ಸತ್ಯನಾಥ ಅಗ್ರಹಾರ : ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರಿಂದ ಜ್ಞಾನಸತ್ರ ಉದ್ಘಾಟನೆ ಜಯ ಧ್ವಜ ನ್ಯೂಸ್ , ರಾಯಚೂರು, ಜ.28- ನಗರದ ಸತ್ಯನಾಥ ಭಜನಾ ಮಂಡಳಿಯ 30 ನೇ ವರ್ಷದ ಜ್ಞಾನಸತ್ರ ಕಾರ್ಯಕ್ರಮದ ಉದ್ಘಾಟನೆಯನ್ನು ಇಂದು ಪರಮಪೂಜ್ಯ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದಂಗಳವರು, ಅದಮಾರುಮಠ ಉಡುಪಿ ಇವರು ಜ್ಯೋತಿ ಪ್ರಜ್ವಲನ ಮಾಡುವ ಮೂಲಕ ಉದ್ಘಾಟಿಸಿದರು. ನಂತರ ಪಂ. ಶ್ರೀ ವಾದಿರಾಜಾಚಾರ್ಯ ಮಠದ್ ಧಾರವಾಡ ಇವರಿಂದ ಉಪನ್ಯಾಸ ನಡೆಯಿತು.
ಶ್ರೀ ಪಾದಂಗಳವರು ಆಶೀರ್ವಚನ ನೀಡಿದರು. ಕಾರ್ಯಕ್ರಮವು ಪಂಡಿತರ ವೇದಘೋಷ ಹಾಗೂ ಕು. ಅಚ್ಯುತ ಕುರ್ಡಿಕರ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಪಂ. ಶ್ರೀ ವಾದಿರಾಜಾಚಾರ್ಯ ಮಠದ್, ಪಂ.ಶ್ರೀಹರಿಆಚಾರ್ಯ, ಪಂ. ಶ್ರೀ ಮುಕುಂದಾಚಾರ್ಯ ಜೋಷಿ ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಾಣೇಶ ಮುತಾಲಿಕ ರವರು ಉಪಸ್ಥಿತರಿದ್ದರು. ಸತ್ಯವಾದ ಭಜನಾ ಮಂಡಳಿ ಸದಸ್ಯರು, ಬಡಾವಣೆ ನಾಗರೀಕರು, ಭಗವದ್ಭಕ್ತರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


Comments
Post a Comment