ಗೋಶಾಲೆ ಜಮೀನು ಕಬಳಿಕೆ ತಡೆ ಡಿಸಿ ಆದೇಶ ಸ್ವಾಗತಾರ್ಹ- ಎಂ.ವಿರುಪಾಕ್ಷಿ. ಜಯ ಧ್ವಜ ನ್ಯೂಸ್, ರಾಯಚೂರು ,ಏ.9- ನಗರದ ಗೋಶಾಲೆಗೆ ಸಂಬಂಧಿಸಿದ ಆಸ್ತಿ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶ ಸ್ವಾಗತಾರ್ಹವಾಗಿದೆ ಎಂದು ಗೋ ರಕ್ಷಾ ಸಮಿತಿಯ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 89 ವರ್ಷ ಹಳೆಯ ಗೋಶಾಲೆಯ 4 ಎಕರೆ ಜಮೀನು ಭೂಗಳ್ಳರ ಪಾಲಾಗುವುದನ್ನು ತಡೆದು ಜಿಲ್ಲಾದಿಕಾರಿಗಳು ಆದೇಶಿಸಿದ್ದಾರೆ ಎಂದರು. ಕೆಲ ಪಟ್ಟಭದ್ರರು ರಾಜಕಾರಣಿಗಳ ಕೃಪಾಕಟಾಕ್ಷದಿಂದ ಕೋಟ್ಯಾಂತರ ಬೆಲೆ ಬಾಳುವ ಭೂಮಿಯನ್ನು ತಮ್ಮ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ತಮ್ಮದಾಗಿಸಿಕೊಂಡರು ಬೃಹತ್ ವಾಣಿಜ್ಯ ಸಮುಚ್ಚಯ ನಿರ್ಮಿಸಿದ್ದರು ಇದೀಗ ಜಿಲ್ಲಾಧಿಕಾರಿಗಳು ಅದನ್ನು ತಡೆದಿದ್ದಾರೆ ಎಂದರು .
ಒಂದು ವಾರದಲ್ಲಿ ಮಹಾನಗರ ಪಾಲಿಕೆ ಅಕ್ರಮ ಕಟ್ಟಡ ನೆಲಸಮ ಮಾಡಬೇಕೆಂದ ಅವರು ಇಂತಹ ಅಕ್ರಮದಲ್ಲಿ ಶಾಮಿಲಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಲಿಯಾಬಾದ ಗೋಶಾಲೆ ಸಂಬಂಧಿಸಿದಂತೆ ನೂರಾರು ಎಕರೆ ಜಮೀನು ಒತ್ತುವರಿಯಾಗಿದೆ ಕಲ್ಲು ಕಂಕರ ತಯಾರಿಕೆ ಘಟಕಗಳು ತಲೆಯತ್ತಿವೆ ಮುಂದಿನ ದಿನಗಳಲ್ಲಿ ಮಲಿಯಾಬಾದ ಗೋಶಾಲೆ ಜಮೀನುಗಳನ್ನು ಒತ್ತುವರಿ ಮಾಡಿರುವವರು ಮೇಲೆ ಹೋರಾಟ ನಡೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನರಸಪ್ಪ, ರಾಜೇಂದ್ರ ಕುಮಾರ್, ಶ್ರಣಿಕ ರಾಜ್, ಕಿಶೋರ್ ಜೈನ್ ಇನ್ನಿತರರು ಇದ್ದರು.


Comments
Post a Comment