ರಾಯಚೂರು ಜಿಲ್ಲಾ ಉತ್ಸವ ಪ್ರಯುಕ್ತ ಫೆ.2 ಮತ್ತು 3 ರಂದು ಮಕ್ಕಳ ಹಬ್ಬ: ಜಾದೂ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ- ಕೃಷ್ಣ ಶಾವಂತಗೇರಿ ಜಯ ಧ್ವಜ ನ್ಯೂಸ್ , ರಾಯಚೂರು , ಜ.30- ರಾಯಚೂರು ಜಿಲ್ಲಾ ಉತ್ಸವ ಪ್ರಯುಕ್ತ ಫೆ.2 ಮತ್ತು 3 ರಂದು ಮಕ್ಕಳ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಕ್ಕಳ ಹಬ್ಬ ಸಮಿತಿಯ ಅಧ್ಯಕ್ಷ ಕೃಷ್ಣಾ ಶಾವಂತಗೇರಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.2 ರಂದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಮುಖವಾಡ ತಯಾರಿಕೆ, ಗೂಡು ದೀಪ, ಕೈಟ್, ಮಣ್ಣಿನ ಮೂರ್ತಿ ತಯಾರಿಕೆ ಕಾರ್ಯಗಾರ ನಡೆಯಲಿದ್ದು ನಂತರ ಖ್ಯಾತ ಜಾದೂಗಾರ ಕುದ್ರೋಳ್ಳಿ ಗಣೇಶ್ ರಿಂದ ವಿಸ್ಮಯ ಜಾದೂ ಪ್ರದರ್ಶನ ಆಯೋಜಿಸಲಾಗಿದೆ ಎಂದರು. ಮಜಾ ಟಾಕೀಸ್ ಖ್ಯಾತಿಯ ಅಶೋಕ್ ಪೊಳಲಿ ಯವರಿಂದ ಕೋಳಿ ನೃತ್ಯ, ವರ್ಚುವಲ್ ರಿಯಾಲಿಟಿ ಶೋ, ರೋಬೋಟಿಕ್ ಪ್ರಾಣಿಗಳ ಪ್ರದರ್ಶನ ನಡೆಯಲಿದೆ ಎಂದರು.
ಬೆಳಿಗ್ಗೆ ಮತ್ತು ಮಧ್ಯಾಹ್ನ ಎರೆಡು ಅವಧಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಖಾಸಗಿ ಶಾಲಾ ಶಿಕ್ಷಣ ಸಂಘಗಳಿಂದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಒಂದು ತಾಲೂಕಿನಿಂದ ಸುಮಾರು ಐದು ಬಸ್ ಗಳು ಮಕ್ಕಳ ಹಬ್ಬಕ್ಕೆ ವ್ಯವಸ್ಥೆ ಮಾಡಲಾಗಿದೆ ಏಳು, ಎಂಟು ಒಂಬತ್ತು ತರಗತಿ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದರು. ಸಾಯಂಕಾಲ ಮಾವಿನ ಕೆರೆ ದಡದಲ್ಲಿ ಕೆರೆ ಹಬ್ಬ, ಐಸ್ ಕ್ರೀಮ್ ಫೆಸ್ಟ್ ,ಕೈಟ್ ಫೆಸ್ಟ್, ಸಿಡಿಮದ್ದು ಪ್ರದರ್ಶನ, ಅಜಯ್ ವಾರಿಯರ್ಸ್ ತಂಡದಿಂದ ಸಂಗೀತ ಸಂಜೆ, ಟೆಲಿಸ್ಕೋಪ್ ಮುಖಾಂತರ ಆಕಾಶಕಾಯಿಗಳ ವೀಕ್ಷಣೆ ಮುಂತಾದ ಕಾರ್ಯಕ್ರಮ ನಡೆಯಲಿದ್ದು ಮಾವಿನ ಕೆರೆ ಬಳಿ ಶುಚಿತ್ವಕ್ಕೆ ಈಗಾಗಲೆ ಮಹಾನಗರ ಪಾಲಿಕೆ ಕ್ರಮ ವಹಿಸುತ್ತಿದೆ ಅಂದು ಈ ಮಾರ್ಗದಲ್ಲಿ ಪೊಲೀಸ್ ಇಲಾಖೆ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲಿದೆ ಎಂದರು. ಈ ಸಂದರ್ಭದಲ್ಲಿ ಕೇಶವರೆಡ್ಡಿ, ಚಂದ್ರಶೇಖರ್,ನಾಗರೆಡ್ಡಿ, ರಾಜಾ ಶ್ರೀನಿವಾಸ್,ಮಲ್ಲೇಶ್, ರವಿ ಮುಂತಾದವರು ಇದ್ದರು.


Comments
Post a Comment