ಶಂಕರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ.
 
                                                           ಜಯ ಧ್ವಜ ನ್ಯೂಸ್ , ರಾಯಚೂರು, ಏ.9- ಶ್ರೀ ಆದಿ ಶಂಕರಾಚಾರ್ಯರ ಜಯಂತಿಯನ್ನು ಪ್ರತಿ ವರ್ಷದಂತೆ ಈ ಬಾರಿಯೂ ಸಹ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಇದರ ಪೂರ್ವಭಾವಿ ತಯಾರಿಯ ದೃಷ್ಠಿಯಿಂದ ಇಂದು ರಾಯಚೂರಿನ‌‌ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು  ಶಂಕರ ಮಠದ  ಪದಾಧಿಕಾರಿಗಳು, ಶಂಕರ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಬ್ರಾಹ್ಮಣ ಸಮಾಜದ ಜಿಲ್ಲಾ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಅಖಿಲ‌ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ‌ ಪ್ರತಿನಿಧಿ ಶ್ರೀ ರಮೇಶ‌ ಕುಲಕರ್ಣಿ, ಶ್ರೀ ಕೃಷ್ಣಮೂರ್ತಿ  ಹೆಬ್ಸೂರ್ ಸೇರಿದಂತೆ ಶಂಕರ್ ಮಠ ಹಾಗೂ ಶಂಕರ್ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಬ್ರಾಹ್ಮಣ  ಸಮಾಜದ ಪ್ರಮುಖರು ಭಾಗವಹಿಸಿದ್ದರು.

Comments

Popular posts from this blog