ಹಿರಿಯ ತ್ರಿಭಾಷಾ ಸಾಹಿತಿ ವಿ.ಎಸ್.ಕಾಂತನವರ ನಿಧನ

 ಜಯ ಧ್ವಜ ನ್ಯೂಸ್ ರಾಯಚೂರು,ಜ.31- ದಾಸರ ನಾಡು ಶರಣರ ಬೀಡು ರಾಯಚೂರಿನ ಹಿರಿಯ ಸಾಹಿತಿ ವಿ.ಎಸ್.ಕಾಂತನವರ ( 92 )  ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ತ್ರಿಭಾಷಾ ಸಾಹಿತಿಗಳಾಗಿದ್ದ ಅವರು  ಸಾಹಿತ್ಯ ಕ್ಷೇತ್ರದಲ್ಲಿ ಹತ್ತಾರು ಕೃತಿಗಳನ್ನು ರಚಿಸಿದ್ದರು, ಸಂಸ್ಕೃತ ಪಂಡಿತರೂ ಆಗಿದ್ದ ಕಾಂತನವರು ಸದಾ ಉತ್ಸಾಹದಿಂದ ಗಂಟೆಗಟ್ಟಲೆ ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅವರ ಅಗಲಿಕೆ ಸಾಹಿತ್ಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟವಾಗಿದೆ. ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಭಾನುವಾರ ನಡೆಯುತ್ತದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಇವರ ನಿಧನಕ್ಕೆ ಸಾಹಿತಿ , ಕವಿ ಪಲುಗುಲ ನಾಗರಾಜ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Comments

Popular posts from this blog