ಫೆ.1 ರಂದು ಸಂಭ್ರಮದ  ವಿರಾಟ ಹಿಂದು ಸಮ್ಮೇಳನ 


ಜಯ ಧ್ವಜ ನ್ಯೂಸ್ ,ರಾಯಚೂರು, ಜ.30- ರಾಷ್ಟ್ರ , ಧರ್ಮ , ಸಂಸ್ಕೃತಿ , ಸಂಪ್ರದಾಯಗಳ ರಕ್ಷಣೆಗಾಗಿ ವಿರಾಟ ಹಿಂದೂ ಸಮ್ಮೇಳನವನ್ನು ಫೆ. 1, ಭಾನುವಾರದಂದು ಸಂಜೆ ನಗರದ ಎಲ್.ವಿ‌ಡಿ ಕಾಲೇಜು ಎದುರುಗಡೆಯ ಯಾದವ  ಸಂಘದ ಕೃಷ್ಣ ದೇವಸ್ಥಾನದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.


ಅಂದು ಭವ್ಯ ಶೋಭಾಯಾತ್ರೆಯು ಸಂಜೆ 5 ಗಂಟೆಗೆ ಯಾದವ್ ಸಂಘ ಮೈದಾನದಿಂದ ಪ್ರಾರಂಭವಾಗಿ  ಎಲ್.ವಿ.ಡಿ ಕಾಲೇಜು ರಸ್ತೆ, ತಿಮ್ಮಾಪುರ್ ಪೇಟ್ ರಸ್ತೆ, ಬಾಲಮಾರೆಮ್ಮ ದೇವಸ್ಥಾನದ ಮುಖಾಂತರ ಕರ್ನಾಟಕ ಸಂಘ, ವಾಸವಿ ವೃತ್ತ, ಕಣ್ಣ ವೃತ್ತ, ವಾಸವಿ ನಗರ ಬಸ್ ನಿಲ್ದಾಣದ ಮೂಲಕ ಜೋಡು ವೀರಾಂಜನೇಯ ದೇವಸ್ಥಾನ ಸಾವಿತ್ರಿ ಕಾಲೋನಿ, ಮಾಣಿಕ್ ಪ್ರಭು ದೇವಸ್ಥಾನದ ರಸ್ತೆ ಮೂಲಕ ಹಾದು ಪುನಃ ಶ್ರೀ ಕೃಷ್ಣ ದೇವಸ್ಥಾನ ಯಾದವ ಸಮಾಜದ ಮೈದಾನ ಸೇರುವುದು.


ನಂತರ 6.30 ನಿಮಿಷಕ್ಕೆ, ಯಾದವ ಸಮಾಜ ಶ್ರೀ ಕೃಷ್ಣ ದೇವಸ್ಥಾನದ ಮೈದಾನದಲ್ಲಿ ಬಹಿರಂಗ ಸಮಾವೇಶ ಜರುಗಲಿದ್ದು ದಿವ್ಯ ಸಾನಿಧ್ಯವನ್ನು  ಷ.ಬ್ರ. ಶ್ರೀ  ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರಪೇಟೆ ಹಿರೇಮಠ ಇವರು ವಹಿಸಲಿದ್ದು ,  ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಹಾಗೂ  ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ, ಬಳ್ಳಾರಿ ವಿಭಾಗದ ಸಹ ಕಾರ್ಯವಾಹರಾದ ಡಾ. ಪಾಂಡುರಂಗ ಆಪ್ಟೆ ಇವರು ಭಾಗವಹಿಸಲಿದ್ದು, ಸಮಸ್ತ ಹಿಂದೂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು   ಗಾಜಗಾರಪೇಟೆ ಉಪನಗರದ ಹಿಂದು ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ್ ರವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

Comments

Popular posts from this blog