ನರಸಿಂಹಲು ಮಾಡಗಿರಿ ಉಚ್ಚಾಟನೆಗೆ ಆಗ್ರಹಿಸುವವರಿಂದಲೇ ಪಕ್ಷ ವಿರೋಧಿ ಚಟುವಟಿಕೆ -ರಮೇಶ್. ಜಯಧ್ವಜ ನ್ಯೂಸ್, ರಾಯಚೂರು, ಮೇ.26- ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸುವವರಿಂದಲೆ ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ನರಸಿಂಹಲು ಮಾಡಗಿರಿ ಬೆಂಬಲಿಗ ಹಾಗೂ ಸಂಬಂಧಿ ರಮೇಶ್ ಆರೋಪಿಸಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿನ್ನೆ ವಸಂತ ಕುಮಾರ್ ಬೆಂಬಲಿಗರಾದ ಅಂಜಿನ್ ಕುಮಾರ್ ಹಾಗೂ ಇತರರು ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು
ಹೇಳಿದ್ದು ಸಮಂಜಸವಲ್ಲ ಬದಲಾಗಿ ವಸಂತಕುಮಾರ್ ರವರೇ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಚಟುವಟಿಕೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ ಅಲ್ಲದೆ ಅವರ ಬೆಂಬಲಿಗರು ಶಿವರಾಜ್ ಪಾಟೀಲ್ ರವರನ್ನು ಚುನಾವಣೆಯಲ್ಲಿ ಜಯಶಾಲಿಯಾದ ನಂತರ ಸನ್ಮಾನಿಸಿರುವ ದಾಖಲೆಗಳಿದ್ದು ಯಾರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎನ್ನುವುದನ್ನು ದಾಖಲೆ ಸಮೇತ ಸಮಯ ಸಂದರ್ಭ ಬಂದಾಗ ಬಹಿರಂಗ ಪಡಿಸುವುದಾಗಿ ಹೇಳಿದರಲ್ಲದೆ ದೇವರ ಮೇಲೆ ಪ್ರಮಾಣ ಮಾಡುವಂತೆ ಸವಾಲು ಹಾಕಿದರು. ನರಸಮ್ಮ ಮಾಡಗಿರಿಯವರಿಗೆ ಈ ಹಿಂದೆ ನಗರಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿ ವಿರೋಧಿಗಳೊಂದಿಗೆ ಸೇರಿ ಪರಾಭವಕ್ಕೆ ಕಾರಣರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ಸಂದರ್ಭದಲ್ಲಿ ಮಣಿಕಂಠ, ಶ್ಯಾಮಸುಂದರ್, ವಿಜಯ್ , ಪ್ರವೀಣ್ ಇನ್ನಿತರರು ಇದ್ದರು.


Comments
Post a Comment