ಎ.ವಸಂತಕುಮಾರ್ ಅವರಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ. ಜಯ ಧ್ವಜ ನ್ಯೂಸ್ ,ರಾಯಚೂರು,ಡಿ.31- ನಗರದಲ್ಲಿ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ ಅವರು ವಿತರಿಸಿದರು.
ನಂತರ ಮಾತನಾಡಿದ ಅವರು ವಿಕಲಚೇತನರಿಗೆ ಸರಕಾರದಿಂದ ವಿಶೇಷ ಸೌಲಭ್ಯ ಕೊಡುವ ನಿಟ್ಟಿನಲ್ಲಿ ತ್ರಿಚಕ್ರ ವಾಹನಗಳನ್ನು ನೀಡಲಾಗುತ್ತಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ದಿನನಿತ್ಯದ ಜೀವನದಲ್ಲಿ ಬೇರೆಯವರ ಮೇಲೆ ಅವಲಂಬಿತರಾಗದೇ ಬಳಸಿಕೊಳ್ಳಲು ಸಲಹೆ ನೀಡಿದರು.
ಅಲ್ಲದೇ ಸರಕಾರ ವಿವಿಧ ಯೋಜನೆಗಳಡಿಯಲ್ಲಿ ವಿಕಲಚೇತನರಿಗೆ ಗ್ರಾಮ ಪಂಚಾಯತ್ , ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ, ವಿಕಲಚೇತನರ ಬಗ್ಗೆ ಸಮಾಜವು ಸೌಜನ್ಯದಿಂದ ವರ್ತಿಸಬೇಕು, ಅವರ ಕುರಿತು ವಿಶೇಷ ಕಾಳಜಿವಹಿಸಬೇಕಿದೆ ಎಂದರು.
ಸರಕಾರದಿಂದ ಸಿಗುವ ವಿವಿಧ ಯೋಜನೆಗಳನ್ನು ಸಹ ವಿಕಲಚೇತನರಿಗೆ ಒದಗಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಫಲಾನುಭವಿಗಳು ತಮಗೆ ಮಂಜೂರಾದ ತ್ರಿಚಕ್ರ ವಾಹನಗಳನ್ನು ಪಡೆದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಅಸ್ಲಂ ಪಾಶಾ, ಕೆಪಿಸಿಸಿ ರಾಜ್ಯ ವಕ್ತಾರ ಡಾ.ರಝಾಕ ಉಸ್ತಾದ, ಜಿಲ್ಲಾ ಕಾರ್ಯದರ್ಶಿ ಅಂಜಿನಕುಮಾರ, ಕೆ.ಇ.ಕುಮಾರ, ಕಾಂಗ್ರೆಸ್ ಮುಖಂಡರಾದ ರಮೇಶ ರೋಸ್ಲಿ, ಸತ್ಯನಾಥ, ಮೊಹಮ್ಮದ ಉಸ್ಮಾನ, ಸೈಯದ ಸುಲ್ತಾನ, ಖಾಜಾ ಮೊಯಿನುದ್ದೀನ (ಮೋನಾ), ದೀಪಕ ರೆಡ್ಡಿ, ಮೊಹಮ್ಮದ ರಫಿ, ಮುನಿಯಪ್ಪ, ನರಸಿಂಹಲು, ನಾಗರಾಜ ಹಾಗೂ ಇತರರು ಉಪಸ್ಥಿತರಿದ್ದರು.


Comments
Post a Comment