ಗ್ಯಾಸ್ ಸಿಲಿಂಡರ್ ಅಭಾವ : ಹೋಟೆಲ್ ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಏರಿಕೆ. ಜಯ ಧ್ವಜ ನ್ಯೂಸ್, ರಾಯಚೂರು,ಏ.1- ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಿಲ್ಲದ ಕಾರಣ ಅನಿಲ ಸಿಲಿಂಡರ್ ಅಭಾವ ಹಿನ್ನೆಲೆ ಹೋಟೆಲ್ ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಏರಿಕೆಯಾಗಿದ್ದು ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಸುಮಾರು 10-15 ರೂ. ವರೆಗೂ ತಿಂಡಿಗಳ ಬೆಲೆ ಏರಿಸಲಾಗಿದೆ ಹೋಟೆಲ್ ಗಳ ಶ್ರೇಣಿಗನುಗುಣವಾಗಿ ತಿಂಡಿ ಬೆಲೆ ಹೆಚ್ಚಿಸಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧ ನಿರಂತವಾಗಿ ನಡೆಯುತ್ತಿದ್ದು ಇರಾನ್ ಹಿಡಿತದಲ್ಲಿರುವ ಹಾರ್ಮೋಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಕಡಿವಾಣ ಹಿನ್ನೆಲೆ ಮೊದಲಿನಂತೆ ಅನಿಲ ಹಾಗೂ ತೈಲೋತ್ಪನ್ನಗಳ ಸಾಗಿಸುವ ಹಡಗುಗಳ ಸಂಚಾರವಿರದ ಕಾರಣ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಅನಿಲ ಅಭಾವ ಸೃಷ್ಟಿಯಾಗಿದೆ ರಾಜ್ಯದಲ್ಲಿ ವಾಣಿಜ್ಯ ಹಾಗೂ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಲಭ್ಯತೆ ಕುಂಠಿತವಾದ ಕಾರಣ ಹೋಟೆಲ್ ಗಳಲ್ಲಿ ಬೆಲೆ ಏರಿಕೆ ಮಾಡಲಾಗಿದೆ ಕೆಲವು ಹೋಟೆಲ್ ಗಳಲ್ಲಿ ತಿಂಡಿ ತಿನಿಸುಗಳ ಪಟ್ಟಿಯಲ್ಲಿ ಕಡಿತ ಮಾಡಲಾಗಿದೆ ಕೆಲ ಹೋಟೆಲ್ ಗಳು ಬಾಗಿಲು ಹಾಕುವ ಹಂತಕ್ಕೆ ತಲುಪಿವೆ ಒಟ್ಟಾರೆ ಯುದ್ಧದ ಪರಿಣಾಮ ಸಾಮಾನ್ಯ ಜನರ ಮೇಲೆ ಗಧಾ ಪ್ರಹಾರ ಮಾಡುತ್ತಿದೆ.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೋಟೆಲ್ ಗಳಲ್ಲಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.


Comments
Post a Comment