ಬಾಗಲಕೋಟೆ ಉಪಚುನಾವಣೆ: ವಸಂತ ಕುಮಾರ್ ಹೆಗಲಿಗೆ ಚುನಾವಣೆ ಉಸ್ತುವಾರಿ ಸಮಿತಿ ಜವಾಬ್ದಾರಿ.                                                                                               ಜಯ ಧ್ವಜ ನ್ಯೂಸ್, ರಾಯಚೂರು, ಮಾ.9- ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು.ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎ.ವಸಂತ ಕುಮಾರ್ ರವರನ್ನು ಸಮಿತಿ ಸಂಚಾಲಕ ರನ್ನಾಗಿ ಮಾಡಿ ಅವರ ಹೆಗಲಿಗೆ ಸಮಿತಿ ಜವಾಬ್ದಾರಿ ನೀಡಲಾಗಿದೆ. ಸಮಿತಿಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರು,  ಸಚಿವರಾದ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಿವರಾಜ್ ತಂಗಡಗಿ, ಶರಣಬಸಪ್ಪ ದರ್ಶನಾಪೂರು, ಭೈರತಿ ಸುರೇಶ್,ರಹೀಮ್ ಖಾನ್, ಶಾಸಕರಾದ ಸಿ.ಎಸ್.ನಾಡಗೌಡ,  ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ರಾಜಶೇಖರ ಪಾಟೀಲ,  ವಿಧಾನಪರಿಷತ ಸದಸ್ಯರಾದ ಜಕ್ಕಪ್ಪನವರ್, ಬಸನಗೌಡ ಬಾದರ್ಲಿ, ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಒಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಯು ಸಂಭಾವ್ಯ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡುವುದು ಹಾಗು ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಅಗತ್ಯ ಕ್ರಮ ವಹಿಸುವುದು ಮತ್ತು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಕೆಪಿಸಿಸಿಗೆ ವರದಿಯನ್ನು ಸಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋರಿದ್ದಾರೆ.

Comments

Popular posts from this blog