ರೈಕೆಮ್ ಮೆಡಿಕೇರ್ :  ಕ್ಷಯ ರೋಗಿಗಳ ದತ್ತು ಸ್ವೀಕಾರ  ಹಾಗೂ ಪೌಷ್ಟಿಕ ಆಹಾರ ವಿತರಣೆ.                                                  ಜಯ ಧ್ವಜ ನ್ಯೂಸ್ ರಾಯಚೂರು, ಮಾ. 18- ರೈಕೆಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಕ್ಷಯ ರೋಗಿಗಳನ್ನು ದತ್ತು ಪಡೆಯುವ ಹಾಗೂ ಪೌಷ್ಟಿಕ ಆಹಾರದ ವಿತರಣೆ ಕಾರ್ಯಕ್ರಮ ಇಂದು ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

 ರಾಯಚೂರು ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ 25 ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ಟನ್ನು ವಿತರಣೆ ಮಾಡಲಾಯಿತು ಹಾಗೂ ಅವರಿಗೆ ಬೇಕಾಗುವ ಆರು ತಿಂಗಳ ಗುಣಮಟ್ಟದ ಆಹಾರವನ್ನು ಕಂಪನಿಯು ಒದಗಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ನಮ್ಮ ಕಂಪನಿಯ ವತಿಯಿಂದ ಶಕ್ತಿಮೀರಿ ಸೇವೆ ಮಾಡುತ್ತೇವೆ  ಎಂದು ಹೇಳಿದರು. ರೋಗಿಗಳಿಗೆ ತಿಂಗಳಿಗೆ ಬೇಕಾಗುವ ಪೌಷ್ಟಿಕ ಆಹಾರವನ್ನು ಕೊಡುತ್ತೇವೆ ಅದು ಉಚಿತವಾಗಿ ಕಡುಬಡತನದಲ್ಲಿರುವ ಜನರು ಅತಿ ಹೆಚ್ಚಾಗಿ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ ಏಕೆಂದರೆ ಪೌಷ್ಟಿಕ ಆಹಾರದ ಕೊರತೆ ಹಾಗೂ ಮಧ್ಯ ಸೇವನೆಯಿಂದ ದೇಹವು ಶಕ್ತಿಯನ್ನು ಕಳೆದುಕೊಳ್ಳುತ್ತದೆ ಯಾರು ಆರೋಗ್ಯದಿಂದ ಇರುವುದಿಲ್ಲವೋ ಅವರಿಗೆ ಬೇಗನೆ ಕ್ಷಯ ರೋಗವು ಹರಡುತ್ತದೆ ಎಂದು ಪ್ರಹ್ಲಾದ ರಾವ್, ರಾಯ್ಕಮ್ ,ಮುಖ್ಯ ಸ್ಥರು ಹೇಳಿದರು.


 ಜಿಲ್ಲಾ ಕ್ಷಯರೋಗ ನಿರ್ಮೂಲ ಅಧಿಕಾರಿಗಳಾದ ಎಂ ಡಿ ಶಾಕಿರ್ ಮೋಹಿಯುದ್ದೀನ್ ಮಾತನಾಡುತ್ತಾ ರಾಯ್ ಕಮ್ ಮೆಡಿಕೆರ್ ಪ್ರೈವೇಟ್ ಲಿಮಿಟೆಡ್ ಕಂಪನಿ 25 ಕ್ಷಯಾ ರೋಗಿಗಳನ್ನು ದತ್ತು ಪಡೆಯುತ್ತಿರುವುದು ಅವರು ತೋರುತ್ತಿರುವ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು ಹಾಗೂ ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯನ್ನು ಕ್ಷಯ ಮುಕ್ತ   ಜಿಲ್ಲೆಯಾಗಿ ಮಾರ್ಪಡಿಸುವುದು ನಮ್ಮ ಗುರಿಯಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕ್ಷಯ ರೋಗಿಗಳನ್ನು ದತ್ತು ಪಡೆಯುವ ಕೆಲಸ ನಿಮ್ಮ ಕಂಪನಿಯಿಂದ ಆಗಲು ಎಂದು ಹೇಳಿದರು.


 ಇದೇ ಸಂದರ್ಭದಲ್ಲಿ ಜಿಂದಪ್ಪ, ರಾಜ್ಯಾಧ್ಯಕ್ಷರು ಕಲ್ಯಾಣ ಕರ್ನಾಟಕ ರೈತ ಸಂಘ, ರಾಯ್ ಕಮ್ ಕಂಪನಿಯ  ಕಂಪ್ಲೇಂಟ್ ಆಫೀಸರ್ ಸ್ಫೂರ್ತಿ, ಅಸಿಸ್ಟೆಂಟ್ ಹೆಚ್ ಆರ್, ಸುಗುರೆಡ್ಡಿ ಗೌಡ, ನಾಗಭೂಷಣ್ ಕ್ಷಯ ರೋಗ ತಾಲೂಕು ಅಧಿಕಾರಿ, ಇನ್ನು ಮುಂತಾದ ಆರೋಗ್ಯ ಅಧಿಕಾರಿಗಳು ಭಾಗಿಯಾಗಿದ್ದರು

Comments

Popular posts from this blog