ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿಗೆ ಒಲಿದ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ
ಜಯ ಧ್ವಜ ನ್ಯೂಸ್ ರಾಯಚೂರು , ಏ.10- ಕರ್ನಾಟಕ ಲೇಖಕಿಯರ ಸಂಘದ, 2025 ನೇ ಸಾಲಿನ ಸಂಶೋಧನಾ ಪ್ರಶಸ್ತಿಗೆ ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ರಾಯಚೂರು ಕೋಟೆಗೆ ನರಬಲಿ ಬಾಳೆ ಸಂಗಮ್ಮ ಮತ್ತು ಬಸರೆಡ್ಡಿ ಮಲ್ಲವ್ವ ಕೃತಿ ಭಾಜನವಾಗಿದೆ. ಏ.9 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀಮತಿ ಸಭಿಹ ಭೂಮಿಗೌಡ ನೆರವೇರಿಸಿದರು. ಪ್ರಶಸ್ತಿಯನ್ನು ಪ್ರೊ ಎಸ ಜಿ ಸಿದ್ದರಾಮಯ್ಯ , ಮಾಜಿ ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರ ಇವರು ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತರ ಪರಿಚಯ: ನಗರದ ಹಮದರ್ದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿ ಅವರು ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಕರ್ನಾಟಕ ಯುಗಪುರುಷ ಪಂ ತಾರಾನಾಥರು, ಹೃದಯಕ್ಕೆ ಹತ್ತಿರಾದವರು, ಮೌನ ಮಿಡಿದಾಗ, ನಿಜಾಂ ಕರ್ನಾಟಕದ ಪಂ.ಡಿ ಎಂ ಸೂಗವೀರ ಶರ್ಮ ಮೊದಲಾದ ಕೃತಿಗಳು ಪ್ರಮುಖವಾಗಿವೆ. ಗುಲ್ಬರ್ಗ ವಿಶ್ವ ವಿದ್ಯಾಲಯದ ಪುಸ್ತಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿವೆ. ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿ ಅವರ " ರಾಯಚೂರು ಕೋಟೆಗೆ ನರಬಲಿ ಬಾಳೆ ಸಂಗಮ್ಮ ಮತ್ತು ಬಸರೆಡ್ಡಿ ಮಲ್ಲವ್ವ " ಸಂಶೋಧನಾ ಕೃತಿಗೆ ಕರ್ನಾಟಕ ಲೇಖಕಿಯರ ಸಂಘವು 2025 ನೇ ಸಾಲಿನ ಶ್ರೀಮತಿ ಜಯಮ್ಮ ಕರಿಯಣ್ಣ ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.

Comments
Post a Comment