ರಾಯಚೂರು ನಗರ ಸ್ವಚ್ಚತೆಗೆ ಸಾರ್ವಜನಿಕರು ಕೈ ಜೋಡಿಸಬೇಕು- ಜುಬಿನ್ ಮೋಹಪಾತ್ರ

ಜಯ ಧ್ವಜ ನ್ಯೂಸ್ ,ರಾಯಚೂರು. ಜು. 14- ರಾಯಚೂರು ನಗರ ಸ್ವಚ್ಚತೆಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮಿಸಿದರೆ ಸಾಲದು ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಹೇಳಿದರು. 

ಅವರು ಮಂಗಳವಾರ ರಾಯಚೂರು ನಗರದ ಲಿಂಗಸೂಗುರ ರಸ್ತೆಯಲ್ಲಿ ರಸ್ತೆ ಸ್ವಚ್ಚಗೊಳಿಸುವ ಎರಡು ಮೆಕ್ಯಾನಿಕಲ್ ವಾಹನಗಳ ಪ್ರಾತ್ಯಕ್ಷಿಕೆ ವೀಕ್ಷಣೆಯ ನಂತರ ಈ ಕುರಿತು ಮಾಹಿತಿ ನೀಡಿ ಮಾತನಾಡಿದರು.

ರಾಯಚೂರು ಮಹಾನಗರ  ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಮೆಕ್ಯಾನಿಕಲ್ ಸ್ವೀಫರ್ ವಾಹನಗಳನ್ನು ಕರೆಸಿ ಡೆಮೊ ಮಾಡಲಾಗಿದೆ ಈ ವಾಹನಗಳಿಂದ ಮಳೆಗಾಲದಲ್ಲಿ ಕಸವನ್ನು ತೆಗೆಯಲು ಅನುಕೂಲವಾಗಲಿದೆ.ರಾಯಚೂರು ನಗರದ ಜನಸಂಖ್ಯೆ ದಿನೆ- ದಿನೆ ಹೆಚ್ಚಾಗುತ್ತಿರುವುದರಿಂದ ಇಂತಹ ವಾಹನಗಳಿಂದ ಅನುಕೂಲವಾಗಲಿದೆ ಇವುಗಳ ಸಾಮರ್ಥ್ಯ ಮೂರುವರೆ ಕ್ಯೂಬಿಕ್ ಮೀಟರ್ ಇದೆ. ಪ್ರಭಾತ್ ಡಿಸೈನ್ ಮತ್ತು ಚೆಲೆಂಜರ್ ಈ ಎರಡು ಕಂಪನಿಗಳು ಭಾಗವಹಿಸಿ ನಮಗೆ ಡೊಮೊ ತೋರಿಸಿವೆ. ಡೆಮೆ ಫಲಿತಾಂಶದ ನಂತರ ಒಂದು ತಿಂಗಳ ನಂತರ ಮತ್ತೊಂದು ಈ ವಾಹನ ತರೆಸುತ್ತೆವೆ ಎಂದರು.


ಈ ಹಿಂದೆ ತಾವು ನೋಡಿದ್ದಿರಿ ನಮ್ಮ ಪೌರ ಕಾರ್ಮಿಕರು ಪ್ರತಿದಿನ 40 ರಿಂದ 60 ಜನರು ನಗರದಲ್ಲಿ ಕಸ ಗುಡಿಸಿ ಧೂಳು ಎತ್ತುತ್ತಿದ್ದರು. ಅದನ್ನು ಬೇರೆಕಡೆ ಸಾಗಿಸದೆ ಅಲ್ಲೆ ಒಂದು ಕಡೆ ಹಾಕುತ್ತಿದ್ದರು. ಈ ವಾಹನಗಳಿಂದ ಕಸ ಗುಡಿಸುವುದರ ಜೊತೆಗೆ ಅದನ್ನು ಬೇರೆ ಕಡೆ ಸ್ಥಳಾಂತರಿಸಲು ಅನುಕೂಲವಾಗಲಿದೆ ಮತ್ತು ಈ ವಾಹನಗಳಲ್ಲಿ 12 ಸಾವಿರ ‌ಲೀಟರ್ ನೀರಿನ ಸಾಮರ್ಥ್ಯ ಇರುವುದರಿಂದ ರಸ್ತೆಯಲ್ಲಿ ಧೂಳು ಹರಡದಂತೆ ನೀರನ್ನು ಸಿಂಪಡಿಸಬಹುದು. ಹೊಸ ತಂತ್ರಜ್ಞಾನದ ಇಂತಹ ವಾಹನಗಳನ್ನು ನಗರ ಪ್ರದೇಶಗಳಲ್ಲಿ ಬಳಸುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕವಾಗಿದೆ. ಈಗಾಗಲೇ ಈ ವಾಹನಗಳು ಹುಬ್ಬಳ್ಳಿ- ಧಾರವಾಡ. ಬೆಳಗಾವಿ ಹಾಗೂ ಮೈಸೂರು ನಗರಗಳಲ್ಲಿ ಬಳಸುತ್ತಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರಲ್ಲಿ ನಮ್ಮ ವಿನಂತಿ ಇದೆ ಘನತ್ಯಾಜ್ಯ ನಿರ್ವಹಣೆ- 2026 ಹೊಸ ನಿಯಮ ಬಂದಿದ್ದು ಇದರ ಪ್ರಕಾರ ಕಸವನ್ನು ನಾಲ್ಕು ಪ್ರಕಾರದಲ್ಲಿ ವಿಂಗಡಣೆ ಮಾಡಿ ನಮ್ಮ ಮಾಹನಗರ ಪಾಲಿಕೆ ವಾಹನಗಳಲ್ಲಿ ಹಾಕಬೇಕು. ಈ ಕುರಿತು ಮಾಹಿತಿ ನೀಡಲು ನಮ್ಮ ನಗರಸಭೆ ಸಿಬ್ಬಂದಿಗಳು ತಮ್ಮ ಮನೆಗೆ ಬಂದಾಗ ಅವರಿಗೆ ಸಹಕಾರ ನೀಡಬೇಕು ನಗರದಲ್ಲಿ ಬಹಳಷ್ಟು ಅಂಗಡಿಗಳ ಮುಂದೆ‌ ಕಸ ಬಿಸಾಡಿರುತ್ತಾರೆ ಹಾಗೆ ಮಾಡಬಾರದು. ಪ್ಲಾಸ್ಟಿಕ್ ಕಸ ಓಪನ್ನಾಗಿ ಸುಟ್ಟಾಗ ಅದರಿಂದ ವಾಯು ಮಾಲಿನ್ಯದ ಜೊತೆಗೆ ಜನರಿಗೆ ಕ್ಯಾನ್ಸರ ಕಾರಕ ಹಾನಿಯಾಗುತ್ತದೆ ಹಾಗಾಗಿ ಸಾರ್ವಜನಿಕರು ತಮ್ಮ ಆರೋಗ್ಯದ ಕಡೆ ಗಮನ ಕೊಡುವುದರ ಜೊತೆಗೆ ರಾಯಚೂರು ನಗರ ಸ್ವಚ್ಚತೆಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.


ಈ ಸಂದರ್ಭದಲ್ಲಿ ರಾಯಚೂರು ನಗರಸಭೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪ್ರಭಾತ್ ಡಿಸೈನ್ ಮತ್ತು ಚಾಲೆಂಜರ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Comments