ಪತ್ರಿಕಾ ಭವನದಲ್ಲಿ ರಿಪೋರ್ಟ್ ರ್ಸ್ ಗಿಲ್ಡ್ ನಿಂದ ಪ್ರತಿಭಾ ಪುರಸ್ಕಾರ,  ಐದು ಸಾವಿರ ರೂ. ನಗದು ಬಹುಮಾನ ವಿತರಣೆ 


ಜಯ ಧ್ವಜ ನ್ಯೂಸ್ , ರಾಯಚೂರು,ಮೇ.22-

 ಪತ್ರಕರ್ತರ ಮಕ್ಕಳಿಗೆ ವಿದ್ಯೆಗೆ ಪ್ರೋತ್ಸಾಹ ನೀಡಲು ಪತ್ರಕರ್ತರ ಸಂಘಗಳು ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ರಾಯಚೂರು ಪ್ರಭಾ ಪತ್ರಿಕೆ ಸಂಪಾದಕರಾದ ಸುಶೀಲೇಂದ್ರ ಸೋದೆಗಾರ ಸಲಹೆ ನೀಡಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಮಕ್ಕಳಿಗಾಗಿ  ಎಸ್ ಎಸ್ ಎಲ್ ಸಿ ಪಿಯುಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರ ಮಕ್ಕಳಿಗಾಗಿ ಉತ್ತಮ ಕೆಲಸ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಮಧ್ಯಮ ವರ್ಗ ದಿಂದ ಅನೇಕ ಪತ್ರಕರ್ತರು ಬಂದಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುಲ್ಕ ಕಟ್ಟುವಷ್ಟು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. 

ಎಲ್ಲರೂ‌ ಸೇರಿ  ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅಗತ್ಯ ನೆರವು ಸಿಗುವಂತೆ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು.. ಪತ್ರಕರ್ತರ ಮಕ್ಕಳಿಗೆ ನೆರವು ಕೊಡಿಸಲು ಸಲಹೆ ಮಾಡಿದರು. ನಗದು ಬಹುಮಾನ 5ಸಾವಿರ ರೂ ನೀಡುತ್ತಿರುವುದಕ್ಕೆ ಶ್ಲಾಘಿಸಿದರು.


ರಿಪೋರ್ಟರ್ಸ ಗಿಲ್ಡ್ ಸದಸ್ಯರಾದ ಕೆ.ಸತ್ಯ ನಾರಾಯಣ ಮಾತನಾಡಿ,  ಸಮಾಜದಲ್ಲಿ ಅಂಕುಡೊಂಕುಗಳಿಗೆ ಪರಿಹಾರ ಹುಡುಕುವ ಜೊತೆಗೆ ಕುಟುಂಬ ನಿರ್ವಹಣೆ ಮಾಡಲು ಎಲ್ಲರೂ ಶ್ರಮ ಪಡುತ್ತಾರೆ ಗಿಲ್ಡ್ ನ ಅನೇಕ ಕಾರ್ಯಕ್ರಮದ‌ ಮಧ್ಯೆ ಮೊದಲ ಕಾರ್ಯಕ್ರಮ ಇದಾಗಿದೆ. ಮಕ್ಕಳಿಗೆ  ಸಿಗುವ ಗೌರವ  ಖುಷಿ ಇಮ್ಮಡಿಯಾಗಿದೆ.


ಮಕ್ಕಳ ಕುಟುಂಬಕ್ಕೆ ಹುದ್ದೆ ಬಗ್ಗೆ ಮಾಹಿತಿ ನೀಡಬೇಕು. ‌ಸಮಾಜದಲ್ಲಿ  ನಮಗೆ ಸಿಗುವ ಗೌರವದ ಜೊತೆಗೆ ಅವರ ಮಕ್ಕಳಿಗೆ ಇನ್ನಷ್ಟು ಪೂರಕ ಕಾರ್ಯಕ್ರಮ ಮಾಡಲಿ ಎಂದು  ಸಲಹೆ ನೀಡಿದರು.

ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ ಮಾತನಾಡಿ, ಜಿಲ್ಲೆಯಲ್ಲಿ ಯಾವ ಭಾಗದಲ್ಲೂ ಇಲ್ಲದ ಪತ್ರಕರ್ತರ ಮಕ್ಕಳಿಗೆ ಸನ್ಮಾನಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯವಾಗಿದೆ.


ಕಳೆದು ಎರಡು ವರ್ಷದಿಂದ ನವೀಕರಣ ಕಾಮಗಾರಿ ಜೊತೆಗ 25 ವರ್ಷ ಆಗಿರುವು ದರಿಂದ ಕ್ಯಾಂಟಿನ್, ವಿಮೆ, ಮೃತ ಕುಟುಂಬಕ್ಕೂ‌ ನೆರವು ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಪಾದಕರ ಸಂಘದಿಂದ ಪತ್ರಕರ್ತರ ಮಕ್ಕಳಲ್ಲಿ ಅತೀ‌ ಹೆಚ್ಚು ಅಂಕ ಪಡೆದ ಒಬ್ಬ ಟಾಪರ್ ಗೂ 10 ಸಾವಿರ ರೂ. ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.


ಗಿಲ್ಡ್ ಅಧ್ಯಕ್ಷರಾದ ವಿಜಯಕುಮಾರ ಜಾಗಟಗಲ್ ಮಾತನಾಡಿ, ಮಕ್ಕಳನ್ನು ಬೌದ್ಧಿಕವಾಗಿ ಬೆಳೆಸಲು ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಆಯೋಜಿಸ ಲಾಗುತ್ತದೆಂದರು.

ಪತ್ರಕರ್ತರ ಕ್ಷೇಮಾಭಿವೃದ್ಧಿ ಜೊತೆಗೆ ಇತರ ಕಾರ್ಯಕ್ರಮ ಗಳನ್ನು  ಹಿರಿಯರ ಮಾರ್ಗದ ರ್ಶನದಲ್ಲಿ ಮಾಡುತ್ತೇವೆ.  ಸಾಧನೆಯಲ್ಲಿ ಮಕ್ಕಳ ಗುರುತಿಸಲು ಪಾಲಕರು ಪ್ರಯತ್ನ ಮಾಡಬೇಕು ಅಲ್ಲದೆ, ಕೌಶಲಗಳನ್ನು ಬೆಳೆಸಲು ಪ್ರಯತ್ನ ಮಾಡಲು ಹೇಳಿದರು.

ಉತ್ತಮ ವಿಚಾರ ಯೋಜನೆ ನಮ್ಮ‌ ಮುಂದೆ ತಂದರೆ ಜಾರಿ ಮಾಡುತ್ತೇವೆ. ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಎಲ್ಲ ಪತ್ರಕರ್ತರ ಸಹಕಾರ  ನೀಡುವಂತೆ ಕೋರಿದರು.

ಇದೆ ವೇಳೆ ಪತ್ರಕರ್ತ ಕಾಳಿಕಾದೇವಿ ಶಿವಪ್ಪ ಮಡಿವಾಳರ್ ಹಾಗೂ ಸ್ವಪ್ನಾ ಸುರೇಶಸ್ವಾಮಿ ಅವರಿಗೆ 5 ಸಾವಿರ ನಗದು ಪ್ರೋತ್ಸಾಹ ಧನ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪತ್ರಕರ್ತರಿಗೆ, ಛಾಯಾಗ್ರಹಕರಿಗೆ  ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ವೇದಿಕೆಯಲ್ಲಿ ಪ್ರಜಾ ಪ್ರಸಿದ್ದ ಪತ್ರಿಕೆ ಸಂಪಾದಕ ಎಚ್.ಶಿವರಾಜ್ ಇದ್ದರು.ಗಿಲ್ಡ್  ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಫ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ರಾಚಯ್ಯಸ್ವಾಮಿ ಸ್ವಾಗತಿಸಿದರೆ, ಮಲ್ಲನಗೌಡ ಪಾಟೀಲ ನಿರೂಪಿಸಿದರು, ಜಂಟಿ‌ ಕಾರ್ಯದರ್ಶಿ ಶ್ರೀಕಾಂತ್ ಸಾವೂರು ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ಪತ್ರಕರ್ತರು ಇದ್ದರು.

Comments

Popular posts from this blog