ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ 

ಜಯ ಧ್ವಜ ನ್ಯೂಸ್ ,ರಾಯಚೂರು, ಡಿ.30- ನಗರದ  ರಾಜೇಂದ್ರ ಗಂಜ್  ರೈತ ಭವನದಲ್ಲಿ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಎಂ ಬಾಬಣ್ಣ ಮಂದಕಲ್ ಇವರ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಪ್ರಸ್ತುತ ದಿನಮಾನದಲ್ಲಿ ಇಂತಹ ಸಂಘಟನೆಗಳು ಅವಶ್ಯಕವಾಗಿವೆ ಹಿಂದುಳಿದ ಜಾತಿಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸದೃಢರಾಗಲು ಸಂಘಗಳ ಅವಶ್ಯಕತೆ ವಾಗಿವೆ ಈ ಸಂಘದ ಜೊತೆಗೆ ನಾವು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತೇವೆ  ಒಳ್ಳೆಯ ಕಾರ್ಯಕ್ರಮಗಳಿಗೆ ಕುರುಬ ಸಮಾಜದ ಹಿರಿಯರ ಬೆಂಬಲ ಇದ್ದೇ ಇರುತ್ತದೆ ನೀವುಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಸಮಾಜವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಮುಂದಾಗಿ ಎಂದು ಕರೆ ನೀಡಿ ಭರವಸೆಯ ಮಾತುಗಳನ್ನಾಡಿದರು.

*ಮುಖ್ಯ ಅತಿಥಿಗಳಾಗಿ ಮಾತನಾಡಿದ* ಶ್ರೀಮತಿ ಶ್ರೀದೇವಿ ಆನಂದ್ ಮುಖ್ಯ ಲೆಕ್ಕ ಅಧಿಕಾರಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಾತನಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ನ ಪದಗ್ರಹಣ ಸಮಾರಂಭದಲ್ಲಿ ನಾನು ಪಾಲ್ಗೊಂಡಿರುವುದು ನನ್ನ ಸೌಭಾಗ್ಯ ಎಂದು ಮೆಚ್ಚುಗೆ ಮಾತನಾಡಿ ಟ್ರಸ್ಟ್ ನ ಕಾರ್ಯಕ್ರಮಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಕಾರ್ಯಕ್ರ ಸಂಘಟಿಸಿದ್ದೀರಿ ನಿಮ್ಮ ಉತ್ಸಾಹ ನೋಡಿದರೆ ರಾಯಚೂರು ಜಿಲ್ಲೆಯಲ್ಲಿ  ಉತ್ತಮ ಸಂಘಟನೆಯಾಗಿ ಹೊರಹೊಮ್ಮಲಿದೆ ಎಂದರೆ ತಪ್ಪಾಗದು ಕೇವಲ ಪದಾಧಿಕಾರಿಗಳಿಂದಲೂ ಎಲ್ಲಾ ಸರ್ವ ಅಭಿವೃದ್ಧಿ  ಮಾಡಲು ಸಾಧ್ಯವಿಲ್ಲ ಈ ಸಂಘಟನೆ ಜೊತೆ ಸಮಾಜದ  ಪ್ರತಿಯೊಬ್ಬ ಮನುಷ್ಯನು ಕೂಡ ಸಮಾಜಕ್ಕಾಗಿ ಏನಾದರೂ ಸಹಾಯ ಮಾಡಬೇಕು ಅನ್ನುವ ಮನಸುಗಳು ಇದ್ದಾಗ  ಮಾಡುವುದರ ಮಾತ್ರ ಸಮಾಜ ಉದ್ಧಾರವಾಗಲು ಸಾಧ್ಯವಾಗುತ್ತದೆ. 


ದೇಶದ ಅಪ್ರತಿಮ  ಸ್ವಾತಂತ್ರ್ಯ ಹೋರಾಟಗಾರರು ಆಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ಆದರ್ಶಗಳನ್ನು ಇಟ್ಟುಕೊಂಡು ಟ್ರಸ್ಟ್ ಮುಂದಿನ ದಿನಮಾನಗಳಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟು ಆ ಸ್ವಾತಂತ್ರ್ಯ ಪ್ರೇಮಿಯ ಹೆಸರು ಅಜರಾಮವನ್ನಾಗಿ ಮಾಡಲಿ ಎಂದು ಹಾರೈಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಎಂ ಈರಣ್ಣನವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ರಾಯಚೂರು ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಬಲಿಷ್ಠವಾಗಿ ಮಾಡಲು ಹಲವಾರು ಸಂಘಟನೆಗಳು ಶ್ರಮಿಸುತ್ತಿವೆ .ಇಂದು ಕಲ್ಯಾಣ ಕರ್ನಾಟಕ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಮಾಡಿಕೊಂಡು ಉತ್ತಮ ಸಂಘಟನೆ ಮಾಡಲು ಮುಂದಾಗಿರುವುದನ್ನು ಶ್ಲಾಘಿಸಿದರು.ರಾಜ್ಯ ಸಮಿತಿಯ ಸಹಕಾರ ಮಾರ್ಗದರ್ಶನ ಇರುತ್ತದೆ ತಾವುಗಳು ಸಮಾಜದ ಯುವ ಜನರನ್ನು ,ಮಹಿಳೆಯರನ್ನು ಸಂಘಟನೆಯ ಮುಖ್ಯವಾಹಿನಿಗೆ ತರಲು ಕರೆ ನೀಡಿದರು.

ವೇದಿಕೆಯ ಮೇಲೆ ಕೆ ಪಂಪಾಪತಿ ಹಿರಿಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು,  ಜ್ಯೋತಿ ಗೋಪಾಲ್ ಉದ್ಯಮಿಗಳು ರಾಯಚೂರು,  ಕೆ ಮುನಿಸ್ವಾಮಿ ಉದ್ಯಮಿಗಳು ರಾಯಚೂರು, ಬೇವಿನ ಬೂದೆಪ್ಪ ಕಲ್ಮಲಾ, ರಮೇಶ್ ಮೂಡಲದಿನ್ನಿ, ಶಾಮ ಮೂರ್ತಿ, ಸಿದ್ದಪ್ಪ ರಾಂಪುರ್ ಮಲ್ಲಿಕಾರ್ಜುನ್ ಜಕ್ಕಲದಿನ್ನಿ, ಮುಂತಾದವರು ಭಾಗವಹಿಸಿ ಮಾತನಾಡಿದರು.

ಕುರುಬ ಸಮಾಜದ ನೂರಾರು ಮುಖಂಡರು ಕಾರ್ಯಕರ್ತರು ಉಪಸ್ತಿತರಿದ್ದರು.

**ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು* ವಹಿಸಿರುವ*ಪರಮಪೂಜ್ಯ ಶ್ರೀ ಜ್ಞಾನಾನಂದ ಮಹಾರಾಜ  ಶಿವಾನಂದ್ ಮಠ ಮಟಮಾರಿ ಇವರು ನಮ್ಮ ರಾಯಚೂರು ತಾಲೂಕು ಜಿಲ್ಲೆಯ ಮುಖ್ಯ ಕೇಂದ್ರವಾಗಿದ್ದು ಈ ಕೇಂದ್ರದಲ್ಲಿ ನಮ್ಮ ಸಮಾಜದ ವತಿಯಿಂದ  ಇಡೀ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೋಸ್ಕರ ಒಂದು ವಸತಿ ಆಶ್ರಮವನ್ನು ಸ್ಥಾಪಿಸಿ ಮತ್ತು ಈ ಸಮಾಜದ ಹಿಂದುಳಿದವರಿಗೆ, ದಲಿತರಿಗೆ, ಶೋಷಣೆಗೆ ಒಳಗೊಂಡಿರುವಂತಹ ಹೆಣ್ಣು ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಮುಖ್ಯವಾಹಿನಿ ತರುವಲ್ಲಿ  ಟ್ರಸ್ಟ್ ಕಾರ್ಯನಿರ್ವಹಿಸಬೇಕು ಎಂದು ಆಶೀರ್ವಚನವನ್ನು ನೀಡಿದರು. 

*ಪ್ರಸ್ತಾವಿಕವಾಗಿ ಮಾತನಾಡಿದ* ಶ್ರೀ ರಮೇಶ್ ಉಪ್ರಾಳ  ಈ ಟ್ರಸ್ಟ್ ಇತರೆ ಸಮಾಜಗಳ ಮತ್ತು ನಮ್ಮ ಸಮಾಜದ ಬಹುಮುಖವಾಗಿ ಕಾರ್ಯನಿರ್ವಹಿಸುವುದಿಲ್ಲ ಈ ಟ್ರಸ್ಟ್ 

ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಕುರುಬ ಸಮಾಜದ ಅಭಿವೃದ್ಧಿಯಷ್ಟೇ ಅಲ್ಲದೆ ಸಮಾಜದ ಎಲ್ಲಾ ಸಮಾಜದ ಅಭಿವೃದ್ಧಿಗೋಸ್ಕರ ಪ್ರತಿ ವರ್ಷವೂ ಈ ಸಂಸ್ಥೆ ಕ್ರಿಯಾಯೋಜನೆಯನ್ನು ಆಯೋಜನೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತದೆ. ಆದರಿಂದ 2026 ಸಾಲಿನಲ್ಲಿ ಈ ಟ್ರಸ್ಟು ತನ್ನದಾದಂತ  *1. ಪ್ರತಿಭಾವಂತ, ಕಡುಬಡತನ ಇರುವ ಸಮಾಜದ 50 ಜನ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ರಾಯಣ್ಣ ನಿಧಿ ಎಂದು ಸ್ಥಾಪಿಸಿ ಪ್ರತಿ ವರ್ಷ ಧನ ಸಹಾಯ ಮಾಡುವುದು.                                                                             2. ಸಮಾಜದ ಅತಿ ಹೆಚ್ಚು ಅಂಕಗಳನ್ನು ತೆಗೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.                                            3. ಪ್ರತಿ ವರ್ಷ ಜನವರಿಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು.                                                        4. ಸಮಾಜಕ್ಕಾಗಿ ವಿವಿಧ ಶೈಕ್ಷಣಿಕ ಕಾರ್ಯಗಳು ಮತ್ತು ಆರೋಗ್ಯ ಶಿಬಿರಗಳು ಹಾಗೂ ಪರಿಸರ ಸಂರಕ್ಷಣೆಯಂತಹ ಕಾರ್ಯಗಳನ್ನು ಮಾಡುವುದು.                                             5. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುವುದು. ಇತರೆ  ಉದ್ದೇಶಗಳನ್ನು ಹಾಕಿಕೊಂಡು ಸಾಧಿಸುವಂಥ ಗುರಿಗಳನ್ನು ಈಡೇರಿಸುತ್ತದೆ ಎಂದು ಮಾತನಾಡಿದರು.

 *ಈ ಟ್ರಸ್ಟ್ ಗೆ  ಹೊಸ ಪದಾಧಿಕಾರಿಗಳ ನೇಮಿಸಿಕೊಂಡಿರುವ ವಿವರ* 

1) ಶ್ರೀ B.ಬಸವರಾಜ್ ಗೌರವಾಧ್ಯಕ್ಷರು 

2) ಶ್ರೀ ರಾಜಶೇಖರ್ ದಿನ್ನಿ ಗೌರವ ಸಲಹೆಗಾರರು 

3) ಶ್ರೀ ಅಯ್ಯಣ್ಣ ವಡವಟ್ಟಿ 

ಅಧ್ಯಕ್ಷರು 

4) ಶ್ರೀ ವಿ.ಜಗದೀಶ್ ರಾಯಚೂರು ಉಪಾಧ್ಯಕ್ಷರು 

5) ಶ್ರೀ ಸಂಗಮೇಶ ಭಂಡಾರಿ ಕಲಮಲ ಉಪಾಧ್ಯಕ್ಷರು

6) ನರಸಿಂಹ ತೋರ್ಸಿ ಉಪಾಧ್ಯಕ್ಷರು 

7) ಶ್ರೀ ವೆಂಕಟೇಶ್ ಇಡಪನೂರು ಜಂಟಿ ಕಾರ್ಯದರ್ಶಿ

8) ಶ್ರೀ ಡಿ ಶ್ರೀನಿವಾಸ್ ರಾಯಚೂರು ಪ್ರಧಾನ ಕಾರ್ಯದರ್ಶಿಗಳು 

9) ಶ್ರೀ ರಮೇಶ್ ಉಪ್ರಾಳ 

ಖಜಾಂಚಿ 

10) ಶ್ರೀ ವೆಂಕಟೇಶ್ ಉಪ್ರಾಳ 

ಜಂಟಿ ಕಾರ್ಯದರ್ಶಿಗಳು 

11) ಶ್ರೀ ಕೆ ರಾಮು ಗಿಲೇರಿ

ಸಂಘಟನಾ ಕಾರ್ಯದರ್ಶಿಗಳು 

12) ಶ್ರೀ ಭೀಮಣ್ಣ ಗಂಗವಾರ ಸಂಘಟನಾ ಕಾರ್ಯದರ್ಶಿಗಳು 

13) ಡಾ. ಈರಣ್ಣ ಪೂಜಾರಿ ಸಂಘಟನಾ ಕಾರ್ಯದರ್ಶಿ 

14) ಶ್ರೀ ಕೆ ಅನಿಲ್ ಕುಮಾರ್ ಸಂಘಟನಾ ಕಾರ್ಯದರ್ಶಿ

15) ಶ್ರೀ ವೀರಪ್ಪಕ್ಷಪ್ಪ ಕೊರವಿಹಾಳ ಸಂಘಟನಾ ಕಾರ್ಯದರ್ಶಿ

16) ಶ್ರೀ ಜಿ.ಕೆ. ಶಿವಪ್ಪ ಗಿಲ್ಲೇಸೂಗೂರು ಸಂಘಟನ ಕಾರ್ಯದರ್ಶಿ

 *ಕಾನೂನು ಸಲಹೆಗಾರರಾದ* 

ಶ್ರೀ ಚಂದ್ರಮೌಳಿ ಬಲ್ಲಾಳ್ ವಕೀಲರು 

ಇನ್ನು ಇತರೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕೊನೆಗೆ ಕಾರ್ಯಕ್ರಮವನ್ನು ಶ್ರೀ ಭೀಮಣ್ಣ ಗಂಗವಾರ್ ನಿರೂಪಿಸಿದರು ಪ್ರಸ್ತಾವಿಕವಾಗಿ ಶ್ರೀ ರಮೇಶ್ ಉಪ್ರಾಳ ಮಾತನಾಡಿದರು ಈರಣ್ಣ ಪೂಜಾರಿ ಸ್ವಾಗತಿಸಿದರು ಬಜಾರಪ್ಪ ಗೊನವಾರ್ ವಂದಿಸಿದರು..

Comments

Popular posts from this blog