ಮಹಾನಗರ ಪಾಲಿಕೆ ಕರ ಸಂಗ್ರಹಕ್ಕೆ ಆಸಕ್ತಿ: ಕಸ ಸಂಗ್ರಹಕ್ಕೆ ನಿರಾಸಕ್ತಿ; ವಾರ್ಡ್ ನಂ. 17ರಲ್ಲಿ ಕಸ ವಿಲೇವಾರಿ ಕಡೆಗಣನೆ. ಜಯಧ್ವಜ ನ್ಯೂಸ್ , ರಾಯಚೂರು,ಮೇ.9- ಮಹಾನಗರ ಪಾಲಿಕೆ ಕರ ಸಂಗ್ರಹಕ್ಕೆ ತೋರಿದ ಆಸಕ್ತಿ ಕಸ ಸಂಗ್ರಹಕ್ಕೆ ತೋರುತ್ತಿಲ್ಲ ವೆಂಬುದಕ್ಕೆ ಸ್ಪಷ್ಟ ನಿದರ್ಶನ ಕಾಣುತ್ತಿದೆ. ಆಸ್ತಿ ಕರ ಸಂಗ್ರಹ ವೇಳೆ ಪ್ರತಿ ಮನೆಗಳಿಂದ ಕಸ ವಿಲೇವಾರಿ ಸೆಸ್ ಪಡೆಯುವ ಮಹಾನಗರ ಪಾಲಿಕೆ ಕಸ ಸಂಗ್ರಹ ಕಡೆಗಣನೆ ಮಾಡಿದ್ದು ವಿಪರ್ಯಾಸದ ಸಂಗತಿಯಾಗಿದೆ.
ನಗರಸಭೆ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ಅದರ ಕಾರ್ಯವೈಖರಿಯಲ್ಲಿ ಮಹತ್ತರ ಬದಲಾವಣೆ ಕಾಣದಿರುವುದಕ್ಕೆ ಕಸ ಸಂಗ್ರಹ ಒಂದು ಚಿಕ್ಕ ಉದಾಹರಣೆಯಾಗಿದೆ. ಮಹಾನಗರ ಪಾಲಿಕೆ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿದ್ದ ರಿಂದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಹೆಗಲ ಮೇಲೆ ಮಹಾನಗರ ಪಾಲಿಕೆಯ ಕಾರ್ಯನಿರ್ವಹಣೆ ಜವಾಬ್ದಾರಿಯಿದೆ ಅದನ್ನು ಸಮರ್ಥ ಮತ್ತು ಸಮರ್ಪಕವಾಗಿ ನಿರ್ವಹಿಸುವ ಇಚ್ಚಾಶಕ್ತಿ ತೋರಬೇಕೆನ್ನುವುದು ನಾಗರೀಕರ ಒತ್ತಾಯವಾಗಿದೆ.


Comments
Post a Comment