ಕಲಾ ಸುಂಕುಲ ಸಂಸ್ಥೆಯಿಂದ ಬಸವ ಜಯಂತಿ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ:
ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು- ಕೆ ಶಿವನಗೌಡ ನಾಯಕ
ಜಯ ಧ್ವಜ ನ್ಯೂಸ್ ,ರಾಯಚೂರು ಏ. 19-
ಮನುಷ್ಯ ತನ್ನ ಬದುಕಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ದಾರಿದೀಪವಾಗಬೇಕು ಯಾವುದೇ ನಿರೀಕ್ಷೆಯಿಲ್ಲದೆ ಸಾಧನೆ ಮಾಡುವುದು ವಿಶೇಷ ನಿಮ್ಮ ಪರಿಶ್ರಮದಿಂದ ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ನೀವು ಮಾಡುವ ಸಮಾಜ ಮುಖಿ ಕೆಲಸ ಆಗಿರಬೇಕು. ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು ಎಂದು ಮಾಜಿ ಸಚಿವ ಕೆ ಶಿವನಗೌಡ ಹೇಳಿದರು.
ಅವರಿಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಏರ್ಪಡಿಸಿದ್ದ ಬಸವ ಜಯಂತಿ ಅಂಗವಾಗಿ ಸಂಗೀತೋತ್ಸವ ಪುಸ್ತಕ ಲೋಕಾರ್ಪಣೆ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆಯನ್ನು ಮಾಡಿ ಮಾತನಾಡಿ ಸಂಗೀತಕ್ಕೆ ರೋಗ ನಿರೋಧಕ ಶಕ್ತಿ ಇದೆ. ಕಲಾ ಸುಂಕುಲ ಸಂಸ್ಥೆ ರಾಯಚೂರು ಜಿಲ್ಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿರುವ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.
ಮುಕ್ಕಣ್ಣ ಕರಿಗಾರ್ ಬರೆದಿರುವ ಮುಕ್ಕಣ್ಣ ಕಂಡ ಬಸವಣ್ಣ ಪುಸ್ತಕ ಮತ್ತು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾಕ್ಟರ್ ಸತೀಶ್ ಕುಮಾರ್ ಹೊಸಮನಿ ಅವರು ಬರೆದಿರುವ ಶರಣರ ದರ್ಶನ ಎರಡು ಪುಸ್ತಕಗಳು ಇಂದು ಲೋಕಾರ್ಪಣೆ ಮಾಡಲಾಯಿತು. ಹತ್ತು ಜನ ಸಾಧಕರಿಗೆ ಬಸವ ಪುರಸ್ಕಾರ ನೀಡಲಾಯಿತು.
ಸಾಧಕರಲ್ಲಿ ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಕೆ ಪಂಪಾಪತಿ. ಸಗಮಕುಂಟದ ರಥ ಶಿಲ್ಪಿ ಉರುಕುಂದಪ್ಪ ಬಡಿಗೇರ್ ರಾಯಚೂರು ಕಾರಾಗೃಹದ ಆದಿಕ್ಷಕರಾದ ವೆಂಕಟೇಶ್ ನಾಯಕ್. ಬೋಳಮನದೊಡ್ಡಿ ದಳಪತಿ ವೆಂಕಟೇಶ್ ಯಾದವ್, ನೀಲಮ್ಮ ಶಿಕ್ಷಕಿ. ಸಂಸ್ಕೃತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾರೆಪ್ಪ ನಾಯಕ. ಲಿಂಗಸೂರಿನ ಮುಕ್ತಿ ಧಾಮದ ಸೇವಕ ಮೆಹಬೂಬ ಅಲಿ. ಇವರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲೆಯ ನೂತನ ಅಧ್ಯಕ್ಷರಾದ ರಾಜಶೇಖರದಿನ್ನಿ. ಬಸವರಾಜ್ ಎಇಇ.ಪಿ ಡಬ್ಲ್ಯೂ ಡಿ .ಕುಮಾರಿ ಸಂತೋಷಿ ಇವರಿಗೆ ಗೌರವ ಸನ್ಮಾನ ಮಾಡಲಾಯಿತು
ಸುಗಮ ಸಂಗೀತ ವೇಣುಗೋಪಾಲ್ ವರಪ ತಂಡದವರು ಭಾವಗೀತೆಗಳು ವಚನಗಳ ಗಾಯನ ನೆರವೇರಿಸಿದರು. ಮೋನಿಕಾ ಡ್ಯಾನ್ಸ್ ಕಲಾತಂಡ ನೃತ್ಯ ಪ್ರದರ್ಶನ ಮಾಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ರೇಖಾ ಬಡಿಗೇರ್ ಅಧ್ಯಕ್ಷರು ಕಲಾ ಸಂಕುಲ ಸಂಸ್ಥೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟಿನ ಅಧ್ಯಕ್ಷರಾದ ಅಯ್ಯಣ್ಣ ವಡವಾಟಿ ಪ್ರಧಾನ ಕಾರ್ಯದರ್ಶಿ ಡಿ ಶ್ರೀನಿವಾಸ್ ಬಿ ಬಸವರಾಜ್. ದೇವದುರ್ಗ ತಾಲೂಕ ಬಿಜೆಪಿ ಅಧ್ಯಕ್ಷ ಡಾ. ಶರಣಬಸವ ಪಾಟೀಲ್ ಜೋಳದಡಗಿ. ಪತ್ರಕರ್ತ ಆಲಂಗಣಿ , ಬಸವರಾಜ್ ಅಕ್ಕರಕಿ.ಮೋನಪ್ಪ ವಡವಾಟಿ. ವಹಿಸಿದ್ದರು ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ವಿ ಸಜ್ಜನ್ ಕಾರಾಗೃಹ ಇಲಾಖೆ ಇವರು ನಿರೂಪಿಸಿದರೆ ಕಾರ್ಯದರ್ಶಿ ಮಾರುತಿ ಬಡಿಗೇರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.




Comments
Post a Comment