ವಡ್ಲೂರು ಗ್ರಾಮದಲ್ಲಿ ಬಡ ಕುಟುಂಬಗಳಿಗೆ ರೈಕೆಮ್ ನಿಂದ ದಿನಸಿ ಕಿಟ್ ವಿತರಣೆ ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.12- ರೈಕೆಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ವಡ್ಲೂರು ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಮೂರು ತಿಂಗಳ ಜೀವನೋಪಾಯಕ್ಕೆ ಬೇಕಾಗುವ ದಿನಸಿ ರೇಷನ್ ಕಿಟ್ಟನ್ನು ವಿತರಣೆ ಮಾಡಲಾಯಿತು.
ಸಾಮಾಜಿಕ ಕಳಕಳಿ :ರಾಯ್ ಕಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಾಕಷ್ಟು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಬಡವರಿಗೆ ಜೀವನ ನಡೆಸಲು ಆಗದ ಕುಟುಂಬದ ಗಳಿಗೆ ಇದೇ ರೀತಿಯಾದ ಹಲವು ಸೇವೆಗಳನ್ನು ಮಾಡುತ್ತಲೇ ಬಂದಿದೆ ವಡ್ಲೂರು ಗ್ರಾಮದಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ಕಳೆದ ವಾರದ ಹಿಂದೆ ಹಮ್ಮಿಕೊಳ್ಳಲಾಗಿತ್ತು ಅದೇ ರೀತಿಯಾಗಿ ಇಂದು 10 ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು.
ಕಂಪನಿಯ ಮುಖ್ಯಸ್ಥರಾದ ಪ್ರಹ್ಲಾದ್ ರಾವ್, ನಾಗಭೂಷಣ್, ಲೀಗಲ್ ಅಡ್ವೈಸರ್ ಸ್ಫೂರ್ತಿ, ಕಲ್ಯಾಣ ಕರ್ನಾಟಕ ರೈತ ಸಂಘ ರಾಜ್ಯದ್ಯಕ್ಷರಾದ ಜಿಂದಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸೂಗೂರೆಡ್ಡಿ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



Comments
Post a Comment