ರಾಯಚೂರು ನಗರದ ಎಲ್ಲಾ  ಪತ್ರಕರ್ತರ ಆರೋಗ್ಯ ವಿಮೆ ಹಾಗೂ ತುರ್ತು ನಿಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ

                       

 ಜಯ ಧ್ವಜ ನ್ಯೂಸ್ ,ರಾಯಚೂರು,ಮಾ.16-  ನಗರದ ಎಲ್ಲಾ  ಪತ್ರಕರ್ತರ ಆರೋಗ್ಯ ವಿಮೆ ಹಾಗೂ ತುರ್ತು ನಿಧಿಗೆ ಮಹಾನಗರ ಪಾಲಿಕೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಕೋರಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಇಂದು ಅವರ ಕಛೇರಿಯಲ್ಲಿ  ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಪತ್ರ  ಸಲ್ಲಿಸಲಾಯಿತು .


             ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಸ್ಥಾಪನೆಯಾಗಿ 25 ವರ್ಷಗಳು ಪೂರೈಸಿದ್ದು ನಗರದ ಅಭಿವೃದ್ಧಿಯಲ್ಲಿ ಪತ್ರಿಕೆಗಳು ಹಾಗೂ ಪತ್ರಕರ್ತರು ಅಗತ್ಯ ಸಹಕಾರ ನೀಡುತ್ತಿದ್ದಾರೆ.

ಈ ಹಿಂದಿನ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅಧ್ಯಕ್ಷತೆಯಲ್ಲಿ ತಮ್ಮ ಘನ ಉಪಸ್ಥಿತಿ ಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪತ್ರಕರ್ತರ ಆರೋಗ್ಯ ವಿಮೆಗಾಗಿ 25 ಲಕ್ಷ ರೂಪಾಯಿಗಳ ಅನುದಾನ ಮೀಸಲಿಡಲು ತೀರ್ಮಾನ ಮಾಡಿರುವುದು ಶ್ಲಾಘನೀಯ ಅದಕ್ಕೆ ಅಭಾರಿಯಾಗಿದ್ದು. ಈ ವರ್ಷದ ಬಜೆಟ್ ನಲ್ಲೂ ಅನುದಾನ ಒದಗಿಸಿ ಅನುಷ್ಠಾನಕ್ಕೆ ತರಲು  ವಿನಂತಿಸಿಕೊಳ್ಳಲಾಯಿತು.


ಅಲ್ಲದೆ, ರಾಯಚೂರು ರಿಪೋರ್ಟರ‌್ಸ್ ಗಿಲ್ಡ್  ಪತ್ರಕರ್ತರ ‌ತುರ್ತು ನಿಧಿ ಆರಂಭಿಸಲಾಗಿದೆ ಈ ನಿಧಿಯ ಮೂಲಕ ಇತ್ತೀಚಿಗೆ ಹೃದಯಾ ಘಾತದಿಂದ ಮೃತಪಟ್ಟ ಹಿರಿಯ‌ ಪತ್ರಕರ್ತನ‌ ಕುಟುಂಬಕ್ಕೆ ವಿಧಾನ ಪರಿಷತ್ ಸರ್ಕಾರದ ಸಚೇತಕರಾದ ಮಹಮ್ಮದ್ ಸಲೀಂ ಆಹ್ಮದ್ ಅವರ ಮೂಲಕ 1 ಲಕ್ಷ ಮೊತ್ತದ ಪರಿಹಾರ ವಿತರಿಸಿ ಆಸರೆಯಾಗಿದ್ದೇವೆ. ಹಾಗಾಗಿ, ತುರ್ತು ನಿಧಿಗೂ 10 ಲಕ್ಷ ರೂಪಾಯಿಗಳ ನೆರವು ಬಜೆಟ್ ನಲ್ಲಿ ಒದಗಿಸಲು ಈ ಮೂಲಕ ಕೋರಲಾಯಿತು.


ಈ ಸಂದರ್ಭದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಹಿರಿಯ ಕಿರಿಯ ಪತ್ರಕರ್ತರು, ಛಾಯಾಗ್ರಾಹಕರು ಉಪಸ್ಥಿತರಿದ್ದರು.



Comments

Popular posts from this blog