ಮೇಘಾಲಯ ರಾಜ್ಯಪಾಲರಿಂದ ಕುಲಪತಿ ಶಿವಾನಂದ ಕೆಳಗಿನಮನಿ ಇವರಿಗೆ ಪ್ರಶಸ್ತಿ ಪ್ರದಾನ.
ಜಯ ಧ್ವಜ ನ್ಯೂಸ್ ,ರಾಯಚೂರು ಜು. 13- ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನ ಮನಿ ಇವರಿಗೆ ಮೇಘಾಲಯದ ಶಿಲಾಂಗಿನ ಲೋಕಭವನದಲ್ಲಿ ರವಿವಾರ ಸಂಜೆ ನಡೆದ ರಾಷ್ಟ್ರಮಟ್ಟದ ಹೆಮ್ಮೆಯ ಸಾಧಕರು ಪ್ರಶಸ್ತಿಯನ್ನು ಮೇಘಾಲಯ ರಾಜ್ಯಪಾಲರಾದ ಗೌರವಾನ್ವಿತ ಸಿ ಎಚ್ ವಿಜಯಶಂಕರ್ ಪ್ರದಾನ ಮಾಡಿದರು.
ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಒಂದು ವರ್ಷವಾಗಿದ್ದು ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶೈಕ್ಷಣಿಕವಾಗಿ ಆಡಳಿತಾತ್ಮಕವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಗೌರವಾನ್ವಿತ ಕುಲಪತಿಗಳಾದ ಶಿವಾನಂದ ಕೆಳಗಿನಮನಿ ಈ ಪ್ರಶಸ್ತಿ ಲಭಿಸಿದ್ದು ಅವರ ಅಪಾರ ಅಭಿಮಾನಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಖುಷಿ ತಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಘಾಲಯ ರಾಜ್ಯ ಸರ್ಕಾರದ ವಿಶೇಷ ಅಧಿಕಾರಿಗಳು ಮತ್ತು ವಿಶ್ವವಾಣಿ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ವಿಶ್ವೇಶ್ವರಭಟ್ ಇನ್ನಿತರರಿದ್ದರು.

Comments
Post a Comment