ಶ್ರೀ ಭಾಗವತ ಪ್ರವಚನ ಮಂಗಳ ಮಹೋತ್ಸವ: ರಾಯಚೂರು ಜಿಲ್ಲೆ ಧಾರ್ಮಿಕ ಪ್ರಜ್ಞೆಯುಳ್ಳ ಜಿಲ್ಲೆ- ವೆಂಕಟ್ ನರಸಿಂಹಾಚಾರ್ಯ ಗುಡೆಬಲ್ಲೂರು.                                                   ಜಯ ಧ್ವಜ ನ್ಯೂಸ್, ರಾಯಚೂರು,ಏ.16- ರಾಯಚೂರು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಧಾರ್ಮಿಕ , ಆಧ್ಯಾತ್ಮಿಕ ಕಾರ್ಯಕ್ರಮಗಳು ಆಯೋಜಿತವಾಗುತ್ತಿರುತ್ತವೆ ಇದಕ್ಕೆ ಕಾರಣ ಈ ಜಿಲ್ಲೆ ಧಾರ್ಮಿಕ ಪ್ರಜ್ಞೆಯುಳ್ಳ  ಜಿಲ್ಲೆಯಾಗಿದೆ ಎಂದು ಖ್ಯಾತ ಪ್ರವಚನಕಾರರಾದ ಶ್ರೀ ವೆಂಕಟನರಸಿಂಹ ಆಚಾರ್ಯ ಗುಡೆಬಲ್ಲೂರು ಹೇಳಿದರು. ಅವರಿಂದು ನಗರದ ಗಾಜಗಾರಪೇಟೆ ಉತ್ತರಾಧಿ ಮಠದಲ್ಲಿ ಅಂಬುಜಾಬಾಯಿ ಹಾಗೂ ದಿ.ರಾಘವೇಂದ್ರಾಚಾರ್ ಕುರ್ಡಿ ಕುಟುಂಬದಿಂದ ಒಂದು ಸಪ್ತಾಹ ಪರ್ಯಂತರ ಆಯೋಜಿತಗೊಂಡ ಶ್ರೀ ಮದ್ಭಾಗವತ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರವಚನ   ನೀಡಿದರು. ಭಾಗವತ ಶ್ರವಣದಿಂದ ದೇವರ ಅನುಗ್ರಹ ಲಭಿಸುತ್ತದೆ ಒಂದು ವಾರಗಳ ಕಾಲ ಭಾಗವತ ಸಪ್ತಾಹ ಆಯೋಜಿಸಿದವರಿಗೆ ಭಗವಂತ ಅನುಗ್ರಹ ಮಾಡಲಿ ಎಂದರು.

ರಾಯಚೂರು ಜಿಲ್ಲೆ ದಾಸರ ತವರೂರು ಅನೇಕ ದಾಸವರೇಣ್ಯರು ಜನ್ಮವೆತ್ತಿದ ಸ್ಥಳವಾಗಿದೆ ಉತ್ತರಾಧಿಮಠದ ಶ್ರೀ ಸತ್ಯ ಪ್ರಮೋದತೀರ್ಥ ಸಭಾಂಗಣದಲ್ಲಿ ಅನೇಕ ಜನರು ದಿನ ನಿತ್ಯ ಆಗಮಿಸಿ ಭಾಗವತ ಶ್ರವಣ ಮಾಡಿದ್ದೀರಿ ಇದಕ್ಕೆ ಸಹಕರಿಸಿದ ಉತ್ತರಾಧಿ ಮಠ ಹಾಗೂ ಮಾರುತಿ ಭಜನಾ ಮಂಡಳಿ ಸದಸ್ಯರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶೇಷಾಚಾರ್ಯ ಗುಡೆಬಲ್ಲೂರು, ಬಾಂಬೆ ಪ್ರಹಲ್ಲಾದ್ ಆಚಾರ ಗಲಗಲಿ, ಸಮೀರಾಚಾರ್, ವೆಂಕಟೇಶಾಚಾರ್, ವೆಂಕಟೇಶ್ ಕೋಲಾರ್,  ಅಂಬುಜಾ ಬಾಯಿ ಹಾಗೂ ದಿ.ರಾಘವೇಂದ್ರಾಚಾರ ಕುರ್ಡಿ ಕುಟುಂಬಸ್ಥರು ಸೇರಿದಂತೆ ಭಗವದ್ ಭಕ್ತರು ಪಾಲ್ಗೊಂಡಿದ್ದರು.

Comments

Popular posts from this blog