ಎನ್ ಜಿ ಓ ಕಾಲೋನಿ ವೆಂಕಟರಮಣ ದೇವಸ್ಥಾನ: ಶ್ರೀ ಸುಶಮೀಂದ್ರತೀರ್ಥರ ಆರಾಧನೆ ಜಯ ಧ್ವಜ ನ್ಯೂಸ್, ರಾಯಚೂರು, ಏ.5- ನಗರದ ಎನ್ ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀಮದ್ ಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತು . ಶ್ರೀ ಶ್ರೀ 1008 ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಆರಂಭಗೊಂಡವು.
ಬೆಂಗಳೂರಿನ ಹರಿಸ್ಮರಣ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ , ಪಂಡಿತ್ ಶ್ರೀವೆಂಕಟ ನರಸಿಂಹಾಚಾರ್ಯ ಗುಡೆಬಲ್ಲೂರು ರವರ ಪ್ರವಚನ, ರಥೋತ್ಸವ, ಮಹಾಮಂಗಳಾರತಿ ನಂತರ ಸಕಲ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ನಡೆಯಿತು.


Comments
Post a Comment