ಬ್ರಾಹ್ಮಣ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಜಿ .ಕುಮಾರ್ ನಾಯಕ್ ಹಾಗೂ ಸಚಿವ ಎನ್ ಎಸ್ ಬೋಸರಾಜು
ಬ್ರಾಹ್ಮಣ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಜಿ .ಕುಮಾರ್ ನಾಯಕ್ ಹಾಗೂ ಸಚಿವ ಎನ್ ಎಸ್ ಬೋಸರಾಜು
ರಾಯಚೂರು,ಮಾ.31-ನಗರದ ಆಜಾದ್ ನಗರ ಬಡಾವಣೆಯಲ್ಲಿರುವ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ ಅವರ ನಿವಾಸದಲ್ಲಿ ರಾಯಚೂರು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ಹಾಗೂ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಸಮಾಜದ ಮುಖಂಡರೊಂದಿಗೆ ಸೌಹಾರ್ದಯುತವಾಗಿ ಭೇಟಿಯಾದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗ ರಾವ್ ದೇಶಪಾಂಡೆ, ಡಾ.ಆನಂದತೀರ್ಥ ಫಡ್ನೀಸ್, ಸತ್ಯನಾರಾಯಣ ರಾವ್,ಡಾ.ಅಜೀತ ಕುಲಕರ್ಣಿ , ಆರ. ಎಸ್.ಬದರಿ,ವಿನಯ್ ಬಿದರಿ,ಕೆ.ಪ್ರಹಲ್ಲಾದರಾವ ವಕೀಲ , ವೆಂಕಟೇಶ ಕೋಲಾರ್,ಎ. ಸುಧೀರ್, ಗುರುರಾಜ್ ರಾವ್ ಕುಲ್ಕರ್ಣಿ,ಹನುಮೇಶ ಸರಾಫ್, ಪ್ರಸನ್ನ ಆಲಂಪಲ್ಲಿ,
ವೇಣುಗೋಪಾಲ್ ಇನಾಂದಾರ್ ,ಕಿಶನರಾವ, ಆನಂದ ಕುಲಕರ್ಣಿ, ಅನಿಲ ಗಾರಲದಿನ್ನಿ, ಪ್ರಹಲ್ಲಾದ, ರಂಗಾಚಾರ ಜೋಷಿ, ಜಯಕುಮಾರ ದೇಸಾಯಿ ಕಾಡ್ಲೂರು, ವಿಜಯಕುಮಾರ್ ದೇಸಾಯಿ ಕಾಡ್ಲೂರು,
ರಾಘವೇಂದ್ರ ಎಂ, ವಿಠಲ್, ಸೇರಿದಂತೆ ಬ್ರಾಹ್ಮಣ ಸಮಾಜದ ಮುಖಂಡರು, ಯುವಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ರಡ್ಡಿ, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಶಿವಮೂರ್ತಿ, ರಮೇಶ ಬಿ, ಬಸವರಾಜ ಪಾಟೀಲ್ ಅತ್ತನೂರು ಸೇರಿದಂತೆ ಅನೇಕರಿದ್ದರು.
Comments
Post a Comment