ಅಂಜುಮಾನ ಸಂಸ್ಥೆಯ ಕಾರ್ಯ ಅರ್ಥಪೂರ್ಣ - ಬಾದರ್ಲಿ

ಜಯ ಧ್ವಜ ನ್ಯೂಸ್ ರಾಯಚೂರು, ಮೇ.12- ಅಲ್ಪಸಂಖ್ಯಾತರು  ಶೈಕ್ಷಣಿಕವಾಗಿ ಸಾಕಷ್ಟು  ಮುಂದುವರೆಯುತ್ತಿರುವದು ಸಂತೋಷದ ವಿಷಯವಾಗಿದೆ ಅಲ್ಪ ಸಂಖ್ಯಾತರು ಹೊರ ರಾಷ್ಟ್ರಗಳಲ್ಲಿನ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವ್ಯಾಪಾರದ ಪ್ರಗತಿಯನ್ನ ಅವಲೋಕಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. 

 ಅವರು ಸೋಮವಾರ ಸಂಜೆ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂಜುಮನ್ ಎ - ರಾಯಚೂರು ಸಂಸ್ಥೆ ಹಮ್ಮಿಕೊಂಡಿದ್ದ ಪ್ರತಿಭಾನ್ವಿತ‌ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನ ಉದ್ಘಾಟಿಸಿ  ಮಾತನಾಡಿದರು. ವೈವಿದ್ಯತೆಯ ಜೊತೆಗೆ ಭಾವೈಕ್ಯತೆಯಿಂದ ಕೂಡಿದ ದೇಶ ನಮ್ಮದಾಗಿದೆ ಆದರೆ ಇತ್ತೀಚಿಗೆ ಕೆಲವರು ಧಾರ್ಮಿಕ ಭಾವನೆಗಳನ್ನ ಕೆರಳಿಸುವ‌ ಕೆಲಸ ಮಾಡುತ್ತಿದ್ದು, ಇದು ಸರಿಯಲ್ಲವೆಂದರು. 


ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ನೇತೃತ್ವದ ನಮ್ಮ ಸರ್ಕಾರ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಮೊದಲನೇ ವರ್ಷದಲ್ಲಿ ನಾಲ್ಕು ಸಾವಿರ ಕೋಟಿ, ಎರಡನೇ ವರ್ಷದಲ್ಲಿ ಐದು ಸಾವಿರ ಕೋಟಿ ಮತ್ತು ಪ್ರಸಕ್ತ ಸಾಲಿನಲ್ಲಿ ಆರುವರೆ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ. ಜೊತೆಗೆ 150 ಮೌಲಾನಾ ಅಜಾದ ಆಂಗ್ಲ ಮಾದ್ಯಮ ಶಾಲೆಗಳಿಗೆ ಮಂಜೂರಾತಿ ನೀಡಿದೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ ಹಾಗೂ ನೂರಾರು ವಸತಿ‌ ನಿಲಯಗಳನ್ನು ಸರ್ಕಾರ ಮಂಜೂರು ಮಾಡಿದೆ. ಸರ್ಕಾರ ಅಲ್ಪಸಂಖ್ಯಾತರ ಪ್ರಗತಿಗಾಗಿ ಇಷ್ಟೆಲ್ಲಾ ಸೌಕರ್ಯ ಒದಗಿಸುತ್ತಿದ್ದರೂ, ತೃಪ್ತಿಕರವಾದ ಅಭಿವೃದ್ಧಿ ಆಗಿಲ್ಲ. ಈ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ ಎಂದು‌ ತಿಳಿಸಿದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವಿರತ ಶ್ರಮದ ಫಲವಾಗಿ ಸಂವಿಧಾನದ 371 ಜೆ ಕಲಂ ತಿದ್ದುಪಡಿಯಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿಂದಿನ ಸರ್ಕಾರದಲ್ಲಿ ಸಮಗ್ರ ಕಾನೂನನ್ನ ರೂಪಿಸಿಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಮತ್ತು ಔದ್ಯೋಗಿಕ ಬೆಳವಣಿಗೆಗೆ ಇಬ್ಬರು ನಾಯಕರು ಕಾರಣರಾಗಿದ್ದಾರೆ ಎಂದು‌ ಅಭಿಪ್ರಾಯಪಟ್ಟರು.ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇದಕ್ಕೆ ಕಾರಣ ಹುಡುಕದೆ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನ ಸದುಪಯೋಗ ಪಡಿಸಿಕೊಂಡು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು. ಭಾರತ ಪವಿತ್ರವಾದ ದೇಶವಾಗಿದೆ. ಧರ್ಮ, ಜಾತಿಗಳ ಭೇದ ಮಾಡದೆ, ಎಲ್ಲರೂ ಸಹೋದರ ಮನೋಭಾವನೆಯಿಂದ ಮುನ್ನಡೆಯಬೇಕಿದೆ. ದೇಶದಲ್ಲಿ ಜನಿಸಿದ ನಾವೆಲ್ಲರೂ ಪಾಕೃತಿಕವಾಗಿ ದೊರೆತ ಸೌಲಭ್ಯಕ್ಕೆ ಪ್ರತಿಯಾಗಿ ಋಣಿಯಾಗಿರಬೇಕು. ಅಲ್ಪಸಂಖ್ಯಾತ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಉನ್ನತ ಶಿಕ್ಷಣ ದೊರಕಿಸಿ ಕೊಡುವುದರ ಜೊತೆಗೆ ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ನಾವೆಲ್ಲರೂ ಒಂದೇ ಆದರೆ ದೇವರನ್ನ ಆರಾಧಿಸುವ ವಿಧಾನಗಳು ಬೇರೆ ಬೇರೆಯಾಗಿವೆ ಅಷ್ಟೇ ಎಂದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಧ್ಯಾಪಕ ಡಾ.ಸೈಯದ ಮಿನ್ಹಾಜುಲ್ ಹಸನ್ ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ ವಿಧೇಯರಾಗಿರಬೇಕು, ಶಿಕ್ಷಕರ ಮಾತನ್ನು ಕೇಳಬೇಕು, ಉನ್ನತ ಶಿಕ್ಷಣ ಪಡೆಯುವಲ್ಲಿ ಯಾವುದೇ ಕಾರಣಕ್ಕೂ ಹಿಂಜರಿ ಯಬಾರದು ಎಂದು ಹೇಳಿದರು. ಉನ್ನತ ಶಿಕ್ಷಣಕ್ಕೆ ಬೇರೆ ಊರಿಗೆ ಹೋಗುವಾಗ  ಕಿಳರಿಮೆ ಇಟ್ಟು ಕೊಳ್ಳಬಾರದು, ನೀವು ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವ ಭಾವನೆ ಇಟ್ಟುಕೊಂಡು ಅಧ್ಯಯನ ಮಾಡಬೇಕು.


 ಅಂಜುಮಾನ -ಎ - ರಾಯಚೂರು ಸಂಸ್ಥೆಯ ಸಂಚಾಲಕ ಹ್ಯಾರಿಸ್ ಸಿದ್ದಿಖಿ‌ ಪ್ರಾಸ್ತವಿಕವಾಗಿ ಮಾತನಾಡಿದರು. ಹತ್ತನೇ ತರಗತಿಯಲ್ಲಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ, ಗೌರವಿಸಲಾಯಿತು.


ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಅಂಜುಮನ್‌ ಸಂಸ್ಥೆ ಮುಖಂಡರಾದ ಡಾ.ರಝಾಕ್ ಉಸ್ತಾದ್, ಅಬ್ದುಲ್ ಕರೀಂ, ಕೆ.ಅಸ್ಲಾಂ ಪಾಷ, ಮೌಲಾನಾ ಸೈಯದ ಅಬ್ದುಲ್ ಲತೀಫ ಲೌಬಲಿ ಸಾಹೇಬ್, ಸೈಯದ ತಾರೀಖ ಹಸನ್ ರಿಜ್ವಿ ವಕೀಲರು, ಸೈಯದ ಅಮೀನುಲ್ ಹಸನ್, ಶೇಖ ಮಹಿಬೂಬ, ಸೈಯದ ಜುಬೇರ ಮೋಹಿಯುದ್ದೀನ, ಡಾ.ಬಂದೇನವಾಜ್, ರಹಮತ್ ಬೇಗ್  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog