ಶೃತಿ ಸಾಹಿತ್ಯ ಮೇಳದಿಂದ ಶ್ರುತಿ-ಸಂಸ್ಕೃತಿ ಉಪನ್ಯಾಸ ಕಾರ್ಯಕ್ರಮ:

ಆಳವಾದ ಅಧ್ಯಯನದಿಂದ ಮಾತ್ರ  ಪರಿಪೂರ್ಣ ಜ್ಞಾನ ಪ್ರಾಪ್ತಿ -ವಿಜಯಸಿಂಹಾಚಾರ್ಯ

    

ಜಯ ಧ್ವಜ ನ್ಯೂಸ್ ,ರಾಯಚೂರು,ಮೇ.30- ಯಾವುದೇ ವಿಷಯವಿರಲಿ ಆ ವಿಷಯದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದಾಗ ಮಾತ್ರ ಪರಿಪೂರ್ಣ ಜ್ಞಾನ ಲಭಿಸಿ ಸಂಸ್ಕೃತಿ ಹಾಗೂ ಸಂಸ್ಕಾರ ಅನಾವರಣಗೊಳ್ಳುತ್ತದೆ, ಎಂದು ಖ್ಯಾತ ವಿದ್ವಾಂಸರು, ಸಾಹಿತಿಗಳಾದ  ಪಂ. ಸಿ.ಜೆ.ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ ಅವರು ಹೇಳಿದರು.  

ಅವರು ಶ್ರುತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ಶುಕ್ರವಾರದಂದು ಬೆಳಗ್ಗೆ ನಗರದ ಎಸ್‌ ಆರ್. ಕೆ.ಬಿ.ಎಡ್. ಕಾಲೇಜಿನ ಟ್ಯಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ ಶ್ರುತಿ ಸಂಸ್ಕೃತಿ ಕಾರ್ಯಕ್ರಮದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಎಂಬ ವಿಷಯದ ಮೇಲೆ ಮಾತನಾಡಿದರು.


ಸಾಧನೆಯಿಂದ ನಿಧಾನವಾಗಿ  ಹುಟ್ಟಿದ ಪ್ರತಿಭೆ  ಕೊನೆಯವರೆಗೂ ಇರುತ್ತದೆ.

ಆದರೆ ಪ್ರಸ್ತುತ ಪ್ರತಿಭೆಗಳು ಹಾಗೂ ಜ್ಞಾನಅಂದೇ ಹುಟ್ಟಿ ಅಂದೆ ಸಾಯುತ್ತವೆ. ಇಂದು ಅತಿಯಾದ ತಂತ್ರಜ್ಞಾನದ ಬಳಕೆಯ ಮೇಲೆ  ಅವಲಂಬಿತಗೊಂಡು ಸ್ವಂತಿಕೆಯು ಮರೆಯಾಗುತ್ತಿದೆ, ಆದ್ದರಿಂದ ಪ್ರತಿಯೊಬ್ಬರೂ ನಿರಂತರ ಸತತ ಅಧ್ಯಯನದ ರೂಢಿಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂತರಾಷ್ಟ್ರೀಯ ಕಲಾವಿದರಾದ ಪಂಡಿತ ನರಸಿಂಹಲು ವಡವಾಟಿಯವರು ಮಾತನಾಡಿ  ಶೃತಿ ಸಾಹಿತ್ಯ ಮೇಳ ಕಳೆದ 40 ವರ್ಷಗಳಿಂದ ರಾಯಚೂರಿನಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಶ್ಲಾಘನೀಯ ವಿಶೇಷವಾಗಿ ಸಾಹಿತಿಗಳನ್ನು ಆಹ್ವಾನಿಸಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ಹೇಳಿದರು. 


   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ಕೆ. ಅಮರೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕೃತಿಯನ್ನು ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು.ಸಂಸ್ಕಾರ ಎಂದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಸಂಸ್ಕಾರ ಎಂದಾಗುತ್ತದೆ ಎಂದು ಹೇಳಿದರು. 

 ಕಾರ್ಯಕ್ರಮದ ಮೊದಲಿಗೆ ಗಾಯಕರುಗಳಾದ ಗುಂಡಾಚಾರ್ಯ ಹೊಳಗುಂದಿ, ಕುಮಾರಿ ವಾಸುಕಿ ಕರಣಂ, ಕುಮಾರಿ ಪೂಜಾ. ಕೆ ಇವರಿಂದ ಭಾವಗೀತೆ ಭಕ್ತಿಗೀತೆ ಜನಪದ ಗೀತೆಗಳ  ಸಂಗೀತ ಕಾರ್ಯಕ್ರಮ ಜರುಗಿತು. 


   ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರುಳಿಧರ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು.

ಸ್ವಾಗತವನ್ನು ಕಾರ್ಯದರ್ಶಿ ಜೆ.ಎಂ.ವಿರೇಶ್ ಅವರು ಮಾಡಿದರು. ಡಾ. ಸವಿತಾ ಹಿರಿಯ ಉಪನ್ಯಾಸಕಿ ಅವರು ವಂದಿಸಿದರು.


ವೇದಿಕೆಯ ಮೇಲೆ ಎಸ್. ಆರ್. ಕೆ. ಬಿ ಎಡ್ ಕಾಲೇಜಿನ ಪ್ರಾಚಾರ್ಯರಾದ ವಿರುಪಾಕ್ಷ ಬಿ. ಎನ್‌. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಿ. ವಿಜಯೇಂದ್ರ.ಕನ್ನಡ ಜಾನಪದ ಪರಿಷತ್ತಿನ ವಿಭಾಗೀಯ ಅಧ್ಯಕ್ಷರಾದ ಶರಣಪ್ಪ ಗೋನಾಳ್, ಕವಿತ್ರಿ ಲಕ್ಷ್ಮಿ ದೇವಿ ಶಾಸ್ತ್ರಿ, ಪ್ರಸನ್ನ ಆಲಂಪಲ್ಲಿ ವಸದೇಂದ್ರ ಸಿರವಾರ್, ಕೊಪ್ರೇಶ್ ದೇಸಾಯಿ, ರಾಘವೇಂದ್ರ ಜಾಗಿರದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog