ಮಧ್ಯಪ್ರಾಚ್ಯ ಯುದ್ಧೋನ್ಮಾದ ಸ್ಥಿತಿ ಮುಂದುವರಿಕೆ:                             ಎಲ್ ಪಿ ಜಿ ಗ್ಯಾಸ್ ಪೂರೈಕೆ ಸಂಕಷ್ಟಕ್ಕೆ ಹೋಟೆಲ್ ಉದ್ಯಮೆದಾರರ ಆತಂಕ.                                                                                                               ಜಯ ಧ್ವಜ ನ್ಯೂಸ್, ರಾಯಚೂರು, ಮಾ.12-    ಇರಾನ್ ದೇಶದ ಮೇಲೆ  ಅಮೇರಿಕಾ ಹಾಗೂ ಇಸ್ರೇಲ್ ಸಮರ ಸಾರಿದ್ದು ಕಳೆದ ಕೆಲವು ದಿನಗಳಿಂದ ಯುದ್ಧ ನಡೆಯುತ್ತಿದ್ದು ಗಲ್ಫ್ ದೇಶಗಳಿಂದ ಭಾರತಕ್ಕೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ವಾಗಿದ್ದು ಇದರಿಂದ ದೇಶಾದ್ಯಂತ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಬಾಧೆ ಉಂಟಾದ ಪರಿಣಾಮ ಗ್ರಹ ಬಳಿಕೆ ಮತ್ತು ವಾಣಿಜ್ಯ ಬಳಿಕೆ ಅನಿಲ ಸಿಲೆಂಡರ್ ದರದಲ್ಲಿ ಏರಿಕೆಯಾಗಿದ್ದು ಅಲ್ಲದೆ ಕಮರ್ಷಿಯಲ್ ಅನಿಲ ಸಿಲಿಂಡರ್ ವಿತರಣೆಯಲ್ಲಿ ಸಂಕಷ್ಟ ಎದುರಾಗಿದ್ದು ಪರಿಣಾಮ ಹೋಟೆಲ್ ಉದ್ಯಮ ಆತಂಕಕ್ಕೊಳಗಾಗಿದೆ.

ಬೆಂಗಳೂರಲ್ಲಿ ಈಗಾಗಲೆ ಅಲ್ಲಿನ ಹೋಟೆಲ್ ಅಸೋಸಿಯೇಷನ್ ಹೋಟೆಲ್ ಗಳು ಬಂದಾಗಲಿವೆ ಎಂದು ಹೇಳಿದ್ದಾರೆ ಇನ್ನು ಇತರೆ ನಗರಗಳಲ್ಲಿಯೂ ಸಹ ಹೋಟೆಲ್ ಉದ್ಯಮದ ಮೇಲೆ ಗ್ಯಾಸ್ ಟ್ರಬಲ್ ನಿಂದ ಕಾರ್ಮೋಡ ಛಾಯೆ ಕಾಣತೊಡಗಿದೆ. ದೊಡ್ಡ ಹೋಟೆಲ್ಗಳು ಸೇರಿದಂತೆ ದರ್ಶನಿಗಳಲ್ಲಿ ತಿಂಡಿಗಳ ಪಟ್ಟಿಯಲ್ಲಿ ಕೆಲ ಪದಾರ್ಥಗಳನ್ನು ತೆಗೆಯಲಾಗಿದೆ.

ಗ್ಯಾಸ್ ಸರಬರಾಜುವಿನಲ್ಲಿ ಆಗಿರುವ ಅನಿಶ್ಚಿತತೆ ಕಾರಣದಿಂದ ತಿಂಡಿ ತಯಾರಿಸುವುದು ಕಷ್ಟಕರ ಮತ್ತು ದುಬಾರಿಯಾಗಿದ್ದು ಅಳೆದು ತೂಗಿ ಗ್ಯಾಸ್ ಬಳಕೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಮಸಾಲ ದೋಸೆ ಪ್ರಿಯರು ಗ್ಯಾಸ್ ಸಂಕಷ್ಟ ತಮ್ಮ ನೆಚ್ಚಿನ ಖಾದ್ಯ ಇಲ್ಲದೆಯಿರುವುದರಿಂದ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ .                                                                                
" ದಿನ ನಿತ್ಯ ನಮಗೆ ನಿಗದಿತ ಪ್ರಮಾಣದಲ್ಲಿ ಅನಿಲ ಸಿಲಿಂಡರ್ ಲಭ್ಯವಾದರೆ ಮಾತ್ರ  ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಈಗ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ಅನಿಶ್ಚಿತತೆ ಕಾರಣದಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳಲಿದೆ.".                       - ವೆಂಕಟೇಶ್ , ಮಾಲೀಕರು, ಪ್ರಜಾ ದರ್ಶಿನಿ ಹೋಟೆಲ್, ರಾಯಚೂರು.                                                   

Comments

Popular posts from this blog