ಶೋಷಿತ ಸಮುದಾಯಗಳ ಘನತೆ ಹೆಚ್ಚಿಸಿದವರು ಅಂಬೇಡ್ಕರ್ ರವರು
ಜಯ ಧ್ವಜ ನ್ಯೂಸ್ ರಾಯಚೂರು, ಏ.14- ವಂಚಿತ ಸಮುದಾಯಗಳು ಘನತೆಯನ್ನು ಮರಳಿ ಪಡೆಯುವುದಕ್ಕಾಗಿ ಅದ್ಯಯನ, ಹೋರಾಟ, ರಾಜಕೀಯ, ಸಂಘಟನೆ ನಡೆಸಿದ ಅಂಬೇಡ್ಕರ್ ಅವರ ಹಾದಿಯಲ್ಲಿ ಹೆಜ್ಜೆ ಇಡುತ್ತಲೇ ಜೊತೆ ಜೊತೆಗೆ ಆ ದಾರಿಯನ್ನು ಗ್ರಹಿಸಲು ಪ್ರಾಮಾಣಿಕತೆ ಮತ್ತು ಬದ್ಧತೆ ಬೆಳೆಸಿಕೊಳ್ಳಬೇಕಾಗಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಹೇಳಿದರು.
ಅವರು ಆಕಾಶವಾಣಿಯಲ್ಲಿ ನಡೆದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು .
ಈ ದೇಶದ ಪ್ರತಿಯೊಬ್ಬ ಪ್ರಜೆ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳಲೇಬೇಕು,ಯಾಕೆಂದರೆ ನಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲಿ ಅಂಬೇಡ್ಕರ್ ಅವರ ಆದರ್ಶ ಸಂವಿಧಾನದ ಇದೆ ಅನ್ನುವುದು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಮುಖ್ಯವಾಗಿ ಅಂಬೇಡ್ಕರ್ ಅವರ ಕನಸಿನ ಸಂವಿಧಾನದ ಆಶಯಗಳಿಂದ ಈ ದೇಶ ಪ್ರಗತಿ ಕಂಡಿದೆ ಇದಕ್ಕೆ ಕೇವಲ ಪ್ರಭುತ್ವವನ್ನು ದೂಷಿಸಿ ಫಲವಿಲ್ಲ. ಸಮಕಾಲೀನ ಸಂದರ್ಭದಲ್ಲಿ ಸಂವಿಧಾನದ ಸ್ವಾತಂತ್ರ್ಯ ಮತ್ತು ಸಮಾನತೆ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯದ ಕರ್ತವ್ಯಗಳನ್ನು ಅನುಷ್ಠಾನಗೊಳಿಸಲು ವಿಫಲರಾಗಿದ್ದು ಹೇಗೆ? ಇಲ್ಲಿ ನಾಗರಿಕ ಸಮಾಜದ ಹೊಣೆಗಾರಿಕೆಯ ಪಾಲು ಎಷ್ಟಿದೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂದರ್ಭದಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಅರವಿಂದಾಕ್ಷಣ ಅವರು ಮಾತನಾಡಿ ಅಂಬೇಡ್ಕರ್ ಅಂದರೆ ಎಸ್ಸಿ ಎಸ್ ಟಿ ಗಳಿಗೆ ಮಾತ್ರ ಎಂದು ತಿಳಿದುಕೊಳ್ಳದೆ, ಅವರು ಎಲ್ಲಾ ಸಮುದಾಯಗಳ ಸುಧಾರಕರು ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ.ಈ ಕಾರ್ಯಕ್ರಮದಲ್ಲಿ ತಾಂತ್ರಿಕ ವಿಭಾಗದ ಶರಣಬಸ್ಸಪ್ಪ, ಕ್ರಿಷ್ಣಮೂರ್ತಿ, ಆಡಳಿತ ವಿಭಾಗದ ನಾಗಮಣಿ, ಉದ್ಘೋಷಕರಾದ ಶ್ರೀದೇವಿ,ಸಮತಾ,ನಾಗರತ್ನ, ನರಸಿಂಹಲು,ನರೇಂದ್ರ,ಉಮೇಶ್ ,ಪರಶುರಾಮ್ ಸೇರಿದಂತೆ ಇತರರು ಇದ್ದರು.

Comments
Post a Comment