ರಿಮ್ಸ್ ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಡಾ.ರಝಾಕ ಉಸ್ತಾದ್ ಮನವಿ

ಜಯ ಧ್ವಜ ನ್ಯೂಸ್, ರಾಯಚೂರು, ಜ.26-

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಯಲ್ಲಿ ಲಬ್ಯವಿರುವ ವಿವಿಧ ವೃಂದದ ಹುದ್ದೆಗಳಿಗೆ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಲು ಅವಕಾಶ ನೀಡುವಲ್ಲಿ ಸಂಸ್ಥೆಯ ಡೀನ್ ಡಾ.ರಮೇಶ ಬಿ.ಎಚ್. ರವರು ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳಿಗೆ ತಾರತಮ್ಯ ಮಾಡುತ್ತಿರುವದು ಕಂಡುಬಂದಿದ್ದು ಅದನ್ನು ನಿವಾರಿಸುವಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್  ಉಸ್ತಾದ್ ರವರು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ  ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ರವರಿಗೆ ಮನವಿ ಮಾಡಿದರು.            ವಿಶೇಷವಾಗಿ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸುವಾಗ ಓoಟಿ-ಊಏ ಉದ್ಯೋಗಿಗಳಿಗೆ ಅವಕಾಶ ನೀಡುತ್ತ, ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಅವಕಾಶವಂಚಿತರಾಗಿಸುತ್ತಿದ್ದಾರೆ, ಇದು ಸಂಸ್ಥೆಯ ಡೀನ್ ಡಾ.ರಮೇಶ ಬಿ.ಎಚ್. ರವರು ಕಲ್ಯಾಣ ಕರ್ನಾಟಕ ಹೊರ ಪ್ರದೇಶದವರಾಗಿರುವದರಿಂದ  ಆ ಭಾಗದವರಿಗೆ ಹೆಚ್ಚು ಅವಕಾಶ ನೀಡುತ್ತಿದ್ದಾರೆ ಎನ್ನುವದು ಸ್ಪಷ್ಟವಾಗಿದೆ ಎಂದು ದೂರಿದ್ದಾರೆ. ಕಳೆದ ವರ್ಷ ರಿಮ್ಸ್ ಸಂಸ್ಥೆಯಡಿಯಲ್ಲಿ ನಡೆಸಲಾಗುತ್ತಿರುವ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಪ್ರಾಚಾರ್ಯರನ್ನು ೩೭೧ಜೆ ನಿಯಮದಂತೆ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ವಹಿಸುವಂತೆ ತಮ್ಮನ್ನು ಕೋರಲಾಗಿತ್ತು, ಅದರಂತೆ ತಾವು ಡೀನ್ ಡಾ.ರಮೇಶ ಬಿ.ಎಚ್. ರವರಿಗೆ ಸೂಚಿಸಿದಾಗಲೂ ಇಲ್ಲಿಯವರೆಗೆ ಕ್ರಮವಹಿಸಿರುವದಿಲ್ಲ, ವಿದ್ಯಾರ್ಹತೆಯಲ್ಲಿ ಕಡಿಮೆ ಅರ್ಹತೆ, ಕಡಿಮೆ ಅನುಭವ ಹೊಂದಿರುವ, ಇತ್ತೀಚಿಗೆ ಎಂ.ಎಸ್ಸಿ. ನರ್ಸಿಂಗ್ ಪೂರೈಸಿದ ಓoಟಿ-ಊಏ ಪ್ರದೇಶದ ಉದ್ಯೋಗಿಗೆ ನರ್ಸಿಂಗ್ ಕಾಲೇಜು ಪ್ರಾಚಾರ್ಯರ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿರುವದು ೩೭೧ಜೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಾಕಷ್ಟು ಜನ ಊಏ ಭಾಗದವರು ವಿದ್ಯಾರ್ಹತೆ, ಅನುಭವದಲ್ಲಿ ಹಿರಿಯರಿದ್ದರೂ ಅವಕಾಶವಂಚಿತಗೊಳಿಸರುತ್ತಾರೆ. ಆದ್ದರಿಂದ ಈ ಕೆಳಗಿನ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕೆಂದು ಈ ಮೂಲಕ ಕೋರಿದರು.

ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕ್ಲಿನಿಕಲ್ ನರ್ಸಿಂಗ್ ವಿಭಾಗದಿಂದ ನಿಯೋಜನೆ ಮಾಡುವಾಗ ೩೭೧ಜೆ ನಿಯಮಗಳನ್ವಯ [ಶೇ ೨೫ ರಷ್ಟು (ಊಏ + ಓoಟಿ-ಊಏ) ಇಬ್ಬರಿಗೂ ಮೆರಿಟ್ ಆಧಾರದಲ್ಲಿ ಹಾಗೂ ಶೇ ೭೫ ರಷ್ಟು ಕಲ್ಯಾಣ ಕರ್ನಾಟಕದವರಿಗೆ ಮಾತ್ರ] ಹಾಗೂ ಅರ್ಹತೆ, ಅನುಭವ, ಜೇಷ್ಠತೆಯ ಆಧಾರದಲ್ಲಿ ನಿಯೋಜನೆ ಮಾಡುವದು.

ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಪ್ರಾಚಾರ್ಯರನ್ನಾಗಿ ನೇಮಿಸುವದು. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವದರಿಂದ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರನ್ನೇ ಸಂಸ್ಥೆಯ ಡೀನ್ ಹುದ್ದೆಗೆ ನೇಮಿಸುವದು.

ಸಂಸ್ಥೆಯಲ್ಲಿ ಲಭ್ಯವಿರುವ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜನೆ ಮಾಡುವಾಗ ೩೭೧ಜೆ ನಿಯಮದಂತೆ ಮೀಸಲಾತಿ ನಿಗದಿಗೊಳಿಸಿ ನಿಯೋಜನೆ ಮಾಡಬೇಕೆಂದು ಕೋರಿದರು.



Comments

Popular posts from this blog