ಮಾನಸಿಕವಾಗಿ ಭಾವನಾತ್ಮಕವಾಗಿ ಸದೃಡರಾಗಬೇಕಾಗಿದೆ - ಕಿಲ್ಲೆ ಶ್ರೀಗಳು. ಜಯ ಧ್ವಜ ನ್ಯೂಸ್ ರಾಯಚೂರು. ಮಾ.14 - ಜಿಲ್ಲಾ ಕಾರಾಗೃಹ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನಸಿಕವಾಗಿ ಭಾವನಾತ್ಮಕವಾಗಿ ಸದೃಡರಾಗಬೇಕಾಗಿದೆ ಎಂದು ಸಾವಿರ ದೇವರ ಸಂಸ್ಥಾನ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಅವರಿಂದು ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ,ಜಿಲ್ಲಾ ಕಾರಾಗೃಹ ಅಧಿಕಾರಿ ಮತ್ತು ಸಿಬ್ಬಂದಿಯವರ ಕುಟುಂಬ ಕಲ್ಯಾಣ ದಿನಾಚರಣೆ 2026 ಕಾರ್ಯ ಕ್ರಮವನ್ನು ಜ್ಯೋತಿ ಬೆಳಗಿಸಿ ಮಾತಾನಾಡಿದರು.ಹೆಚ್ಚುವರಿ ಪೋಲಿಸ್ ವರಿಷ್ಟಾದಿಕಾರಿ ಕುಮಾರ ಸ್ವಾಮಿ ಮಾತಾನಾಡುತ್ತಾ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಚರಣೆಯ ನ್ನು ಆಚರಿಸಬೇಕೆಂದು ಅಭಿಪ್ರಾಯ ಪಟ್ಟರು ಇಂತಹ ಕಾರ್ಯಕ್ರಮಗಳಿಂದ ಮಾನಸಿಕ ಸ್ಥೈರ್ಯ ಕೊಡುತ್ತದೆ ಎಂದರು.ಕರ್ತವ್ಯದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಲು ಅವಕಾಶ ನೀಡಿತ್ತಾ ಕುಟುಂಬ ಸದಸ್ಯರು ಒಂದಾಗಲು ಕರೆ ಕೊಟ್ಟರು. 2011 ರಿಂದ ಕಾರಾಗ್ರಹ ಅದಿಕಾರಿ ಸಿಬ್ಬಂದಿಯವರ ಕುಟುಂಬ ಕಲ್ಯಾ ಣ ಇಲಾಖೆ ಕಲ್ಯಾಣ ದಿನಾಚರಣೆ ಯನ್ನು ಆಚರಿಸಲಾಗುತ್ತಿದ.ಕಾ ರ್ಯಕ್ರಮದಲ್ಲಿ ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೆರ,ಹಿರಿಯ ವರದಿಗಾರ ವೀ ರನ ಗೌಡ,ಸರ್ಕಾರಿ ನೌಕರರ ಸಂ ಘದ ಅದ್ಯಕ್ಷ ಕೃಷ್ಣಾ ಶಾವಂತಗೇರ, ಜಿಲ್ಲಾ ಕಾರಾಗ್ರಹ ಅಧೀಕ್ಷಕಿ ಅನಿತಾ ಹಿರೆಮನಿ,ರಾಜ್ ಕುಮಾರ್, ಮಾನಸಿಕ ರೋಗ ತಜ್ಞ ವೈದ್ಯ ಮನೋಹರ ಪತ್ತಾರ್,ಸಿಬ್ಬಂದಿ ವಿರೂಪಾಕ್ಷಿ,, ಜೆ.ಎಂ.ದಸ್ತಗಿರಿ,ಸಾವಿತ್ರಿ,ಚಂದ್ರಕಲಾ,ಲಿಂಗಸೂಗುರು ಅದೀಕ್ಷಕ ಕರು ವೆಂಕಟೇಶ ನಾಯಕ್, ಅ ರ್ .ಎಂ.ಪಾಟಿಲ್, ಲಕ್ಷ್ಮಣ, ಕೈಲಾಸ್,ಗೋಡಿಹಾಳ, ಗೌಡ,ರಾಜಾ ಸಾಬ್,ವಿಜಯ್ ಕುಮಾರ್, ಶಿವಮಾನಪ್ಪ,ಮಹಾ ಲಕ್ಷ್ಮಿ, ಶಾಂತಮ್ಮ,ಸಿದ್ದಲಿಂಗಪ್ಪ,ಸಣ್ಣ ಲಿಂಗಪ್ಪ ಭಾಗವಹಿಸಿದ್ದರು.

Comments
Post a Comment