ನವೋದಯ ಶಿಕ್ಷಣ ಸಂಸ್ಥೆ: ಫಾರ್ಮಸಿ, ಇಂಜಿನಿಯರಿಂಗ್ ,ನರ್ಸಿಂಗ್ , ಬಿಎಡ್ ಪದವಿ ಪ್ರದಾನ ಸಮಾರಂಭ: ಪದವಿ ಯೊಂದಿಗೆ ಕೌಶಲ್ಯತೆ ವೃದ್ಧಿಸಿಕೊಳ್ಳಿ- ಪ್ರೋ.ವೆಂಕಪ್ಪಯ್ಯ .ಆರ್. ದೇಸಾಯಿ ಜಯ ಧ್ವಜ ನ್ಯೂಸ್, ರಾಯಚೂರು, ಮಾ.7- ವಿದ್ಯಾರ್ಥಿಗಳು ಪದವಿ ಯೊಂದಿಗೆ ಕೌಶಲ್ಯವನ್ನು ಅಳವಡಿಸಿಕೊಂಡರೆ ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವೆಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ನಿರ್ದೇಶಕ ಪ್ರೋ.ವೆಂಕಪ್ಪಯ್ಯ .ಆರ್. ದೇಸಾಯಿ ಹೇಳಿದರು.
ಅವರಿಂದು ನವೋದಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಎರಡನೆ ದಿನದ ಪದವಿ ಪ್ರದಾನ ಸಮಾರಂಭದಲ್ಲಿ ಇಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್ ಹಾಗೂ ಇನ್ನಿತರರು ಪದವಿಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಿ ಮಾತನಾಡಾದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರೆ ಸಾಲದು ಬದಲಾಗಿ ಅಂಕಗಳೊಂದಿಗೆ ಕೌಶಲ್ಯತೆ ಸೃಜನಶೀಲತೆ ಅಳವಡಿಸಿಕೊಂಡರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯಗಳಿಸಲು ಹಾಗೂ ವೃತ್ತಿಯಲ್ಲಿ ಉನ್ನತ ಸಾಧನೆಗೈಯಲು ಸಾಧ್ಯವೆಂದರು. ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಎಲ್ಲೆಡೆ ಆಳುವ ಸನ್ನಿವೇಶ ಬರಲಿದ್ದು ಆಗ ನಾವು ನಮ್ಮ ಕೌಶಲ್ಯವನ್ನು ವೃದ್ದಿಸಿಕೊಂಡಾಗ ಮಾತ್ರ ವೃತ್ತಿಯಲ್ಲಿ ಪೈಪೋಟಿಗಿಳಿಯಲು ಸಾಧ್ಯವೆಂದರು.
ಪದವಿ ಅನುಮತಿಪತ್ರವಿದ್ದಂತೆ ಅದನ್ನೆ ಸಾಧನೆಯೆಂದು ತಿಳಿದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು. ಜಪಾನ್ ದೇಶದಲ್ಲಿ ಯಾವುದೇ ಕೀಳರಿಮೆಯಿಲ್ಲದೆ ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರ ತರಗತಿವರೆಗೆ ಅಲ್ಲಿಯ ವಿದ್ಯಾರ್ಥಿಗಳೆ ತರಗತಿಗಳಲ್ಲಿ ಕಸಗುಡಿಸಿ ಸ್ವಚ್ಚವಾಗಿಟ್ಟುಕೊಳ್ಳುತ್ತಾರೆ ನಮ್ಮಲ್ಲಿ ಪ್ರಾಮಾಣಿಕತೆ ಮತ್ತು ದೇಶದ ಬಗ್ಗೆ ಹೆಮ್ಮೆಯಿದ್ದಾಗ ಮಾತ್ರ ನಾವು ಈ ಪುಣ್ಯಭೂಮಿಯಲ್ಲಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದರು. ನಮ್ಮ ದೇಶದಲ್ಲಿ ನೀರು ಗಾಳಿ ಕಲುಷಿತವಾಗುತ್ತಿದೆ ಅದನ್ನು ಸರಿ ಪಡಿಸದಿದ್ದರೆ ಗಂಡಾಂತರ ಗ್ಯಾರಂಟಿ ಎಂದರು. ಅಗ್ನಿಹೋತ್ರದಿಂದ ಗಾಳಿ ಶುದ್ದಿಕರಣ ಸಾಧ್ಯವೆಂದರು. ನಮ್ಮ ನಾಗರೀಕತೆ ಶ್ರೇಷ್ಟ ನಾಗರೀಕತೆಯಾಗಿದ್ದು ನಮ್ಮ ಕಲೆ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ನವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಆರ್.ರೆಡ್ಡಿ.ಮಾತನಾಡಿ ವೃತ್ತಿಪರತೆ, ಪ್ರಾಮಾಣಿಕತೆ ನಮ್ಮ ಧ್ಯೇಯವಾಗಿರಬೇಕು ಗ್ರಾಮೀಣ ಪ್ರದೇಶ, ಬಡವರ ಬಗ್ಗೆ ನಾವು ಯೋಚಿಸಬೇಕು ಸಹೋದ್ಯೋಗಿಗಳೊಂದಿಗೆ ನಯ ವಿನಯ ಶೀಲರಾಗಿರಬೇಕು ತರಗತಿಗಳಿಂದ ಸಮಾಜಕ್ಕೆ ನಮ್ಮ ಕೊಡುಗೆ ವಿಸ್ತರಿಸಬೇಕೆಂದರು. ನಿರಂತರ ಪ್ರಯತ್ನ ಬದ್ಧತೆ ವಿಫಲತೆಗೆ ಎದೆಗುಂದದೆ ಮುನ್ನುಗ್ಗಬೇಕೆಂದರು. ನಮ್ಮ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು ಹೆಮ್ಮೆಯ ಸಂಗತಿ ಎಂದರು. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ, ಪದಕ ವಿತರಿಸಲಾಯಿತು. ಡಾ.ಅಮೃತರೆಡ್ಡಿ ಸ್ವಾಗತಿಸಿದರು . ವೇದಿಕೆ ಮೇಲೆ ರಿಜಿಸ್ಟ್ರಾರ್ ಟಿ.ಶ್ರೀನಿವಾಸ, ಡಾ.ರಾಮಮೋಹನ ಗುಪ್ತಾ,ಡಾ.ಆನಂದ ಎ.ಎಸ್,ಡಾ.ಗಿರೀಶ್ ಕಟ್ಟಿ, ಡಾ.ಕೌಶಿಕರೆಡ್ಡಿ,ಡಾ.ದೊಡ್ಡಯ್ಯ, ಡಾ.ಮಲ್ಲಿಕಾರ್ಜುನ್ , ಡಾ.ಕಾಜೋಲ್ ಇನ್ನಿತರರು ಇದ್ದರು.




Comments
Post a Comment