ವಾರ್ಡ್ ನಂ.13ರಲ್ಲಿ ಕಲಬೆರಿಕೆ ಸೇಂದಿ ನಿರ್ಮೂಲನೆ ಅರಿವು ಕಾರ್ಯಕ್ರಮ: ಕಲಬೆರಿಕೆ ಸೇಂದಿ ಹಾವಳಿ ತಡೆಗಟ್ಟಲು ಎಲ್ಲರ ಸಹಕಾರ ಅತ್ಯಗತ್ಯ- ಜಲ್ದಾರ್ ಜಯ ಧ್ವಜ ನ್ಯೂಸ್ ,ರಾಯಚೂರು,ಡಿ.28-
ನಗರದ ವಾರ್ಡ್ ನಂ. 13ರಲ್ಲಿ ಇಂದು ಜಿಲ್ಲಾ ಆಡಳಿತ ಪೋಲಿಸ್ ಇಲಾಖೆ, ಅಬಕಾರಿ ಇಲಾಖೆ, ಆರೋಗ್ಯ ಇಲಾಖೆ ಸಿ.ಎಚ್.ಪೌಡರ್ ಹಾಗೂ ಕಲಬೆರಕೆ ಸೇವನೆ ಮತ್ತು ಮಾರಾಟ ಮಾಡುವುದನ್ನು ನಿರ್ಮೂಲನೆ ಅರಿವು ಮಾಡುವ ಅರಿವು ಕಾರ್ಯಕ್ರಮವನ್ನು ಅಶೋಕ ನಗರ ಬಡಾವಣೆಯಲ್ಲಿ ಬಿಜೆಪಿ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಖ್ಯಾತ ಮನೋರೋಗ ತಜ್ಞ ಮನೋಹರ್ ಪತ್ತಾರ್ ಮಾತನಾಡುತ್ತ ಅಂಕಿ ಅಂಶಗಳ ಪ್ರಕಾರ ಕಲುಷಿತ ಸೇಂದಿ ಪೌಡರ್ ನಿಂದ ರಿಮ್ಸ್ ನಲ್ಲಿ ಬಹಳ ಸಾವುಗಳು ಅಗಿವೆ ಅಲ್ಲದೆ ಕಳ್ಳ ಸಾಗಣೆ ಮೂಲಕ ತಂದು ಮಾರುವವರಿಗೆ ಲಾಭವಾದರೆ ಸೇಂದಿ ಕುಡಿಯುವವರ ಕುಟುಂಬಕ್ಕೆ ಸಾವಿನ ನಷ್ಟವಾಗುತ್ತದೆ ಎಂದು ಮಾರ್ತಿಮಿಕವಾಗಿ ತಿಳಿಸಿದರು.
ಇದು ಅಷ್ಟೇ ಅಲ್ಲ ಸೇಂದಿ, ಗಾಂಜ, ಬಾರ್ ನಲ್ಲಿ ಸಿಗುವ ಪದಾರ್ಥಗಳು ಇರಬಹುದು ಇದರಿಂದ ಅನೇಕ ಅಕ್ರಮ ಚಟುವಟಿಕೆಗಳು ಹಾಗೂ ಕೊಲೆ, ಸುಲಿಗೆ, ಅತ್ಯಾಚಾರಗಳು ಅಗುತ್ತವೇ ಎಂದ ಅವರು ಧ್ಯಾನ, ಯೋಗ, ವ್ಯಾಯಮದಿಂದ ಅಗುವ ಪ್ರಯೋಜನೆಗಳ ಬಗ್ಗೆ ತಿಳಿ ಹೇಳಿದರು.
ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಮಾತನಾಡಿ ಅಶೋಕ ನಗರ, ಜಿ.ಡಿ.ತೋಟ, ತಿಮ್ಮಪೂರಪೇಟೆ ಹಾಗೂ ಅನೇಕ ಬಡಾವಣೆಗಳ ಬಗ್ಗೆ ಮಾಹಿತಿ ನೀಡಿ ಅಬಕಾರಿಯ ಇಲಾಖೆಯ ಕೆಲವು ತೊಂದರೆಗಳನ್ನು ಕೂಡಾ ಹೇಳಿದರು. ಕಲಬೆರಿಕೆ ಮತ್ತು ಸಿಹೆಚ್ ಪೌಡರ್ ಅನ್ನು ನೇರವಾಗಿ ಮಾರುತ್ತಿದ್ದಾರೆ ಅದಕ್ಕೆ ಕಡಿವಾಣ ಹಾಕಬೇಕೆಂದು ಎಲ್ಲಾ ಪೋಲಿಸ್ ಅಧಿಕಾರಿಗಳಿಗೆ ಒತ್ತಾಯ ಮಾಡಿದರು ಮತ್ತು ಗಾಂಜಾ ಸೇವನೆ ದುಷ್ಪರಿಣಾಮ ಬಗ್ಗೆ ಮಾಹಿತಿ ನೀಡಿದರು. ರಮೇಶ ಬಾಬು ರಿಮ್ಸ್ ರವರು ಮಾತನಾಡಿ ಬುದ್ದ, ಬಸವ, ಪಂಪ, ಅಂಬೇಡ್ಕರ್ ಹಾಗೂ ಅನೇಕ ಶರಣರ ವಚನಗಳ ಮುಖಾಂತರ ಮಾಹಿತಿ ನೀಡುತ್ತಾ, ಹಾದಿ ಮತ್ತು ವ್ಯಾದಿಯಿಂದ ಪ್ರಾರಂಭ ಮಾಡಿ ಮಕ್ಕಳ ಅಭಿಪ್ರಾಯ ಹೇಳಿದರು ಕುಟುಂಬದಲ್ಲಿ ಹೇಗೆ ಜೀವನ ನಡೆಯುತ್ತದೆ ಹಾಗೆ ಮಕ್ಕಳ ಜೀವನ ಕೂಡಾ ಅದೇ ರೀತಿ ಕಲಿಯುತ್ತಾರೆ ಎಂದು ತಿಳಿಸಿದರು. ಹರಿಶ್ ನಾಡಗೌಡ ಸಂತೋಷ ಮತ್ತು ದುಃಖದ ವಿಷಯವಾಗಿ ಹೇಳಿದರು ಇವರು ರಾಜಕೀಯ ನಾಯಕರು, ಅಧಿಕಾರಿಗಳು, ವೈದ್ಯರು ಮತ್ತು ಪೋಲಿಸ್ ರ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾ ಈ ನಾಲ್ಕು ವರ್ಗಕ್ಕೆ ಎಲ್ಲಾ ತಿಳಿದರು ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು. ಕಾನೂನು ವ್ಯವಸ್ಥೆ ಕೆಟ್ಟುಹೋಗಿದೆ ಯಾಕೆಂದರೆ ಪೋಲಿಸರು ಸೇಂದಿ ಹಾಗೂ ಗಾಂಜ ಮಾರುವವರನ್ನು ಕರೆದುಕೊಂಡು ಹೋಗುತ್ತಾರೆ ಮತ್ತೆ ಪೋಲಿಸರು ಮತ್ತೇ ಅವರನ್ನು ತಕ್ಷಣ ಬಿಟ್ಟು ಕಳಿಸುತ್ತಾರೆ, ಹಾಗೆ ಪದೇ ಪದೇ ಪ್ರಕರಣ ದಾಖಲಿಸಿದರೂ ಹಾಗೆ ಮಾರುತ್ತಾರೆ ಎಂದು ಹೇಳುತ್ತಾ ಅಂತವರನ್ನ ಗಡಿಪಾರು ಮಾಡುವ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆ ಶಿಕ್ಷಣ ಬಗ್ಗೆ ಆಸಕ್ತಿ ತೊಡಗಿಸಿಕೊಂಡು ಸರ್ಕಾರ ಸ್ಲಂ ಬಡಾವಣೆಗಳಲ್ಲಿ ಹೆಚ್ಚು ಹೆಚ್ಚು ಗ್ರಂಥಾಲಯಗಳನ್ನು ತೆರೆದು ಶಿಕ್ಷಣದ ಆಸಕ್ತಿ ತೋರಬೇಕೆಂದು ಎಂದು ಹೇಳಿದರು
ನೇತಾಜಿ ನಗರ ಪಿಎಸ್ಐ ಬಸವರಾಜ ಮಾತನಾಡಿ
ಒಟ್ಟು 24 ಪ್ರಕ್ರಿಯೆಗಳಲ್ಲಿ 13 ಒಟ್ಟು ಕೈ ಹೆಂಡ, 6 ಗಾಂಜ, ಪ್ರಸೂಕ್ಯಟ್ ಕೇಸ್, ಇನ್ನೂ ಅನೇಕ ಕೇಸ್ಗಳು ಗಾಂಜ ಮತ್ತು ಸೇಂದಿಯಿಂದ ಹತ್ಯೆ ಕೇಸ್ಗಳು ಹೆಚ್ಚಾಗಿವೆ ಎಂದು ಹೇಳಿದರು.
4-5 ಕೇಸ್ಗಳು ಆದರೇ ಗಡಿಪಾರು ಕೇಸ್ಗಳನ್ನು ಮಾಡುತ್ತೇವೆ ಎಂದ ಅವರು ಮಾಧ್ಯಮದಲ್ಲಿ ಇಲ್ಲಸಲ್ಲದ ಮಾಹಿತಿ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.
ಅದ್ಯಕ್ಷೀಯ ಭಾಷಣ ಮಾಡಿದ ಅಬಕಾರಿ ಇಲಾಖೆಯ ಉಪಾಧೀಕ್ಷಕರಾದ ಮೋನಪ್ಪ ಮತನಾಡುತ್ತ ತೆಲಂಗಾಣ ಮತ್ತು ಆಂಧ್ರದಲ್ಲಿ ಯಾವುದೇ ಕಲೆಬೆರಿಕೆ ರಹಿತ ಸೇಂದಿ ಇಲ್ಲ ಎಂದು ಹೇಳಿದರು. 9 ಜನ ವಿರುದ್ದ ಗಡಿಪಾರು ಸಂಬಂಧಿಸಿದಂತೆ ಕೆಲಸ ನಡೆಯುತ್ತಿದೆ ಎಂದರು.
ಸರಸ್ವತಿ ಸಿ.ಎಚ್ ಪೌಡರ್ ಬಗ್ಗೆ ಕುಡಿಯುವುದರಿಂದ ಅಗುವ ದುಷ್ಪರಿಣಾಮಗಳು ಮತ್ತು ಸಿ.ಎಚ್ ಪೌಡರ್ ಅನ್ನು ಅಧಿವೇಶನದಲ್ಲಿ ಪ್ರತಿಧ್ವನಿಸಿದ ಬಗ್ಗೆ ಮಾತನಾಡಿದರು ಹಾಗೆ ವಂದನಾ ಅರ್ಪಣೆ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಅಮೃತ ಬಿಂದು, ಸತ್ಯನಾರಾಯಣ, ಚಂದ್ರಶೇಖರ್ ಪಾಟೀಲ್, ಡಿಸಿಐಎಬಿ ಶರಣಮ್ಮ, ಎಂ.ಡಿ. ಹುಸೇನ್ ಅಮೃತ ಬಿಂದು ಅಬಕಾರಿ ಇಲಾಖೆ ಉಪಸ್ಥಿತರಿದ್ದರು.

Comments
Post a Comment