ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಹೋರಾಟಕ್ಕೆ ಜಯ:                                                                                           91 ಕಾರ್ಮಿಕರಿಗೆ ಬಾಕಿ ವೇತನ ,ಪರಿಹಾರ ಪಾವತಿಗೆ ಆದೇಶ- ಕೆ.ನಾಗಲಿಂಗಸ್ವಾಮಿ.                                                                                               ಜಯ ಧ್ವಜ ನ್ಯೂಸ್, ರಾಯಚೂರು, ಮಾ.12- ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಬಾಕಿ ವೇತನ ಮತ್ತು ಪರಿಹಾರ ಪಾವತಿಗೆ ಪ್ರಾದೇಶಿಕ ಕಾರ್ಮಿಕ ಉಪ ಆಯುಕ್ತರು ಆದೇಶ ಮಾಡಿದ್ದಾರೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ ಎಐಸಿಸಿಟಿಯು ಕೇಂದ್ರ ಸಮಿತಿ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅನೇಕ ವರ್ಷಗಳಿಂದ ಕಾರ್ಮಿಕರ ಪರ ಮಾಡಿದ ಹೋರಾಟದ ಫಲವಾಗಿ ತುಂಗಭದ್ರಾ ನೀರಾವರಿಯ ವಿವಿಧ ವಿಭಾಗಗಳ ಕಾರ್ಮಿಕರಿಗೆ 43.78ಲಕ್ಷ ರೂ. ಬಾಕಿ ವೇತನ ಮತ್ತು ಪರಿಹಾರಕ್ಕೆ ಆದೇಶಿಸಲಾಗಿದೆ ಎಂದರು. ಅನೇಕ ಕಾಣದ ಕೈಗಳು ಇದನ್ನು ತಡೆಹಿಡಿದಿದ್ದವು ಆದರೆ ನಮ್ಮ ನಿರಂತರ ಪ್ರಯತ್ನದಿಂದ ಕಾರ್ಮಿಕರಿಗೆ ನ್ಯಾಯ ಸಿಕ್ಕಿದೆ ಎಂದರು .

ಕಾರ್ಮಿಕರಿಗೆ ನಿರಂತರ ಕೆಲಸ ಸಿಗಬೇಕೆಂಬುದು ನಮ್ಮ ಆಗ್ರಹವಾಗಿದೆ ಕಾರ್ಮಿಕ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದರು. ಈ ಸಂದರ್ಭದಲ್ಲಿ ಎಂ.ಬಸವರಾಜ,ಅಜೀಜ ಜಾಗೀರ್ದಾರ, ಸಿದ್ದಪ್ಪ ಗೌಡ,ರಾಜಾ ಸಾಬ್,ಲಕ್ಷ್ಮಣ,ಭೀಮಣ್ಣ, ಪ್ರಹ್ಲಾದ್ ರಾವ್ ಇನ್ನಿತರರು ಇದ್ದರು.

Comments

Popular posts from this blog