ನಗರದ ವಾರ್ಡ ನಂ.02 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಭೂಮಿ ಪೂಜೆ
ಜಯ ಧ್ವಜ ನ್ಯೂಸ್, ರಾಯಚೂರು, ಮಾ.14- ವಾರ್ಡ ನಂ. 2 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ರವರು ಭೂಮಿ ಪೂಜೆ ನೆರವೇರಿಸಿದರು. ಆಶಾಪುರ ಮುಖ್ಯ ರಸ್ತೆಯಿಂದ ಎಫ್.ಸಿ.ಐ. ಕಾಂಪೌಂಡವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ 50.00 ಲಕ್ಷ ರೂ ಅನುದಾನ ಒದಗಿಸಲಾಗಿದೆ, ಅಖಿಲ್ ಅಪಾರ್ಟಮೆಂಟ್ ನಿಂದ ಏನಕ್ಲೇವ ಫೇಸ್-01 ಅಪಾರ್ಟ್ಮೆಂಟ್ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ 30.00 ಲಕ್ಷ ಅನುದಾನ ಒದಗಿಸಲಾಗಿದೆ, ಅದೇ ರೀತಿ ವಾರ್ಡಿನ ವಿಜಯನಗರ ಬಡಾವಣೆಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 1.00 ಕೋ ರೂ ಅನುದಾನ ಒದಗಿಸಲಾಗಿದೆ ಹಾಗೂ ವಾರ್ಡಿನ ಆಫಿಸರ್ ಕಾಲೋನಿ ಯಲ್ಲಿ 2.00 ಕೋ ರೂ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಎ.ವಸಂತಕುಮಾರ ಅವರು ರಾಯಚೂರು ನಗರವು ವೇಗವಾಗಿ ಬೆಳೆಯುತ್ತಿದ್ದು ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವದರಿಂದ ಕೆಕೆಆರ್.ಡಿಬಿ ಮೂಲಕ ಸಾಕಷ್ಟು ಅನುದಾನ ಒದಗಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ, ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕೆಂದು ಹೇಳಿದರು.
ಇದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಗರದ ಬಹುತೇಕ ವಾರ್ಡಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಅಲ್ಲದೇ ನಿರಂತರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಜಯಣ್ಣ, ಬಸವರಾಜ ದರೂರು, ಮಂಚಾಲ ಭೀಮಣ್ಣ, ಸಂಪಾದಕರಾದ ಆರ್.ಗುರುನಾಥ, ರಾಮಕೃಷ್ಣ ನಾಯಕ, ಅಬ್ದುಲ್ ಕರೀಮ, ಎಂ.ಕೆ.ಬಾಬರ್, ಜೆ.ಸತ್ಯನಾಥ, ಡಾ.ರಝಾಕ ಉಸ್ತಾದ, ಮುರಳಿ ಯಾದವ, ಮಟಮಾರಿ ನಾಗೇಂದ್ರಪ್ಪ, ನಿರ್ಮಲಾ ಬೆಣ್ಣಿ ಹಾಗೂ ಇತರರು ಉಪಸ್ಥಿತರಿದ್ದರು.




Comments
Post a Comment