ಬೇಸಿಗೆ : ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಳವಡಿಕೆಯಾಗದ ನೆರಳು ನೀಡುವ ಗ್ರೀನ್ ಮ್ಯಾಟ್ ಜಯಧ್ವಜ ನ್ಯೂಸ್, ರಾಯಚೂರು,ಮಾ.17- ಬೇಸಿಗೆ ಪ್ರಾರಂಭವಾಗಿದ್ದು ಸೂರ್ಯನ ಪ್ರಖರತೆ ಏರುತ್ತಿದ್ದು ಬಿಸಿಲಿನ ತಾಪಮಾನವು ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಬಿಸಿಲಿನ ಝಳ ಅಧಿಕವಾಗತೊಡಗಿದೆ ನಗರದ ಎರೆಡು ವೃತ್ತಿಗಳಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ದ್ವಿಚಕ್ರ ವಾಹನ ಸವಾರರು ನಿಲುಗಡೆ ಮಾಡುವ ಸಮಯದಲ್ಲಿ ಬಿಸಿಲಿನಿಂದ ಕಂಗೆಡುತ್ತಾರೆ ಆದ್ದರಿಂದ ಬಸವೇಶ್ವರ ವೃತ್ತ ಮತ್ತು ಗಂಜ್ ವೃತ್ತಗಳಲ್ಲಿ ನೆರಳು ನೀಡುವ ಗ್ರೀನ್ ಮ್ಯಾಟ್ ಅಳವಡಿಸಬೇಕು ಎನ್ನುವುದು ಸಾರ್ವಜನಿಕರ, ದ್ವಿಚಕ್ರ ವಾಹನ ಸವಾರರ ಕೋರಿಕೆಯಾಗಿದೆ.
ಊಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು ಎಪ್ರಿಲ್ , ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಳವಾಗುತ್ತದೆ ಮಧ್ಯಾಹ್ನ ಸೂರ್ಯ ಬೆಂಕಿಯ ಉಂಡೆಯಂತೆ ಭಾಸವಾಗುತ್ತಾನೆ ರಸ್ತೆಯಲ್ಲಿ ಓಡಾಡುವುದು ಪ್ರಯಾಸಕರವಾಗುತ್ತದೆ ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತು ಕೊಂಡಾಗ ಬೇಗನೆ ಹಸಿರು ದೀಪ ಬೆಳಗಿ ವಾಹನ ಮುನ್ನೆಡಸಬೇಕು ಎಂಬ ಧಾವಂತ ಉಂಟಾಗುತ್ತದೆ ಪ್ರತಿ ವರ್ಷ ಬೇಸಿಗೆಯಲ್ಲಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಾಲ್ಕು ರಸ್ತೆಗಳ ಮೇಲ್ಭಾಗದಲ್ಲಿ ಗ್ರೀನ್ ಮ್ಯಾಟ್ ಅಳವಡಿಸಿಲಾಗುತ್ತದೆ ಈಗಾಗಲೆ ಬೇಸಿಗೆ ಆರಂಭವಾಗಿದ್ದರಿಂದ ಶೀಘ್ರದಲ್ಲೆ ಗ್ರೀನ್ ಮ್ಯಾಟ್ ಅಳವಡಿಕೆ ಮಾಡಬೇಕೆಂಬುದು ಜನರ ಒತ್ತಾಯವಾಗಿದೆ.


Comments
Post a Comment