ಕನ್ನಡದ ಹಿರಿಯ ನಟ ಅಶೋಕ್ ರವರಿಗೆ ಕಲಾ ಸಂಕುಲ ಸಂಸ್ಥೆಯಿಂದ ಸನ್ಮಾನ.
ಜಯ ಧ್ವಜ ನ್ಯೂಸ್ ,ರಾಯಚೂರು ಏ.10.
ಕನ್ನಡ ಚಲನಚಿತ್ರ ರಂಗದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿದ ಅಶೋಕ ಅವರಿಗೆ ಇಂದು ರಾಯಚೂರು ನಗರದ ಖಾಸಗಿ ಹೋಟೆಲ್ ನಲ್ಲಿ ಕಲಾ ಸಂಕುಲ ಸಂಸ್ಥೆ ಕಾರ್ಯದರ್ಶಿ ಮಾರುತಿ ಬಡಿಗೇರ್ ಸನ್ಮಾನಿಸಿ ಗೌರವಿಸಿದರು..
ಅಶೋಕ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ನಟ 74 ವಯಸ್ಸಾಗಿದ್ದರೂ ಇನ್ನೂ ಹೀರೋ ತರ ಕಂಗೊಳಿಸುತ್ತಿದ್ದಾರೆ. ತಮ್ಮ ಕಲಾತ್ಮಕ ಪಾತ್ರಗಳಿಗೆ ಹೆಸರಾಗಿರುವ ಅಶೋಕ್ ಸನಾದಿ ಅಪ್ಪಣ್ಣ,ರಂಗನಾಯಕಿ, ಕ್ರಾಂತಿಯೋಗಿ ಬಸವಣ್ಣ,ಮುಗಿಲ ಮಲ್ಲಿಗೆ, ಮನೆಗೆ ಬಂದ ಮಹಾಲಕ್ಷ್ಮಿ ಅಶೋಕ ಚಕ್ರ,ವರದಕ್ಷಿಣೆ ತಾಯಿಯ ಮಡಿಲಲ್ಲಿ ಹಲವಾರು ಚಲನಚಿತ್ರದಲ್ಲಿ ನಟರಾಗಿ ನಟಿಸಿರುವ ಅಶೋಕ್ ಅವರು ಇಂದು ರಾಯಚೂರಿಗೆ ಆಗಮಿಸಿದ್ದರು. ಕಲಾ ಸಂಕುಲ ಸಂಸ್ಥೆ 2011ರಲ್ಲಿ ರಾಯಚೂರಿನಲ್ಲಿ ದೇಶಿ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಅಶೋಕ್ ಅವರನ್ನು ಆಹ್ವಾನಿಸಲಾಗಿತ್ತು. ಬಹು ವರ್ಷಗಳ ನಂತರ ಮತ್ತೆ ರಾಯಚೂರಿಗೆ ಬಂದಿದ್ದು ತುಂಬಾ ಖುಷಿಯಾಯಿತು ಎಂದರು.
ಈ ಸಂದರ್ಭದಲ್ಲಿ ಕಲಾ ಸಂಕುಲ ಸಂಸ್ಥೆಯ ನಿರ್ದೇಶಕರಾದ ಮೌನೇಶ ವಡವಾಟಿ. ಡಾ. ಷಣ್ಮುಖ ಚಲವಾದಿ ಇನ್ನಿತರರಿದ್ದರು. ಇದೆ ವೇಳೆ ರೇಖಾ ಬಡಿಗೇರ್ ಬರೆದಿರುವ ಉದೋ ಉದೋ ಕೃತಿಯನ್ನು ನಟ ಅಶೋಕ್ ಅವರಿಗೆ ನೀಡಲಾಯಿತು.

Comments
Post a Comment