Posts

Showing posts from July, 2026
Image
ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ:            ಕಾಡ್ಲೂರು ಶ್ರೀಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತ.                                                              ಜಯ ಧ್ವಜ ನ್ಯೂಸ್, ರಾಯಚೂರು,ಜು.31- ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ ಹಿನ್ನೆಲೆ  ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಅಧಿಕ ನೀರು ನದಿಯಲ್ಲಿ ಹರಿಯುತ್ತಿದ್ದು ಅಧಿಕ ಪ್ರಮಾಣದ ಸಮುದ್ರ ಸದೃಶ ಜಲರಾಶಿಯಿಂದ ನದಿ ತುಂಬಿ ಹರಿಯುತ್ತಿದೆ.  ಗ್ರಾಮಸ್ಥರು  ನದಿ ದಡದಲ್ಲಿ ಇರಿಸಿದ್ದ  ಕೃಷಿ ಪಂಪ್ ಸೆಟ್ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. 
Image
  ವಾರ್ತಾ ಇಲಾಖೆಯಲ್ಲಿ ಪ್ರಕಾಶ್ ಅವರಿಂದ ಉತ್ತಮ ಕೆಲಸ ನಿರ್ವಹಣೆ- ಜಿ.ಸುರೇಶ ಜಯ ಧ್ವಜ ನ್ಯೂಸ್ ,ರಾಯಚೂರು ಜು.31- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸಿನಿ ಆಪರೇಟರ್ ಹುದ್ದೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಎ.ಪ್ರಕಾಶ್ ಅವರು ಇಂದು ವಯೋನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಪತ್ರಕರ್ತರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಲಾಯಿತು. ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ್ ಅವರು ಮಾತನಾಡಿ, ನಿವೃತ್ತರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಮತ್ತು ಶಿಸ್ತುಬದ್ಧ ಕಾರ್ಯನಿರ್ವಹಣೆಯ ಮೂಲಕ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಣೆ ಮಾಡಿದ್ದಾರೆ. ಅವರ ಸೇವೆ ಸಹೋದ್ಯೋಗಿಗಳಿಗೆ ಸದಾ ಮಾದರಿಯಾಗಿದ್ದು, ನಿವೃತ್ತಿಯ ನಂತರವೂ ಉತ್ತಮ ಆರೋಗ್ಯ, ಸುಖ-ಶಾಂತಿ ಹಾಗೂ ನೆಮ್ಮದಿಯ ಜೀವನ ಸಾಗಿಸಲಿ ಎಂದು ಶುಭಕೋರಿದರು. ಈ ವೇಳೆ ವಯೋ ನಿವೃತ್ತರಾದ ಎ.ಪ್ರಕಾಶ್ ಅವರು ಮಾತನಾಡಿ, ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗಳಿಗೆ, ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನು ಸ್ಮರಿಸಿಕೊಂಡ ಅವರು, ತಮ್ಮ ಸೇವಾ ಜೀವನದ ನೆನಪುಗಳನ್ನು ಹಂಚಿಕೊAಡರು. ಈ ಸ...
Image
  ಹೆಚ್ ಎ ಎಲ್ ನಿಂದ ಸಿ ಎಸ್ ಆರ್ ನಿಧಿಯಡಿ 50ಕೋಟಿ ರೂ. ವೆಚ್ಚದಲ್ಲಿ ಜಲಾಶಯ ನಿರ್ಮಾಣ ಭೂಮಿಪೂಜೆ :            ಮಂತ್ರಾಲಯದಲ್ಲಿ ಭಕ್ತರಿಗೆ ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲಿರುವ  ವ್ಯಾಸತೀರ್ಥ ಜಲಾಶಯ- ಶ್ರೀ  ಸುಬುಧೇಂದ್ರತೀರ್ಥರು                                                                                                                                ಜಯ ಧ್ವಜ ನ್ಯೂಸ್ , ರಾಯಚೂರು, ಜು.30-  ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲು ಮುಂದಿನ ಮೂವತ್ತು ವರ್ಷದ ಅವಧಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ ಒದಗಿಸಲು ವ್ಯಾಸ ತೀರ್ಥ ಜಲಾಶಯ ನಿರ್ಮಾಣವಾಗಲಿದೆ ಎಂದು    ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು...
Image
ಎಸ್ ಐ ಆರ್  ನಮೂನೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಪೂವಿತಾ ಸೂಚನೆ ಜಯ ಧ್ವಜ ನ್ಯೂಸ್ ,ರಾಯಚೂರು, ಜು.30-  ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ವೇಗವಾಗಿ ಸಾಗುತ್ತಿದ್ದು, ಆಗಸ್ಟ್ 8ರವರೆಗೆ ಅಭಿಯಾನ ಮುಂದುವರಿಯಲಿದೆ. ಉಳಿದಿರುವ ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಕೂಡಲೇ ಭಾನುವಾರದೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಸಲ್ಲಿಸುವ ಮೂಲಕ ಅಭಿಯಾನದ ಯಶಸ್ವಿಗೆ ಸಹಕಾರಿಸಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು. ಜುಲೈ 30ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಠರಣೆ ಕಾರ್ಯಕ್ರಮವು ರಾಯಚೂರು ಜಿಲ್ಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ನೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತಿದೆ. ಪ್ರಸ್ತುತ ಜಿಲೆಯಲ್ಲಿ ಒಟ್ಟು ಮತದಾರರು 17,14,559 ಇದ್ದು, ಅದರಲ್ಲಿ 15,84,491 ಡಿಜಿ...
Image
  ಗುರುಪೂರ್ಣಿಮೆ ಮಹೋತ್ಸವದಲ್ಲಿ ಶೈಕ್ಷಣಿಕ ಸೇವೆಗೆ ಚಾಲನೆ: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಯೋಜನೆ ಆರಂಭ- ಸಾಯಿ ಕಿರಣ ಆದೋನಿ ಜಯ ಧ್ವಜ ನ್ಯೂಸ್ ,ರಾಯಚೂರು, ಜು.29-  ಗುರುಪೂರ್ಣಿಮೆಯ ಅಂಗವಾಗಿ ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಬುಧವಾರ ಭಕ್ತಿಭಾವದಿಂದ ಗುರುಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀ ಶಿರಡಿ ಸಾಯಿಬಾಬಾರ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಯೋಜನೆಗೂ ಚಾಲನೆ ನೀಡಲಾಯಿತು. ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ ಆದೋನಿ ಮಾತನಾಡಿ, ಗುರುಪೂರ್ಣಿಮೆಯು ಗುರು ಪರಂಪರೆಯನ್ನು ಸ್ಮರಿಸುವ ಪವಿತ್ರ ಹಬ್ಬವಾಗಿದೆ. ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜಮುಖಿ ಸೇವೆಗಳನ್ನು ಕೈಗೊಳ್ಳುವುದು ಸಾಯಿಬಾಬರ ಸಂದೇಶವಾಗಿದೆ ಎಂದು ಹೇಳಿದರು. ಈ ಬಾರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಶಿರಡಿಯಿಂದ ತರಲಾಗಿರುವ ಶ್ರೀ ಸಾಯಿಬಾಬಾ ಧರಿಸಿದ್ದ ಪವಿತ್ರ ಕಾಫ್ನಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪವಿತ್ರ ವಸ್ತ್ರದ ಸಮ್ಮುಖದಲ್ಲೇ ಸಮಾಜಕ್ಕೆ ಉಪಯುಕ್ತವಾಗುವ ಶಾಶ್ವತ ಸೇವಾ ಕಾರ್ಯ ಆರಂಭಿಸುವ ಸಂಕಲ್ಪದೊಂದಿಗೆ ಶ್ರೀ ಶಿರಡಿ ಸಾಯಿಬಾಬಾ ಸೇವಾ ಚಾರಿಟೇಬಲ್ ಟ್ರಸ್ಟ್, ಅಮೆರಿಕದ ಸಾಫ್ಟ್‌ವೇರ್ ಇಂಜಿನಿಯರ್ ಅಭಿಲಾಷ್ ಚಕ್ಷಾ, ಸ...
Image
  ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ:      ಪತ್ರಕರ್ತನ ಬೆನ್ನ ಹಿಂದಿನ ಒಳ್ಳೆ ಮಾತು ಪದ್ಮಶ್ರೀ ಪ್ರಶಸ್ತಿ ದೊರೆತಂತೆ- ಶಿವಾನಂದ ತಗಡೂರು.                                             ಜಯ ಧ್ವಜ ನ್ಯೂಸ್, ರಾಯಚೂರು,ಜು.28- ಒಬ್ಬ ಪತ್ರಕರ್ತನ ಬೆನ್ನ ಹಿಂದೆ ಒಳ್ಳೆ ಮಾತುಗಳನ್ನಾಡಿದಾಗ ಅದು  ಪದ್ಮಶ್ರೀ ಪ್ರಶಸ್ತಿ ಸಿಕ್ಕಂತಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯ ಪಟ್ಟರು . ಅವರಿಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ರಾಯಚೂರು ರಿಪೋರ್ಟ್ರರ್ಸ್ ಗಿಲ್ಡ್ ಮತ್ತು ಸಾರ್ವಜನಿಕ ವಾರ್ತಾ ಮತ್ತು ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ ನೆರವೇರಿಸಿ ಆಶಯ ನುಡಿಗಳನ್ನಾಡಿದರು. ಪತ್ರಿಕಾ ಕ್ಷೇತ್ರಕ್ಕೆ ತನ್ನದೆಯಾದ ಘನತೆ ಗೌರವವಿದೆ ಪತ್ರಕರ್ತರ ಕಷ್ಟ ಸುಖಗಳಿಗೆ ಕೆಯುಡ್ಬ್ಲೂಜೆ ಸ್ಪಂದಿಸುತ್ತಿದೆ ಪತ್ರಕರ್ತರು ಬೇಡಿಕೆ ಅನುಗುಣವಾಗಿ ಸರ್ಕಾರಕ್ಕೆ ಮನವಿ  ಮಾಡಿ ಸೌಲತ್ತ...
Image
  ದುಬೈ ಕನ್ನಡಿಗರು ಹೃದಯವಂತರು-ಶ್ರೀದೇವಿ ನಾಯಕ   ಜಯ ಧ್ವಜ ನ್ಯೂಸ್ , ರಾಯಚೂರು,ಜು .28-   ಹೊರನಾಡಿನಲ್ಲಿ ಜೀವಿಸುತ್ತಿರುವ ಕನ್ನಡಿಗರು ಅದರಲ್ಲೂ ದುಬೈ ಅಂತಹ ಶ್ರೀಮಂತ ರಾಷ್ಟ್ರದಲ್ಲಿ ಇರುವಂತ ಕನ್ನಡಿಗರು ನಿಜಕ್ಕೂ ಹೃದಯವಂತರು . ಇಲ್ಲಿ ಜಾತಿ ಧರ್ಮವಿಲ್ಲ ನಾವೆಲ್ಲರೂ ಕನ್ನಡಿಗರೆಂದು ಬಾಳುತ್ತಿರುವುದು  ಹೆಮ್ಮೆಯ ವಿಷಯ ಎಂದು ವಿಶ್ವಕನ್ನಡ ಸಮ್ಮೇಳನ ದುಬೈದ ಸಮ್ಮೇಳನ ಅಧ್ಯಕ್ಷರಾದ ಶ್ರೀದೇವಿ ಆರ್. ವಿ. ನಾಯಕ ಮಾತನಾಡಿದರು.  ಅವರು ದುಬೈಯಲ್ಲಿ ಕನ್ನಡ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ಹಾಗೂ ಕಲಾ ಸಂಕುಲ ಸಂಸ್ಥೆಯ ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಶ್ರೀದೇವಿ ಆರ್ ವಿ ನಾಯಕ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು.  ಅಬುದಾಬಿಯ ಡಾ. ಐಶ್ವರ್ಯ ಅದ್ಭುತವಾಗಿ ಭರತನಾಟ್ಯವನ್ನು ಪ್ರದರ್ಶನ ಮಾಡಿದರು. ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಿ ಅಶ್ವತ್ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಬೆಂಗಳೂರಿನ ನಾಟಕಕಾರ ತಂಡ ಸಾಕ್ಷಿಕಲ್ಲು ನಾಟಕವನ್ನು ಈ ಸಮ್ಮೇಳನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು. ಕವಿಗೋಷ್ಠಿಯಲ್ಲಿ ಹೊರನಾಡ ಕನ್ನಡಿಗರು ಭಾಗವಹಿಸಿದ್ದರು ಮತ್ತು ಕೊಟ್ರೇಶಿ ಕೂಡ್ಲಿಗಿ ಇವರಿಂದ ಹಾಸ್ಯಸಂಜೆ ತುಂಬಾ ಚೆನ್ನಾಗಿ ನೆರವೇರಿತು.  ಒಂಬತ್ತು ಜನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ...
Image
  ಯುವಜನತೆಯಲ್ಲಿ ಹಸಿರು ಇಂಧನದ ಜಾಗೃತಿಗಾಗಿ ಮನೆಯಲ್ಲೇ ಸೋಲರ್ ಚಾಲಿತ ಕಿರು ಚಲನಚಿತ್ರ ಮಂದಿರ ನಿರ್ಮಿಸಿದ ಅಧ್ಯಾಪಕ ಜಯ ಧ್ವಜ ನ್ಯೂಸ್ , ರಾಯಚೂರು, ಜು.26- ಯುವಜನತೆಯಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಸೋಲಾರ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪತ್ರಕರ್ತ ಹಾಗೂ ಪತ್ರಿಕೋದ್ಯಮ ಅಧ್ಯಾಪಕರೂ ಆದ ಪಟ್ಟಣದ ನಿವಾಸಿ ವಿಜಯ್ ಸರೋದೆ ಅವರು ಸೋಲಾರ್ ಚಾಲಿತ ಗೃಹ ಬಳಕೆಯ ಚಲನಚಿತ್ರ ಮಂದಿರವೊಂದನ್ನು (ಸೋಲಾರ್ ಪವರ್ಡ್ ಹೋಮ್ ಥಿಯೇಟರ್ ಸಿಸ್ಟಮ್) ನಿರ್ಮಿಸಿದ್ದಾರೆ. ಇತ್ತೀಚಿಗೆ ಮನೆಯಲ್ಲಿಯೇ ಸಿನೆಮಾ ಥಿಯೇಟರ್ ನಿರ್ಮಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಅದಕ್ಕಾಗಿ ಜನ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಅದೇ ಒಂದು ದುಬಾರಿ ಮೊಬೈಲ್ ಖರೀದಿಸುವ ಹಣದಲ್ಲಿ ಇಡೀ ಕುಟುಂಬದವರು ಕುಳಿತುಕೊಂಡು ಮನರಂಜನೆ ಪಡೆಯುವ ರೀತಿಯಲ್ಲಿ ಹಸಿರು ಇಂಧನವಾದ ಸೋಲಾರ್ ಚಾಲಿತ ಗೃಹ ಚಲನಚಿತ್ರ ಮಂದಿರವನ್ನು ನಿರ್ಮಿಸಲು ಸಾಧ್ಯವಿದೆ‌ ಎಂದು ಅವರು ತಿಳಿಸುತ್ತಾರೆ. ಗ್ರೀನ್ ರಾಯಚೂರು ಸಂಸ್ಥೆಯ ಮಾಧ್ಯಮ ಸಲಹೆಗಾರರು ಹಾಗೂ ಸ್ವಯಂಸೇವಕ‌ರಾಗಿರುವ ವಿಜಯ್ ಸರೋದೆ ಅವರು ಕಳೆದ ಐದು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ತಮ್ಮ ಮನೆಯನ್ನು ಸೋಲಾರ್ ವಿದ್ಯುತ್ ಮೇಲೆ ನಡೆಯುವಂತೆ ಪರಿವರ್ತನೆ ಮಾಡಿಕೊಂಡಿದ್ದು, ಬಿಸಿನೀರಿಗಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳುವ ಜೊತೆಗೆ ಸೋಲಾರ್ ವಿದ್ಯುತ್ ಮೂಲಕವೇ ಚಾರ್ಜ್ ಆಗುವ ಎಲೆಕ್ಟ್ರಿಕ್ ವಾಹನ ಬಳಸುವ ಮೂಲಕ...
Image
  ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ- ಶ್ರೀನಿವಾಸ್ ರಾವ್ ಪತಂಗೆ  ಜಯ ಧ್ವಜ ನ್ಯೂಸ್ , ರಾಯಚೂರು,ಜು.26- ಜನನಿ ಕಲಾ ಮತ್ತು ಸಾಂಸ್ಕೃತಿಕ ಯುವ ಬಳಗ (ರಿ). ಯಾಕ್ಲಾಸಪುರ ರಾಯಚೂರು ವತಿಯಿಂದ ಕಲಾ ಸಿರಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವು ನಗರದ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಭಾವಸಾರ ಕ್ಷತ್ರಿಯ ಸಮಾಜದ ಗೌರವ ಅಧ್ಯಕ್ಷರಾದ   ಶ್ರೀನಿವಾಸ್ ರಾವ್ ಪತಂಗೆ. ಅವರು ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ ಎಂದರು. ಆದ್ದರಿಂದ ಪ್ರತಿಯೊಂದು ಮಗುವಿಗೂ ಸಂಗೀತ ಶಿಕ್ಷಣದ ಅವಕಾಶ ದೊರೆಯಬೇಕು. ಸಂಗೀತ ಕಲಿಯುವ ಮಕ್ಕಳು ಹೆಚ್ಚು ಏಕಾಗ್ರತೆಯಿಂದ ಓದುತ್ತಾರೆ. ಪಾಠಗಳನ್ನು ನೆನಪಿಡುವ ಸಾಮರ್ಥ್ಯ (ಸ್ಮರಣಶಕ್ತಿ) ಹೆಚ್ಚಾಗುತ್ತದೆ. ಭಾಷಾ ಕೌಶಲ್ಯ, ಶ್ರವಣ ಸಾಮರ್ಥ್ಯ ಮತ್ತು ಗ್ರಹಣಶಕ್ತಿ ವೃದ್ಧಿಯಾಗುತ್ತದೆ." ಎಂದರು ಹಾಗೂ ಅಧ್ಯಕ್ಷತೆಯನ್ನುವಹಿಸಿದ  ಸೂರ್ಯನಾರಾಯಣರಾವ್ ಪೀಸೆ. ಅಧ್ಯಕ್ಷರು ಭಾವಸಾರ ಕ್ಷತ್ರಿಯ ಸಮಾಜ. ಸಂಗೀತದ ಮೂಲಕ ಮಕ್ಕಳಿಗೆ ತಮ್ಮ ಭಾಷೆ, ಸಂಸ್ಕೃತಿ, ಜನಪದ ಪರಂಪರೆ ಮತ್ತು ಮೌಲ್ಯಗಳ ಪರಿಚಯವಾಗುತ...
Image
ಸಂಸದ ಗೋವಿಂದ ಕಾರಜೋಳ ಬಗ್ಗೆ ಅವಹೇಳನಕಾರಿ ಪೋಸ್ಟರ್ ಕ್ರಮಕ್ಕೆ ರವೀಂದ್ರ ಜಲ್ದಾರ್ ಪೊಲೀಸರಿಗೆ ಒತ್ತಾಯ   ಜಯ ಧ್ವಜ ನ್ಯೂಸ್, ರಾಯಚೂರು,ಜು.25- ಸಾಮಾಜಿಕ ಜಾಲತಾಣಗಳಲ್ಲಿ  ಚಿತ್ರದುರ್ಗ ಸಂಸದರ  ವಿರುದ್ಧ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಅವಹೇಳನಕಾರಿ , ಮಾನಹಾನಿಕರ ಹಾಗೂ ಸಾರ್ವಜನಿಕ ಶಾಂತಿ ಕದಡುವ ಉದ್ದೇಶದ ಪೋಸ್ಟ್ ಗಳನ್ನು ಪ್ರಕಟಿಸಿರುವ ಪಾವಗಡ ಮೂಲದ ಶ್ರೀನಿವಾಸ್ ಬಾಬು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ರವೀಂದ್ರ ಜಲ್ದಾರ್  ಮನವಿ ಪತ್ರಿ ಸಲ್ಲಿಸಿದರು.   ಪಾವಗಡ ತಾಲ್ಲೂಕಿನ ಶ್ರೀನಿವಾಸ್ ಬಾಬು ಎಂಬ ವ್ಯಕ್ತಿಯು , ಚಿತ್ರದುರ್ಗ ಲೊಕಸಭಾ ಸಂಸದರಾದ ಶ್ರೀ ಗೋವಿಂದ್ ಕಾರಜೋಳ ಅವರ ವಿರುದ್ಧ ನಿರಂತರವಾಗಿ ಅವಹೇಳನಕಾರಿ , ಮಾನಹಾನಿಕರ ಹಾಗೂ ಗೌರವಕ್ಕೆ ದಕ್ಕೆ ತರುವ ರೀತಿಯ ಪೋಸ್ಟ್ ಗಳನ್ನು ಪ್ರಕಟಿಸುತ್ತಿದ್ದಾರೆಂದು ದೂರಿದ ಅವರು ದೇಶದ ಪ್ರಮುಖ ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವನ್ನು ಉದ್ದೇಶಪೂರ್ವಕವಾಗಿ "ಬ್ಲೂ ಜೆಪಿ" ಎಂಬ ಅವಹೇಳನಕಾರಿ ಪದ ಮತ್ತು ನಮ್ಮ ಪಕ್ಷದ ಕಾರ್ಯಕರ್ತರನ್ನು "ದಲ್ಲಾಳಿಗಳು" ಎಂಬ ಪದಗಳನ್ನು ಬಳಸಿ ನಿಂದಿಸುತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಭಾವನೆಗಳಿಗೆ ದಕ್ಕೆ  ಉಂಟಾಗುತ್ತಿದೆ ಇಂತಹ ಪೋಸ್ಟ್ಗಳು ಸಾರ್ವಜನಿಕರಲ್ಲಿ ದ್ವೇಷ, ವೈಮನಸ್ಸು ಮತ್ತು ಉದಿಗ್ನತೆ ಉಂಟು ಮಾಡುವ ಸಾಧ್ಯತೆ ಇದ್ದು , ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ತರುವಂತಿ...
Image
  ಜು.28ರಂದು ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು  ಜೀವಮಾನ ಸಾಧನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ - ಗುರುನಾಥ ಜಯ‌ ಧ್ವಜ ನ್ಯೂಸ್ ,ರಾಯಚೂರು,ಜು.25- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ಮತ್ತು ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜು.28 ರಂದು ಬೆಳಗ್ಗೆ 10.30  ಗಂಟೆಗೆ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸುವರು. ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಪ್ರಶಸ್ತಿ ಪ್ರದಾನ ಮಾಡುವರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡುವರು. ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ, ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಮಾನಪ್ಪ ವಜ್ಜಲ್, ಕರೆಮ್ಮ ನಾಯಕ, ಹಂಪಯ್ಯ ನಾಯಕ, ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್, ಬಸನಗೌಡ ಬಾದರ್ಲಿ, ಶರಣಗೌಡ ಬಯ್ಯಾಪುರ, ಜಿಲ್ಲಾಧಿಕಾರಿ ಪೂವಿತಾ ಎಸ್, ಎಸ್‌ಪಿ ಅರುಣಾಂಗ್ಷು ಗಿರಿ, ಜಿಪಂ ಸಿಇಒ ಈಶ್ವರ...
Image
  ಕೆಪಿಎಮ್‌ಇ ಕಾಯ್ದೆ ಅನುಷ್ಠಾನ ಸಮಿತಿ ಸಭೆ: ನಕಲಿ ವೈದ್ಯರು, ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ- ಜಿಲ್ಲಾಧಿಕಾರಿ ಪೂವಿತಾ ಎಸ್. ಜಯ ಧ್ವಜ ನ್ಯೂಸ್  ,ರಾಯಚೂರು ಜು. 24- ಜಿಲ್ಲೆಯಲ್ಲಿ ಕೆಪಿಎಮ್‌ಇ ಕಾಯ್ದೆಯಡಿ ನೋಂದಾಯಿಸದ ಅಥವಾ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೈದ್ಯರು, ಆಸ್ಪತ್ರೆಗಳು ಮತ್ತು ವ್ಯಸನ ಮುಕ್ತಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರಿಂದು  ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕೆಪಿಎಮ್‌ಇ ಕಾಯ್ದೆ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಯಚೂರು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರವಾನಗಿ ಇಲ್ಲದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವೈದ್ಯರಲ್ಲದವರು ಅನಧಿಕೃತವಾಗಿ ವೈದ್ಯ ವೃತ್ತಿಯನ್ನು ಮಾಡುತ್ತಿರುವ ನಕಲಿ ವೈದ್ಯರ ಮಾಹಿತಿ ಪಡೆಯಬೇಕು. ವೈದ್ಯ ಪದವಿ ಪಡೆಯದೆ ಜನರ ಜೀವಕ್ಕೆ ತೊಂದರೆಯುಂಟು ಮಾಡುವುದನ್ನು ತಡೆಯಲು ಎಲ್ಲ ನಕಲಿ ವೈದ್ಯರನ್ನು ಗುರ್ತಿಸಿ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕವಾಗಿ ಹಾಗೂ ಕೆಪಿಎಮ್‌ಇ ಕಾಯ್ದೆ-2007ರ ಅಡಿ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು....
Image
  ಓಪೆಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳ ಭೇಟಿ ವಿವಿಧ ವಿಭಾಗಗಳ ಪರಿಶೀಲನೆ ಜಯ ಧ್ವಜ ನ್ಯೂಸ್ , ರಾಯಚೂರು ,ಜು.23- ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಇಂದು  ನಗರದಲ್ಲಿರುವ ಓಪೆ ಕ್ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿವಿಧ ವಿಭಾಗಗಳಾದ ಕಾರ್ಡಿಯಾಲಜಿ. ಕಿಮೋ ಥೆರಫಿ. ಡಯಾಲಿಸಸ್ ಕ್ಯಾಥಲ್ಯಾಬ್ ಸ್ಕ್ಯಾನಿಂಗ್ ಸೆಂಟರ್, ಟ್ರಾಮಾ ಕೇರ್ ಸೇರಿದಂತೆ ಇತರೆ ವಿ‌ಭಾಗಗಳ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಮತ್ತು ಆಸ್ಪತ್ರೆಗೆ ಅವಶ್ಯಕತೆ ಇರುವ ಉಪಕರಣಗಳ ಪಟ್ಟಿ ನೀಡುವಂತೆ ಆಸ್ಪತ್ರೆಯ ನಿರ್ದೇಶಕರಿಗೆ  ಸೂಚಿಸಿದರು.  ಓಫೆಕ್ ಆಸ್ಪತ್ರೆಗೆ ಬಂದ ರೋಗಿಗಳ ಆರೋಗ್ಯ ವಿಚಾರಿಸಿದ ಅವರು ಚಿಕಿತ್ಸೆ ಹೇಗೆ ನೀಡುತ್ತಿದ್ದಾರೆ ಎಂದು ಅವರಿಂದ ಮಾಹಿತಿ ಪಡೆದು ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡುವಂತೆಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಓಫೆಕ್ ಆಸ್ಪತ್ರೆಯ ನಿರ್ದೇಶಕರಾದ ರಮೇಶ್ ಸೇರಿದಂತೆ ಆಸ್ಪತ್ರೆಯ ಇತರೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Image
  ಹಿರಿಯ ಸಾಹಿತಿ ಬಿ.ಜಿ ಹುಲಿ ಜನ್ಮ ದಿನಾಚರಣೆ,  1 ಲಕ್ಷ 6೦ ಸಾವಿರ ರೂ ದೇಣಿಗೆ ಅರ್ಪಣೆ: ಮಟಮಾರಿಯ ಶಿವಾನಂದ ಮಠದ ಸಾಮಾಜಿಕ ಕಳಕಳಿ ಶ್ಲಾಘನೀಯ -ಡಾ.ಹಂಪಣ್ಣ ಸಜ್ಜನ ಜಯ ಧ್ವಜ ನ್ಯೂಸ್ ,ರಾಯಚೂರು,ಜು.22- ಸಮಾಜದಲ್ಲಿನ ದುರ್ಬಲ ವರ್ಗದ ಮಕ್ಕಳಿಗೆ ಜ್ಞಾನ ಹಾಗೂ ಅನ್ನ ದಾಸೋಹದ ಮೂಲಕ ಮಠ ಮಾನ್ಯಗಳು ವಿಶಿಷ್ಠ ಕೊಡುಗೆ ನೀಡುತ್ತಿವೆ ಎಂದು ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ ಹೇಳಿದರು. ರಾಯಚೂರಿನ ದಿ.ಸಾವಿತ್ರಿದೇವಿ.ಬಿ.ಹುಲಿ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ಆಪ್ತ ನಿವೃತ್ತ ಸ್ನೇಹಿತರಿಗೆ ಸನ್ಮಾನ ಹಾಗೂ ನಿವೃತ್ತ ಉಪನ್ಯಾಸಕ ಬಿ.ಜಿ.ಹುಲಿ ಅವರ 8೦ನೇ ವರ್ಷದ ಜನ್ಮ ದಿನದ ಹಿನ್ನೆಲೆಯಲ್ಲಿ ತಾಲೂಕಿನ ಮಟಮಾರಿಯ ಶ್ರೀ ಶಿವಾನಂದ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಯಚೂರು ನಗರದ ಬಸವ ಸೇವಾ ಪ್ರತಿಷ್ಠಾನದ ಬಸವ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಶ್ರೀ ಶಿವಾನಂದ ಮಠಕ್ಕೆ ತಲಾ 80 ಸಾವಿರ ರೂ. ದೇಣಿಗೆ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಟಮಾರಿಯ ಶ್ರೀ ಶಿವಾನಂದ ಮಠವು 80 ಕ್ಕೂ ಹೆಚ್ಚು ಅನಾಥ ಹಾಗೂ ಬಡ ಮಕ್ಕಳಿಗೆ ಉಚಿತ ವಸತಿ, ಊಟ, ಮತ್ತು ಶಿಕ್ಷಣ ನೀಡುತ್ತಿದೆ. ಇಂತಹ ಮಕ್ಕಳ ಉನ್ನತಿಗಾಗಿ ಶ್ರಮಿಸುತ್ತಿರುವ ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದ ಅವರು, ಹಿರಿಯ ಸಾಹಿತಿಗಳಾದ ಬಿ.ಜಿ.ಹುಲಿ ಅವರ ಜನ್ಮದಿನವನ್ನು ಸಮಾಜಕ್ಕೆ ಮಾದರಿಯಾಗಿ ಆಚರಿಸಿಕೊಂಡು ಶಿಕ್ಷಣ, ದಾಸೋಹ ಪರ...
Image
ಗಣೇಶ ಚತುರ್ಥಿ ಹಬ್ಬದ ಪೂರ್ವಭಾವಿ ಸಭೆ: ಪರಿಸರ ಸ್ನೇಹಿಯಾಗಿ, ಸೌಹಾರ್ದಯುತವಾಗಿ ಆಚರಿಸಿ- ಜಿಲ್ಲಾಧಿಕಾರಿ ಪೂವಿತಾ ಎಸ್ . ಜಯ ಧ್ವಜ ನ್ಯೂಸ್ ,ರಾಯಚೂರು ಜು 22 - ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಸೌಹಾರ್ದಯುತವಾಗಿ ಆಚರಿಸಬೇಕು ಎಂದು ರಾಯಚೂರು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು. ಜುಲೈ 22ರ ಬುಧವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗಣೇಶ ಹಬ್ಬದ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡುವುದರಿಂದ ಪರಿಸರಕ್ಕೆ ಮಾರಕವಾಗುವುದನ್ನು ತಪ್ಪಿಸಬಹುದು. ಪಿ.ಒ.ಪಿ ಯಿಂದ ನಿರ್ಮಿಸಿರುವ ಹಾಗೂ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ವಿಷಕಾರಿ ರಾಸಾಯನಿಕಗಳು ಜಲಮೂಲಗಳಾದ ಕೆರೆ, ಬಾವಿ, ಹಳ್ಳ ಸೇರಿ ನೀರು ಕಲುಷಿತಗೊಳ್ಳುತ್ತದೆ. ಇದು ಜಲಚರಗಳಿಗೆ ಹಾಗೂ ಮಾನವನಿಗೆ ಅತ್ಯಂತ ಹಾನಿಕರ ಎಂದರು. ಪಿ.ಒ.ಪಿ ಗಣಪತಿ ವಿಗ್ರಹಗಳ ಸಾಗಣೆ, ದಾಸ್ತಾನು ಹಾಗೂ ಮಾರಾಟವನ್ನು ತಡೆಗಟ್ಟಬೇಕು. ವಿಗ್ರಹಗಳ ತಯಾರಿಕಾ ಘಟಕ, ಮಾರಾಟ ಸ್ಥಳಗಳಿಗೆ ಅನಿರೀಕ್ಷಿತ ಭೇಟಿಗಳನ್ನು ನೀಡಿ, ತಪಾಸಣೆ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದ ಪ್ರಕಾರ ನಮ್ಮ ನೀರಿನ ಮೂಲಗಳನ್ನು ನಾವು ರಕ್ಷಿಸಿಕೊಳ್ಳಬೇಕು...
Image
ರಕ್ತದಾನದಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ- ಡಾ.ನಂದಿತಾ                                                            ಜಯ‌ ಧ್ವಜ ನ್ಯೂಸ್ , ರಾಯಚೂರು, ಜು.22 - ಆರೋಗ್ಯವಂತರಾಗಿರುವ ಪ್ರತಿಯೊಬ್ಬರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಬಹಳಷ್ಟು ಒಳ್ಳೆಯದು ಇದರಿಂದ ನಮ್ಮ ಆರೋಗ್ಯವು ಸರಿಯಾಗಿರುವಂತೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ರಕ್ತದಾನದಿಂದ ಆರೋಗ್ಯಕ್ಕೆ ಯಾವುದೇ ಹಾನಿಯಲ್ಲವೆಂದು   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ನಂದಿತಾ ಹೇಳಿದರು. ಅವರು ನಗರದ ಜಹಿರಾಬಾದ್ ಬಡಾವಣೆಯಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಹಾದಾನವಾಗಿದ್ದು ತುರ್ತು ಸಂದರ್ಭದಲ್ಲಿ ಮತ್ತೊಬ್ಬರಿಗೆ ಜೀವದಾನ ನೀಡುತ್ತದೆ ಎಂದರು.  ರಿಮ್ಸ್  ವೈದ್ಯಾಧಿಕಾರಿಗಳಾದ  ಅಹಮದ್  ಹುಸೇನ್ ಮಾತನಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವದರಿಂದ ಕ್ಯಾನ್ಸರ್ ರೋಗವನ್ನು ಸಹ ನಾವು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬರ ದೇಹದಲ್ಲಿ ರಕ್ತವು ಯಾವುದೇ ರೀತಿಯಿಂದ ಕೃತಕವಾಗಿ ತಯಾರಾಗುವುದಿಲ್ಲ ಅದನ್ನು ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ ಮಾತ್ರ ಪಡೆದು...
Image
ಬೀದಿ ನಾಯಿಗಳ ದಾಳಿ ತಡೆಗೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ-ಜಿಲ್ಲಾಧಿಕಾರಿ ಪೂವಿತಾ ಎಸ್. ಜಯ ಧ್ವಜ ನ್ಯೂಸ್ ,ರಾಯಚೂರು. ಜು. 21- ಬೀದಿ ನಾಯಿಗಳಿಂದ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ದಾಳಿ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಇಂದು ಸಭೆ ಕರೆಯಲಾಗಿದ್ದು ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮರು ಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ  ಮಾತನಾಡಿದರು. ಈ ಹಿಂದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಗಾಯಗೊಂಡಿರುವ ಹಾಗೂ ಕೆಲವು ದುರ್ಘಟನೆಗಳಲ್ಲಿ ಮಕ್ಕಳ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ, ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ  ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಬೀದಿ ನಾಯಿಗಳಿಗೆ ಆಹಾರ ಹಾಕುವವರು ಹಾಗೂ ಮಟನ್ ಅಂಗಡಿಗಳ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ನಿಯಮ ಬಾಹಿರವಾಗಿ ವಿಲೇವಾರಿ ಮಾಡುವವರ ವಿರುದ್ಧ ದಂಡ ವಿಧಿಸಲು ಕ್ರಮ ಕೈಗೊಳ್ಳಲ...
Image
  ಎಸ್ ಆರ್ ಪಿ ಎಸ್  ಪದವಿ ಪೂರ್ವ ಕಾಲೇಜಿನಲ್ಲಿ ಚೆಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ  ಜಯ‌ಧ್ವಜ ನ್ಯೂಸ್  ,ರಾಯಚೂರು,ಜು.21- ನಗರದ ತಾರಾನಾಥ್ ಶಿಕ್ಷಣ ಸಂಸ್ಥೆಯ ಎಸ್ ಆರ್ ಪಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಯಚೂರು ನಗರದ ವಿವಿಧ ಶಾಲೆಗಳ 12 ವರ್ಷದೊಳಗಿನ, 14 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಚೆಸ್ ಪಂದ್ಯಾವಳಿ -2026 ಆಯೋಜಿಸಲಾಗಿತ್ತು. 12ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ  ಎಸ್ ಆರ್ ಸುಖಾಣಿ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿ ಕು.ರೋನಿತ್ ಪ್ರಥಮ ಸ್ಥಾನವನ್ನು ಪಡೆದರೆ, ಐಡಿಪಿಎಸ್ ಶಾಲೆಯ ವಿದ್ಯಾರ್ಥಿ ಕು. ಸಮ್ಯಕ್ ಜೈನ ದ್ವೀತಿಯ ಸ್ಥಾನ ಪಡೆದರೆ, ರೆಸ್ ಕಾನ್ಸೆಪ್ಟ್ ಶಾಲೆಯ ವಿದ್ಯಾರ್ಥಿ ಕು.ಅನಂತ ಜವಾರ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 14 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ  ಐಡಿಪಿಎಸ್ ಶಾಲೆಯ ವಿದ್ಯಾರ್ಥಿ ಕು.ಹರ್ಷಿತ ಪ್ರಥಮ ಸ್ಥಾನವನ್ನು ಪಡೆದರೆ,  ರೆಸ್ ಚಾಣಾಕ್ಶ ಜಿಯೋ ನೆಕ್ಷ್ಟ  ಶಾಲೆಯ ವಿದ್ಯಾರ್ಥಿ ಕು. ಸಂಜಯ ಮೇಟಿ ದ್ವೀತಿಯ ಸ್ಥಾನ ಪಡೆದರೆ, ವಿದ್ಯಾಭಾರತಿ ಸಿಬಿಎಸ್‌ಸಿ  ಶಾಲೆಯ ವಿದ್ಯಾರ್ಥಿ ಕು.ಅಖಿಲೇಶ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಕು.ಮ...
Image
ಕೆ ಎಸ್ ಸಿ ಎ: ಕಲಬುರ್ಗಿಯಲ್ಲಿ ಜು.23ರಂದು ಕ್ರಿಕೆಟ್ ಆಟಗಾರರ ಆಯ್ಕೆ ಪರೀಕ್ಷೆ  .                                                                ಜಯ ಧ್ವಜ ನ್ಯೂಸ್  , ರಾಯಚೂರು , ಜು.21-  ಕೆ ಎಸ್ ಸಿ ಎ ೨೩ ವರ್ಷದೊಳಗಿನ ಬಾಲಕರ ಮುಕ್ತ ಆಯ್ಕೆ ಪರೀಕ್ಷೆಗಳು ೨೦೨೬–೨೭ನೇ ಸಾಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ  ರಾಯಚೂರು ವಲಯದ ೨೩ ವರ್ಷದೊಳಗಿನ ಬಾಲಕರ ಮುಕ್ತ ಆಯ್ಕೆ ಪರೀಕ್ಷೆಗಳು ಕೆಳಕಂಡ ವೇಳಾಪಟ್ಟಿಯಂತೆ ಕಲಬುರಗಿಯ ಕೆಬಿಎನ್ ಮೈದಾನದಲ್ಲಿ ನಡೆಯಲಿವೆ.  ದಿನಾಂಕ: ೨೩-೦೭-೨೦೨೬, ವರದಿ ಸಮಯ: ಬೆಳಿಗ್ಗೆ ೮:೦೦ ಗಂಟೆ ಅರ್ಹತೆ ಹಾಗೂ ಷರತ್ತುಗಳು  ೧. ಆಯ್ಕೆ ಪರೀಕ್ಷೆಗಳು ಅರ್ಹ ೨೩ ವರ್ಷದೊಳಗಿನ ಎಲ್ಲಾ ಆಟಗಾರರಿಗೆ ಮುಕ್ತವಾಗಿವೆ.  ೨. ೦೧-೦೯-೨೦೦೭ ಅಥವಾ ನಂತರ ಜನಿಸಿದ ಪಟುಗಳ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಬೆಂಗಳೂರು ನೀಡಿರುವ ನಿರ್ದೇಶನದಂತೆ ೨೩ ಇಂಟರ್ ಝೋನಲ್ ಟೂರ್ನಮೆಂಟ್‌ಗಳು ಒಂದೇ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿವೆ.  ೩. ೦೧-೦೯-೨೦೦೩ ಅಥವಾ ನಂತರ ಜನಿಸಿದ ಆಟಗಾರರು ಮಾತ್ರ ಆಯ್ಕೆಗೆ ಅರ್ಹರು.  ೪. ವರದಿ ಮಾಡುವ ಸಮಯದಲ್ಲಿ ...