ಶಿವಸೇನಾ ವತಿಯಿಂದ ಏ.11 ರಂದು ಮಾತೃವಂದನ ಕಾರ್ಯಕ್ರಮ -ರಾಜಾಚಂದ್ರ.                                     ಜಯ ಧ್ವಜ ನ್ಯೂಸ್ ರಾಯಚೂರು,ಏ.9-                ಶಿವಸೇನಾ(ಏಕನಾಥ ಶಿಂಧೆ ಬಣ ) ದಿಂದ ಏ.11 ರಂದು ನಗರದಲ್ಲಿ ಮಾತೃವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಸೇನಾ ಜಿಲ್ಲಾ ಅಧ್ಯಕ್ಷ ರಾಜಾ ಚಂದ್ರ ರಾಮನಗೌಡ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 5ಕ್ಕೆ ನಗರದ ರಾಮಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗಸ್ವಾಮಿಜೀ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆಂದರು.

ರಾಷ್ಟ್ರೀಯತೆ, ದೇಶಭಕ್ತಿ ಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದರು.             ಈ ಸಂದರ್ಭದಲ್ಲಿ ಹರೀಶ್ ಮಡಿವಾಳ,ಪ್ರಭು, ವಿರೇಂದ್ರ ಗೌಳಿ, ಸಂತೋಷ ಗುಡಿ ಇದ್ದರು.

Comments

Popular posts from this blog