ಖರ್ಗೆ ಕುರಿತು ಹಿಮಂತ್ ಬಿಸ್ವ ಶರ್ಮಾ ಹೇಳಿಕೆ ಖಂಡನೀಯ:     ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಗೆಲುವು ಖಚಿತ- ವಸಂತ ಕುಮಾರ್.                                                                                                                      ಜಯ ಧ್ವಜ ನ್ಯೂಸ್, ರಾಯಚೂರು, ಏ.10- ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದು ಖಂಡನೀಯವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎ.ವಸಂತ ಕುಮಾರ್ ಹೇಳಿದರು. ಅವರಿಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಹಿಮಂತ್ ಶರ್ಮಾ ಈ ಹಿಂದೆ ಕಾಂಗ್ರೆಸ್ ನಲ್ಲಿದ್ದರು ಅವರು ಮಂತ್ರಿ ಸಹ ಆಗಿದ್ದರು ಅವರು ಭ್ರಷ್ಟಾಚಾರ ಎಸಗಿದ್ದರಿಂದ ಅವರ ಮೇಲೆ ಸಿಬಿಐ ತನಿಖೆ ಸಹ ನಡೆಯಿತು ತದನಂತರ ಅವರು ಬಿಜೆಪಿ ಸೇರಿದ ತಕ್ಷಣ ಕಳಂಕ ರಹಿತರಾದರು ಎಷ್ಟೆ ಭ್ರಷ್ಟಾಚಾರವೆಸಗಿದ್ದರು ಬಿಜೆಪಿ ಸೇರಿದ ಕೂಡಲೆ ಅವರು ಪ್ರಾಮಾಣಿಕರಾಗಿಬಿಡುತ್ತಾರೆ ಎಂದು ಲೇವಡಿ ಮಾಡಿದರು. ಹಿಮಂತ್ ರವರ ಪತ್ನಿ ಮೂರು ದೇಶಗಳ ಪಾಸ್ ಪೋರ್ಟ್ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ದೂರಿದರು.

ಹಿಮಂತ್ ಶರ್ಮಾ ಶಾರದಾ ಚಿಟ್ ಫಂಡ್ ಹಾಗೂ ಅಮೇರಿಕಾ ಮೂಲದ ನಿರ್ಮಾಣ ಸಂಸ್ಥೆಗೆ ಕಾಮಗಾರಿ ವಹಿಸಲು 9 ಸಾವಿರ ಕೋಟಿ ಹಣ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸ್ವತಃ ನಿರ್ಮಾಣ ಸಂಸ್ಥೆ ಅಮೇರಿಕಾದ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದೆ ಅಲ್ಲದೆ ಅವರು ವಿದ್ಯಾರ್ಥಿಯಾಗಿದ್ದಾಗ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು ಎಂಬ ಆರೋಪ ಸಹ ಅವರ ಮೇಲಿದೆ ಇಂತಹ ಕಳಂಕವಿರುವ ವ್ಯಕ್ತಿ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದಿದ್ದು ಎಷ್ಟು ಸರಿ ಎಂದರು. ಬಿಜೆಪಿ ಮತ್ತು ಆರೆಸ್ಸೆಸ್ ಕೆಲವು ಜನರನ್ನು ಕಾಂಗ್ರೆಸ್ ವಿರುದ್ಧವೆ ಮಾತನಾಡಲು ಇಟ್ಟುಕೊಂಡಿದೆ ಅನಂತ ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಉಚ್ಚಾಟಿತ ಬಸನಗೌಡ ಪಾಟೀಲ್ ಯತ್ನಾಳ್ ಮುಂತಾದವರು ಇದ್ದಾರೆ ಇವರ ಮಾತುಗಳಿಗೆ ನಮ್ಮ ಪಕ್ಷ ಹೆದರುವುದಿಲ್ಲವೆಂದರು.

ಖರ್ಗೆಯವರು ಚುನಾವಣಾ ಭಾಷಣದಲ್ಲಿ ಬಿಜೆಪಿ ಆರೆಸ್ಸೆಸ್ ಬಗ್ಗೆ ಟೀಕಿಸಿದ್ದನ್ನು ಸಮರ್ಥಿಸಿದ ಅವರು ಉದಾಹರಣೆ ನೀಡಿದ್ದಾರೆ ಇದರಲ್ಲಿ ಅತಿಶಯೋಕ್ತಿಯೇನಿಲ್ಲ ನಿಜವಾಗಲು ಆರೆಸ್ಸೆಸ್ ವಿಷ ಜಂತುವಿದ್ದಂತೆ ಎಂದರು. ನಿನ್ನೆ ನಡೆದ ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಲ್ಲಾ ಸಮಾಜದವರು ಬೆಂಬಲಿಸಿದ್ದಾರೆ ಸಿಎಂ ಆದಿಯಾಗಿ ನಾವೆಲ್ಲರೂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೆವು ಎಂದರು. ದಾವಣೆಗೇರಿಯಲ್ಲೂ ಸಹ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದ ಅವರು ಸರ್ಕಾರ ಸುಭದ್ರವಾಗಿದೆ ಉಪಚುನಾವಣೆ ಯಾವುದೆ ಪರಿಣಾಮ ಸರ್ಕಾರದ ಮೇಲೆ ಬೀರುವ ಪ್ರಶ್ನೆಯಿಲ್ಲವೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಮುಖಂಡರಾದ ದರೂರು ಬಸವರಾಜ, ಅಸ್ಲಾಂ ಪಾಶಾ, ಅಬ್ದುಲ್ ಕರೀಂ, ಎಂ.ಕೆ.ಬಾಬರ್, ಡಿ.ಕೆ.ಮುರಳಿಯಾದವ,
ಡಾ.ರಝಾಕ್ ಉಸ್ತಾದ್, ಟಿ.ಮಾರೆಪ್ಪ,   ಇನ್ನಿತರರು ಇದ್ದರು.

Comments

Popular posts from this blog