ಆಕಾಶವಾಣಿ ಕೇಂದ್ರದಲ್ಲಿ ಗಣರಾಜ್ಯೋತ್ಸವ : ಸಂವಿಧಾನವೇ ದೇಶದ ಆತ್ಮ-  ವೆಂಕಟೇಶ ಬೇವಿನಬೆಂಚಿ


ಜಯ ಧ್ವಜ ನ್ಯೂಸ್ ,ರಾಯಚೂರು, ಜ.26- ಸಂವಿಧಾನವೇ ದೇಶದ ಆತ್ಮ,ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯದ ಆಶಯ ಸಂವಿಧಾನದ ಮೂಲತತ್ವ, ಅದರಂತೆ ಈ ದೇಶ ನಡೆಯಬೇಕು,ಕಭೇರಿಗಳ ಕಾಗದಗಳಲ್ಲಿ ಉಳಿಯಬಾರದು ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಹೇಳಿದರು. 


       ಅವರಿಂದು ಆಕಾಶವಾಣಿ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಸಂವಿಧಾನದ ಜಾರಿಯಾದ ದಿನವನ್ನು ಗಣರಾಜ್ಯೋತ್ಸವ ಹೆಸರಿನಲ್ಲಿ ನಾವು ದೇಶದಲ್ಲಿ ಆಚರಣೆ ಮಾಡುತ್ತೇವೆ.  ಸಂವಿಧಾನ ಜಾರಿಯ ನಂತರವೇ ಭಾರತದ ಎಲ್ಲಾ ಪ್ರಜೆಗಳು ತಮ್ಮ ಹಕ್ಕುಗಳನ್ನು ಪಡೆಯುವ ಅವಕಾಶ ಬಂದಿತು.   ದೇಶದ ಎಲ್ಲಾ ಪ್ರಜೆಗಳು ಸಮಾನರು ಎನ್ನುವ ಸಂವಿಧಾನದ ಕಾನೂನುಗಳು ದೇಶದ ನಾಗರಿಕರನ್ನು ಮೇಲೆತ್ತಲು ಅನೇಕ ಯೋಜನೆಗಳನ್ನು ತರಲಾಯಿತು. ಆ ಯೋಜನೆಗಳ ಮೂಲಕ ವಿಶೇಷವಾಗಿ ತಳ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಬದಲಾವಣೆಯನ್ನು ಕಾಣಲು ಸಾಧ್ಯವಾಯಿತು. ಆದರೂ  ಸಂವಿಧಾನವು ತಳಮಟ್ಟದಲ್ಲಿ ಜಾರಿಯಾಗಿಲ್ಲ ಎನ್ನುವ ಕೂಗು ದಿನನಿತ್ಯ ಕೇಳಿಬರುತ್ತಿದೆ.

ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂಕಲ್ಪದೊಂದಿಗೆ ನಾವೆಲ್ಲರೂ ಪ್ರಜ್ಞಾಪೂರ್ವಕವಾಗಿ  ಆಲೋಚನೆ ಮಾಡಬೇಕಾಗಿದೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ.ನಾವು ಉಳಿದರೆ ದೇಶ ಮತ್ತು ಸಂವಿಧಾನ ಉಳಿಯುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಅರವಿಂದಾಕ್ಷಣ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. 

ಈ ಧ್ವಜಾರೋಣ ಕಾರ್ಯಕ್ರಮದಲ್ಲಿ ಆಕಾಶವಾಣಿಯ ತಾಂತ್ರಿಕ ವಿಭಾಗದ ಇಂಜಿನಿಯರ್ ಅರಸು ಮತ್ತು ಆಂಜನೇಯ, ಸೋಮಶೇಖರ್, ಶರಣಬಸಪ್ಪ, ಉದ್ಘೋಷಕರಾದ ರಮಾಕುಲಕರ್ಣಿ ಶ್ರೀನಿವಾಸ್ ಕುಲಕರ್ಣಿ ,ಶ್ರೀದೇವಿ, ವಿಜಯಶ್ರೀ, ನಾಗರತ್ನ, ನರಸಿಂಹಲು, ನರೇಂದ್ರ ನಾಗರಾಜ ಉಮೇಶ್ ಸೇರಿದಂತೆ ಇತರ ಸಿಬ್ಬಂದಿ ಇದ್ದರು.

Comments

Popular posts from this blog