ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರಿಗೆ 55ನೇ ಜನ್ಮದಿನದ ಸಂಭ್ರಮಾಚರಣೆ
ಜಯಧ್ವಜ ನ್ಯೂಸ್ , ರಾಯಚೂರು,ಏ.11- ನಗರದ ಅಂಬೇಡ್ಕರ್ ವೃತ್ತದ ಖಾಸಗಿ ಹೋಟೆಲ್ ನಲ್ಲಿ ಮಾದಿಗ ದಂಡೋರ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ರವರ 55ನೇ ಹುಟ್ಟು ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಕಂಡ ಒಳ ಮೀಸಲಾತಿಯ ವರ್ಗೀಕರಣದ ಹೋರಾಟಗಾರ, ನೇರ ನುಡಿಯ ಸರದಾರ, ಕಷ್ಟಗಳಿಗೆ ಸ್ಪಂದಿಸುವ ಹೃದಯವಂತ ನಾಯಕ, ಸಮುದಾಯದ ಏಳಿಗೆಗಾಗಿ ಸುಮಾರು 35 ವರ್ಷಗಳಿಂದ ನಿರಂತರ ಹೋರಾಟದಲ್ಲಿ ಭಾಗಿಯಾಗಿ ತನ್ನ ಕುಟುಂಬ ತ್ಯಾಗ, ಆರೋಗ್ಯದಲ್ಲಿ ಏರುಪೇರಾದರೂ ಕೂಡ ನೊಂದ ಸಮುದಾಯಗಳಿಗೆ ಅನ್ಯಾಯವಾಗಬಾರದು ಎಂದು ಮುಂದುವರೆದು 101 ಜಾತಿಗಳಿಗೆ ನ್ಯಾಯವನ್ನು ಒದಗಿಸಲು ಸರ್ಕಾರಕ್ಕೆ ಸೆಡ್ಡು ನ್ಯಾಯಯುತವಾದ ಪಾಲನ್ನು ಪಡೆದೆ ತೀರುತ್ತೇವೆ ಎಂದು ಪಣತೊಟ್ಟು ನಿಂತಿರುವ ಧೀಮಂತ ನಾಯಕ ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರ 55ನೇ ಹುಟ್ಟುಹಬ್ಬವನ್ನು ಜಿಲ್ಲೆ ಮತ್ತು ತಾಲೂಕಿನ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ಹಿರಿಯ ಹೋರಾಟಗಾರರು ಬುದ್ಧಿಜೀವಿಗಳು ಎಲ್ಲಾ ಪಕ್ಷದ ರಾಜಕೀಯ ಪ್ರತಿನಿಧಿಗಳು ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.


Comments
Post a Comment