದು ಇನ್ನಿತರ ಬೇಡಿಕೆಗಳನ್ನು ಅಧ್ಯಕ್ಷರ ಮುಂದೆ ಕವಿಪ್ರನಿ ನೌಕರರ ಸಂಘದ ಜೆಸ್ಕಾಂ ಕಂಪನಿಯ ಉಪಾಧ್ಯಕ್ಷರಾದ ಶ್ರೀ ಜೆ. ಎಲ್.ಗೋಪಿ ಅವರು ಪ್ರಸ್ತಾಪಿಸಿದಾಗ, ಅಧ್ಯಕ್ಷರು ನೌಕರರ ಬೇಡಿಕೆಗಳಿಗೆ ಸ್ಪಂದಿಸಿ, ಅತಿ ಶೀಘ್ರದಲ್ಲಿ ನಿಮ್ಮ ಸಮಸ್ಯೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆ ಕೊಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ್ ದೇಸಾಯಿ ಮತ್ತು ಹಿರಿಯ ಸದಸ್ಯರುಗಳಾದ ಶ್ರೀ ವೆಂಕಟೇಶ್, ಶ್ರೀ ತಿಮ್ಮಾರೆಡ್ಡಿ, ಶ್ರೀ ಚಿರಂಜೀವಿ, ಶ್ರೀ ಶಿವನಗುತ್ತಿ, ಶ್ರೀ ಮಹಮ್ಮದ್  ಶಫಿ, ಶ್ರೀಧರ್, ಶ್ರೀ ರಾಘವೇಂದ್ರ, ಶ್ರೀ ರಿಯಾಜ ಅಹಮದ್,  ಶ್ರೀ ರಾಜೇಂದ್ರ, ಹೇಮಲತಾ, ಪ್ರಿಯಾಂಕ ಮುಂತಾದ ಅಧಿಕಾರಿಗಳು, ನೌಕರರು ಭಾಗವಹಿಸಿದ್ದರು.

Comments

Popular posts from this blog