ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಿ- ಡಾ.ರಝಾಕ್ ಉಸ್ತಾದ್        ಜಯ ಧ್ವಜ ನ್ಯೂಸ್ ,  ರಾಯಚೂರು,ಮೇ.13-              ದೇಶದಲ್ಲಿ ಮೇ 3 ರಂದು ನಡೆದ ವೈದ್ಯಕೀಯ ನೀಟ್ ಪರೀಕ್ಷೆ ಕೇಂದ್ರ ಸರಕಾರ ಸಮರ್ಥವಾಗಿ ನಡೆಸಲು ವಿಫಲವಾಗಿ ರದ್ದು ಪಡಿಸಿರುವದು ಪರೀಕ್ಷೆ ಬರೆದ 23 ಲಕ್ಷ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವಾಗಿದೆ ಮತ್ತು ಇದೊಂದು ಕೇಂದ್ರ ಸರಕಾರದ ಬಹು ದೊಡ್ಡ ಹಗರಣವಾಗಿದೆ, ಕಳೆದ ಐದಾರು ವರ್ಷಗಳಲ್ಲಿ ಮೂರು ಸಲ ನೀಟ್ ಪರೀಕ್ಷೆ ರದ್ದಾಗಿದೆ, ರಾಜಸ್ಥಾನ ಮತ್ತು ಹರ್ಯಾಣ ರಾಜ್ಯದ ಕೋಚಿಂಗ್ ಸೆಂಟರ್ ಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿವೆ ಎಂದು ಹೇಳಲಾಗುತ್ತಿದೆ, ಇದಕ್ಕೆ ಕೇಂದ್ರ ಸರಕಾರದ ಜವಾಬ್ದಾರಿ ಇದೆ ಇದರ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯಕೀಯ ನೀಟ್ ಪರೀಕ್ಷೆ ಬರೆಯಲು ಸತತವಾಗಿ ಎರಡು ಮೂರು ವರ್ಷಗಳಿಂದ ತಯಾರಿ ನಡೆಸುತ್ತಲೇ ಇರುತ್ತಾರೆ, ಇದೊಂದು ರೀತಿ ಯುಪಿಎಸ್ಸಿ ಪರೀಕ್ಷೆಯ ತಯಾರಿ ತರಹ ಆಗಿದೆ, ಇಂತಹ ಪರೀಕ್ಷೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ನಡೆಸಬೇಕಿತ್ತು, ಆದರೆ ಕಳೆದ ನಾಲ್ಕೈದು ವರ್ಷಗಳಿಂದ ನೀಟ್ ಪರಿಕ್ಷೆಯಲ್ಲಿ  ಒಂದಲ್ಲ ಒಂದು ಗೊಂದಲಗಳು, ಅಕ್ರಮಗಳು, ಅವಾಂತರಗಳು ನಡೆಯುತ್ತಲೇ ಇವೆ, ಪರಿಕ್ಷೆಯ ತಯಾರಿಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಹ ದೇಶದ ಮುಂದಿವೆ, ಪ್ರತಿ ವರ್ಷ ನಡೆಯುತ್ತಿರುವ ಪ್ರಮಾದಗಳನ್ನು ಸರಿಪಡಿಸಲು ಕೇಂದ್ರ ಸರಕಾರ ವಿಫಲವಾಗಿದೆ, ಶ್ರೀಮಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಬಡ ಪ್ರಿತಭಾವಂತ ವಿದ್ಯಾರ್ಥಿಗಳ ಬಾಳಿನ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ. 

ದೇಶದಲ್ಲಿ ನೀಟ್ ಪರೀಕ್ಷೆ ಪ್ರಾರಂಭವಾದಾಗಿನಿಂದ ಕೋಚಿಂಗ್ ಸೇಂಟರ್ ಗಳ ಹಾವಳಿ ಹೆಚ್ಚಾಗಿ, ಪರೀಕ್ಷೆಯನ್ನೇ ಖರೀದಿ ಮಾಡುವ ಹಂತಕ್ಕೆ ಬಂದಿರುವದು ದುರಾದೃಷ್ಟಕರ ಮತ್ತು ವೈದ್ಯಕೀಯ ಸೀಟುಗಳು ಬಡವರ ಮಕ್ಕಳ ಪಾಲಿಗೆ ಶಾಪವಾಗುತ್ತಲಿದೆ. ಪರೀಕ್ಷೆಗೆ ತಯಾರಿ ನಡೆಸಿದ 23 ಲಕ್ಷ ವಿದ್ಯಾರ್ಥಿಗಳು ಮೇ 3ರಂದು ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟಿದ್ದರು, ಈಗ ಪತ್ರಿಕೆ ಸೋರಿಕೆಯಾಗಿದೆಯೆಂದು ಪರೀಕ್ಷೆಯನ್ನೇ ರದ್ದುಪಡಿಸಿರುವದು ವಿದ್ಯಾರ್ಥಿಗಳಿಗೆ ಗರಬಡಿದಂತಾಗಿದೆ, ದೂರದ ಪರೀಕ್ಷಾ ಕೇಂದ್ರಗಳಿಗೆ ಮತ್ತೆ ಮತ್ತೆ ಹೋಗಲು ವಿದ್ಯಾರ್ಥಿಗಳು ಅನಗತ್ಯ ಅರ್ಥಿಕ ವೆಚ್ಚ ಭರಿಸುವಂತಾಗಿದೆ, ಕೇಂದ್ರ ಸರಕಾರ ನಡೆಸುತ್ತಿರುವ ನೀಟ್ ಪರೀಕ್ಷೆ ಮೇಲೆ ದೇಶದ ಜನರಿಗೆ ನಂಬಿಕೆ ಇಲ್ಲದಂತಾಗಿದೆ, ಪರೀಕ್ಷಾ ವ್ಯವಸ್ಥೆಯು ಪ್ರತಿ ವರ್ಷ ಹಳ್ಳ ಹಿಡಿಯುತ್ತಿರುವದು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ.

ಕೇಂದ್ರ ಸರಕಾರದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್ ಪರೀಕ್ಷೆಯ 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸುಪ್ರೀಂ ಕೋರ್ಟ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು, ತಪ್ಪಿತಸ್ಥ ಅಧಿಕಾರಿಗಳ ಮೇಲೆ, ಕೋಚಿಂಗ್ ಸೆಂಟರ್ ಗಳು ಭಾಗವಹಿಸಿದ್ದಲ್ಲಿ ಅವರಿಗೆ ಗರಿಷ್ಠ ಶಿಕ್ಷೆಗೆ ಒಳಪಡಿಸಬೇಕು ಹಾಗೂ ವಿಶೇಷವಾಗಿ ಯಾವ ವಿದ್ಯಾರ್ಥಿಗಳು ಈ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗವಹಿಸಿದ್ದಾರೆ ಅಥವಾ ಫಲಾನುಭವಿಗಳಾಗಿದ್ದಾರೆ ಅಂತಹವರ ಪಾಲಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ಮಾದ್ಯಮ ವಿಭಾಗ  ರಾಜ್ಯ ವಕ್ತಾರಾದ ಡಾ.ರಝಾಕ ಉಸ್ತಾದ  ಆಗ್ರಹಿಸಿದ್ದಾರೆ.






Comments

Popular posts from this blog