ಗಡಿ ಗ್ರಾಮಗಳ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ ಜಯ ಧ್ವಜ ನ್ಯೂಸ್ , ರಾಯಚೂರು , ಮಾ.2- ಗಡಿ ಭಾಗವಾದ ಕೊರ್ತ ಕುಂದಾ , ಡಿ ರಾಂಪುರ ಇನ್ನಿತರ ಗ್ರಾಮಗಳಿಗೆ ರಾಯಚೂರ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಮಾಡಬೇಕು ಹತ್ತು ವರ್ಷಗಳಿಂದ ವಾರ್ಷಿಕ ನಿರ್ವಹಣೆ ಮಾಡದೇ ನಿರ್ಲಕ್ಷ ತೋರಿದ ಪಿಡಬ್ಲ್ಯೂ ಅಧಿಕಾರಿಗಳ ಮೇಲೆ ಕ್ರಮ ಕೇಳಬೇಕು ಎಂದು ಸಗಮ್ ಕುಂಟ ಗ್ರಾಮದಲ್ಲಿ ಮುಖ್ಯ ರಸ್ತೆಯನ್ನು ತಡೆದು ಕಲ್ಯಾಣ ಕರ್ನಾಟಕ ರೈತ ಸಂಘದಿಂದ ರಸ್ತೆ ತಡೆ ಹೋರಾಟ ಹಮ್ಮಿಕೊಳ್ಳಲಾಯಿತು.
ಸಗಮ್ ಕುಂಟ ಯರಗುಂಟ ಶಾಖವಾದಿ ಪಲ್ಕಂ ದೊಡ್ಡಿ ಪೋತುಗಲ್ ಮೂಲಕಾ ರಾಯಚೂರಿಗೆ ಬರುವ ಮಾರ್ಗವು ಸಂಪೂರ್ಣವಾಗಿ ಹಾಳಾಗಿದ್ದು ರೈತರು ಓಡಾಡುವುದಕ್ಕೆ ಕಷ್ಟವಾಗಿದೆ ತಗ್ಗು ಗುಂಡಿಗಳು
ನಿರ್ಮಾಣವಾಗಿ ಸಾವನ್ನು ಕೈಬೀಸಿ ಕರೆಯುತ್ತಿದೆ,ಕೃಷ್ಣಾ ನದಿಯ ಬದಿಯಲ್ಲಿರುವ ಹಲವಾರು ಹಳ್ಳಿಗಳಿಂದ ರೈತರು ತಾವು ಬೆಳೆದ ಹತ್ತಿ ಭತ್ತ ಇನ್ನು ಮುಂತಾದ ಬೆಳೆಗಳನ್ನು ನಗರದ ರಾಯಚೂರು ಗಂಜ್ ಮಾರುಕಟ್ಟೆಗೆ ತರಲು ರಸ್ತೆಯನ್ನು ಅವಲಂಬಿಸಬೇಕಾಗಿದೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ತಗ್ಗು ಗುಂಡಿಗಳು ನಿರ್ಮಾಣವಾಗಿದೆ, ಸಾಕಷ್ಟು ಸಾವು ನೋವುಗಳು ಸಂಭವಿಸಿದರು ಸುಮಾರು 10 ವರ್ಷಗಳಿಂದ ಲೋಕೋಪಯೋಗಿ ಇಲಾಖೆ ಕನಿಷ್ಠ ರಸ್ತೆಯ ಗುಂಡುಗಳನ್ನು ಮುಚ್ಚಿಸುವ ಕೆಲಸ ಮಾಡಿಲ್ಲ ಆದ್ದರಿಂದ ತಗ್ಗು ಗುಂಡಿಗಳನ್ನು ಮುಚ್ಚಿಸಬೇಕು ಹಾಗೂ ಕೆಲಸ ಮಾಡದೆ ನಿರ್ಲಕ್ಷ ತೊರಿದ ಪಿ ಡಬ್ಲ್ಯೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶವನ್ನು ವ್ಯಕ್ತಪಡಿಸಿದರು ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಜಿಂದಪ್ಪ, ಜಿಲ್ಲಾಧ್ಯಕ್ಷ ರಂಗನಾಥ್, ಆಂಜನೇಯ, ಭೀಮಣ್ಣ, ಚಂದ್ರಶೇಖರ್, ಮಲ್ಲೇಶ್ ಮಾಮುಡಿ ದೊಡ್ಡಿ, ವಿಕ್ರಂ ಕುಂಬಾರ್, ಹನುಮಂತರೆಡ್ಡಿ, ಶ್ರೀನಿವಾಸ್, ಇಬ್ರಾಹಿಂ, ದತ್ತಪ್ಪ, ವೆಂಕಟೇಶ್ ಸೇರಿದಂತೆ ಸುತ್ತಮುತ್ತಲ ಗ್ರಾಮದ ರೈತರು ಗ್ರಾಮಸ್ಥರು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Comments
Post a Comment