ನಾಯಕ ಸಮಾಜದಿಂದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನ ಆಚರಣೆ
ಜಯ ಧ್ವಜ ನ್ಯೂಸ್ ,ರಾಯಚೂರು, ಏ.18- ನಗರದಲ್ಲಿನ ಆದಿಕವಿ ಭಗವಾನ್ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಇಂದು ನಾಯಕ ಸಮಾಜದಿಂದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಹಾಗೂ ಶ್ರೀ ಹರಿಹರ ಬುಕ್ಕರಾಯರು, ಶ್ರೀ ಗಂಡುಗಲಿ ಕುಮಾರರಾಮ ಹಾಗೂ ಶ್ರೀಕೃಷ್ಣ ದೇವರಾಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಹಿರಿಯ ಪತ್ರಕರ್ತರು ಹಾಗೂ ಸಮಾಜದ ಮುಖಂಡರಾದ ಭೀಮರಾಯ ಹದ್ದಿನಾಳ ಅವರು ಮಾತನಾಡಿ, ಪ್ರತಿ ವರ್ಷ ಎಪ್ರಿಲ್ 18 ರಂದು ರಾಜ್ಯದ ಅನೇಕ ನಗರ ಪಟ್ಟಣ ಹಾಗೂ ಗ್ರಾಮದಲ್ಲಿಯೂ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನ ದಿನವನ್ನಾಗಿ ಆಚರಿಸಲಾಗುತ್ತಿದೆ.
ನಾಯಕ ರತ್ನಗಳಾದ ಹರಿಹರ ಬುಕ್ಕರಾಯರು (ಹಕ್ಕ-ಬುಕ್ಕ) ಗಂಡು ಲಿ ಕುಮಾರರಾಮ, ಶ್ರೀಕೃಷ್ಣದೇವರಾಯರ ಸ್ಮರಣೆ ಮಾಡಲಾಗುತ್ತದೆ.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದಂತೆ ವಾಲ್ಮೀಕಿನಾಯಕ ಸಮುದಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿಮತ್ತು ಸಾಮಾಜಿಕವಾಗಿ ಮುಂದೆ ಬರಬೇಕು. ಹಕ್ಕ ಬುಕ್ಕರು, ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯ ಇವರೆಲ್ಲರ ಧೈರ್ಯ, ಸಾಹಸಗಳನ್ನು ಆದರ್ಶವಾಗಿ ಮಾಡಿಕೊಂಡುಸಮುದಾಯ ತಮ್ಮ ದೈನಂದಿನ ಜೀವನದಲ್ಲಿಅಭಿವೃದ್ಧಿಯಾಗಬೇಕಾಗಿದೆ ಎಂದು ಕರೆ ನೀಡಿದರು.
ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಮಾತನಾಡಿ,
ಕುಮ್ಮಟ ದುರ್ಗದ ರಾಜ ಮತ್ತು ಹಕ್ಕ ಬುಕ್ಕರ ಸೋದರಮಾವನಾಗಿದ್ದ ಗಂಡುಗಲಿ ಕುಮಾರ ರಾಮನ ಕನಸಾದ ವಿಜಯನಗರ ಸಾಮ್ರಾಜ್ಯವನ್ನು ಶ್ರೀ ಹರಿಹರ ಬುಕ್ಕರಾಯರು ೧೮-೦೪-೧೩೩೬ ರಲ್ಲಿ ಸ್ಥಾಪನೆ ಮಾಡಿ
೨೦೨೬ ಕ್ಕೆ ೬೯೧ ವರ್ಷಗಳಾದವು. ಕಂಪಲಿ ಸಂಸ್ಥಾನದ ಮುಮ್ಮಡಿಸಿಂಗನಾಯಕನ ಮಗ ವೀರ ಕಂಪಿಲರಾಯನ ಮೊಮ್ಮಕ್ಕಳೇ ಹಕ್ಕಬುಕ್ಕರು ಆಗಿದ್ದಾರೆ. ಅಂದರೆ ಗಂಡುಗಲಿಕುಮಾರರಾಮನ ಸಹೋದರಿ ಮಾರೆವ್ವ ಅವರನ್ನು ಬುಕ್ಕಭೂಪಾಲನಾಯಕನ ಮಗ ಸಂಗಮದೇವನಿಗೆ ಕೊಟ್ಟುಮದುವೆ ಮಾಡಲಾಗಿತ್ತು. ಇನ್ನೊಬ್ಬ ಸಹೋದರಿ ಸಿಂಗಮ್ಮಳನ್ನು ಕಾಮಗೇತಿ ನಾಯಕನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ಈ ಸಂಗಮದೇವ ಕುಮಾರರಾಮನ ಭಾವ ಆಗಿದ್ದರಿಂದಈತನಿಗೆ ಭಾವ ಸಂಗಮ ಎಂದು ಕೂಡ ಕರೆಯಲಾಗುತ್ತಿತ್ತು. ಸಂಗಮದೇವ ಮತ್ತು ಮಾರೆವ್ವರ ಮಕ್ಕಳೇ ಈ ಹಕ್ಕಬುಕ್ಕರು ಆಗಿದ್ದಾರೆ. ಇವರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು. ಇನ್ನೊಬ್ಬ ಸಹೋದರಿ ಸಿಂಗಮ್ಮ ಹಾಗೂ ಕಾಮಗೇತಿ ನಾಯಕನ ಮಗನೇ ಚಿತ್ರ ನಾಯಕ. ಈ ಚಿತ್ರ ನಾಯಕ ಚಿತ್ರದುರ್ಗ ಸಂಸ್ಥಾನ ಸ್ಥಾಪನೆ ಮಾಡಿದರು. ಹರಿಹರ ಮತ್ತು ಬುಕ್ಕರಾಯರು ಸಂಗಮನ ಮಕ್ಕಳಾಗಿದ್ದರಿಂದ ಇವರು ಸಂಗಮ ವಂಶಸ್ಥರಾದರು. ಚಿತ್ರ ನಾಯಕ ಕಾಮಗೇತಿ ನಾಯಕರ ಪುತ್ರನಾಗಿದ್ದರಿಂದ ಚಿತ್ರದುರ್ಗ ಅರಸರು ಕಾಮಗೇತಿ ವಂಶಸ್ಥರಾದರು.
ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದವರು ಮತ್ತು ಚಿತ್ರದುರ್ಗ ಸ್ಥಾಪಕರು ಹಾಗೂ ಅವರ ಇಡೀ ಪರಿವಾರವೇ ನಾಯಕ ಸಮುದಾಯವಾಗಿದೆ. ಅವರೆಲ್ಲರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿ ಆಗಬೇಕು ಎಂದು ಕರೆ ನೀಡಿದರು.
ವಾಲ್ಮೀಕಿ ನಾಯಕ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಂ.ಎಸ್.ಗೋನಾಳ ಹಾಗೂ ಜಿಲ್ಲಾಧ್ಯಕ್ಷ ಎಂ.ಗಿರಿಯಪ್ಪ ನಾಯಕ ಅವರು ಮಾತನಾಡಿ, ವಿಜಯನಗರದಂತ ಬೃಹತ್ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ನಾಯಕರು ಆಗಿರುವ ಕಾರಣ ಇವರ ಜೀವನಚರಿತ್ರೆಯನ್ನು ವಾಲ್ಮೀಕಿ ನಾಯಕ ಸಮುದಾಯದಪ್ರತಿಯೊಬ್ಬರೂ ಸ್ಮರಿಸಲು ವಿಜಯನಗರ ಸಂಸ್ಥಾಪನಾದಿನಾಚರಣೆಯನ್ನು ಪ್ರತಿವರ್ಷ ಮಾಡಲಾಗುತ್ತಿದೆ. ಇತಿಹಾಸ ತಿಳಿದವನು ಮಾತ್ರ ಇತಿಹಾಸ ನಿರ್ಮಿಸಬಲ್ಲಎನ್ನುವ ಸಂದೇಶದೊಂದಿಗೆ ನಮ್ಮ ಇತಿಹಾಸ ಪುರುಷರನ್ನುನೆನೆದು ಅವರು ಸಮಾಜಕ್ಕಾಗಿ, ಜನರಿಗಾಗಿ ನೀಡಿದಕೊಡುಗೆಗಳನ್ನು ನೆನೆದು ಅವರು ಹಾಕಿಕೊಟ್ಟ ನ್ಯಾಯ, ಸತ್ಯ, ಪರಿಶ್ರಮ, ತ್ಯಾಗದ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಕರೆ ನೀಡಿದರು.
ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ ಗೋನಾಳ ವಕೀಲರು ಮಾತನಾಡಿ, ಇತಿಹಾಸ ಪುರುಷರನ್ನು ಸ್ಮರಿಸುವುದು ಅತ್ಯಂತ ಶ್ಲಾಘನೀಯವಾದದ್ದು. ಮುಂದಿನ ಪೀಳಿಗೆಗೆ ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ತಿಳಿಸುವ ಕಾರ್ಯ ಇದರಿಂದ ಆಗುತ್ತದೆ. ಜೊತೆಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಸಮಾಜದವರು ಒಂದು ಕಡೆ ಸೇರಿ ಸಮಾಜದ ಅಭಿವೃದ್ಧಿ ಕುರಿತು ಚಿಂತನ ಮಂತನ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಆದಿಕವಿ ಮಹರ್ಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಚನ್ನಬಸವ ನಾಯಕ, ನೌಕರರ ಸಂಘದ ಪ್ರಭು ನಾಯಕ ತುರಾಯಿ, ಹನುಮಂತಪ್ಪ ನಾಯಕ, ಮುಖಂಡರಾದ ರಾಮು ನಾಯಕ, ರಾಮಕೃಷ್ಣ ನಾಯಕ, ರಮೇಶ ನಾಯಕ, ಮಹೇಶ ನಾಯಕ, ರಾಚಣ್ಣ ನಾಯಕ, ಗಿರಿಯಪ್ಪ ನಾಯಕ,ಸುಧಾರಾಣಿ ನಾಯಕ ಮಧುಸೂದನ್, ಮಹೇಶ ನಾಯಕ ಇನ್ನಿತರರು ಇದ್ದರು.


Comments
Post a Comment