ಶಿವನಗೌಡ ನಾಯಕರಿಂದ ಸಚಿವ ಮಹಾದೇವಪ್ಪ ರವರಿಗೆ ನಿಂದನೆ ಕ್ರಮಕ್ಕೆ ವಿಳಂಬವೇಕೆ- ವಿಶ್ವನಾಥ್ ಪಟ್ಟಿ. ಜಯ ಧ್ವಜ ನ್ಯೂಸ್ , ರಾಯಚೂರು , ಮಾ.12- ಸಚಿವ ಹೆಚ್.ಸಿ.ಮಹಾದೇವಪ್ಪರವರಿಗೆ ನಿಂದನೆ ಮಾಡಿದ ಮಾಜಿ ಸಚಿವ ಕೆ.ಶಿವನಗೌಡ ನಾಯಕರ ಮೇಲೆ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿರುವುದೇಕೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ ಪ್ರಶ್ನಿಸಿದರು .
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಿತ್ರದುರ್ಗದಲ್ಲಿ ನಡೆದ ಸಭೆಯೊಂದರಲ್ಲಿ ಮಹಾದೇವಪ್ಪರವರಿಗೆ ಕಪಾಳ ಮೋಕ್ಷ ಮಾಡುತ್ತೇನೆಂದು ಹೇಳಿದ್ದು ಖಂಡನೀಯವಾಗಿದ್ದು ಅವರ ಮೇಲೆ ಕ್ರಮ ವಹಿಸಲು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಪ್ರಕರಣವೇಕೆ ದಾಖಲಿಸಿಲ್ಲವೆಂದು ಪೊಲೀಸ್ ಇಲಾಖೆಗೆ ಪ್ರಶ್ನಿಸಿದರು. ಪ್ರಕರಣ ದಾಖಲಿಸಲು ವಿಳಂಬ ಮಾಡಿದರೆ ಮಹಾಸಭಾ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಂ.ವಸಂತ, ವಿಜಯ್ ಪ್ರಸಾದ್,ತಮ್ಮಣ್ಣ, ಪ್ರಕಾಶ್ ,ಬಾಬು ಬಾಜಿ, ಪುಷ್ಪರಾಜ್, ಪಾರ್ಥಸಾರಥಿ ಇನ್ನಿತರರು ಇದ್ದರು.


Comments
Post a Comment